ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಿಯಪ್ಪ ಜನ್ಮದಿನಕ್ಕೆ ಕನ್ನಡ, ಕೊಡವ ಭಾಷೆಯಲ್ಲಿ ರಾಷ್ಟ್ರಪತಿ ಟ್ವೀಟ್

|
Google Oneindia Kannada News

ನವದೆಹಲಿ, ಜನವರಿ 28: ದೇಶದ ಹೆಮ್ಮೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರ ಜನ್ಮದಿನೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶೇಷವಾಗಿ ಅವರನ್ನು ಸ್ಮರಿಸಿಕೊಂಡಿದ್ದಾರೆ.

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರನ್ನು ನೆನಪಿಸಿಕೊಂಡು ರಾಷ್ಟ್ರಪತಿ ಅವರ ಟ್ವಿಟ್ಟರ್ ಖಾತೆಯಿಂದ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವಲ್ಲದೆ ಕನ್ನಡ ಹಾಗೂ ಕೊಡವ ಭಾಷೆಯಲ್ಲಿಯೂ ಟ್ವೀಟ್ ಮಾಡಲಾಗಿದೆ.

president Ramnath kovind field marshal km cariappa birth anniversary kannada kodava tweet

ಕೊಡಗಿನ ವೀರ ಯೋಧ ಕಾರ್ಯಪ್ಪ, ತಿಮ್ಮಯ್ಯ ಕಂಚಿನ ಪ್ರತಿಮೆ ಅನಾವರಣ ಕೊಡಗಿನ ವೀರ ಯೋಧ ಕಾರ್ಯಪ್ಪ, ತಿಮ್ಮಯ್ಯ ಕಂಚಿನ ಪ್ರತಿಮೆ ಅನಾವರಣ

ಫೀಲ್ಡ್ ಮಾರ್ಷಲ್ ಬೇಟನ್ ಅನ್ನು ಕಾರಿಯಪ್ಪ ಅವರಿಗೆ ನೀಡುವ ಹಳೆಯ ಫೋಟೊವನ್ನು ಕೂಡ ಟ್ವೀಟ್ ಮಾಡಲಾಗಿದೆ. ಬೇಟನ್‌ಅನ್ನು ಕೊಂಡೊಯ್ದ ಮತ್ತು ಅದರೊಂದಿಗೆ ವಂದನೆ ಸಲ್ಲಿಸಿದ ಏಕೈಕ ಫೀಲ್ಡ್ ಮಾರ್ಷಲ್/ಫೈವ್ ಸ್ಟಾರ್ ಜನರಲ್ ಎಂದೂ ಕೋವಿಂದ್ ಅವರು ಸ್ಮರಿಸಿಕೊಂಡಿದ್ದಾರೆ.

ರಾಷ್ಟ್ರಪತಿ ಅವರು ಕೊಡವ ಭಾಷೆಯಲ್ಲಿ ಮಾಡಿರುವ ಟ್ವೀಟ್‌ಗೆ ಕೊಡವ ಸಮುದಾಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ಕೊಡವ ಜನರಿಗೆ ಸಂತಸ ಉಂಟಾಗಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

70ನೇ ಗಣರಾಜ್ಯೋತ್ಸವ : ರಾಷ್ಟ್ರಪತಿ ಭಾಷಣದ ಮುಖ್ಯಾಂಶಗಳು70ನೇ ಗಣರಾಜ್ಯೋತ್ಸವ : ರಾಷ್ಟ್ರಪತಿ ಭಾಷಣದ ಮುಖ್ಯಾಂಶಗಳು

1899ರ ಜನವರಿ 28ರಂದು ಕೊಡಗಿನಲ್ಲಿ ಜನಿಸಿದ ಕಾರಿಯಪ್ಪ, ಫೀಲ್ಡ್ ಮಾರ್ಷಲ್ ಪದವಿಯನ್ನು ಪಡೆದ ಮೊದಲಿಗರು.

ಇಂದು ಸೇನಾ ದಿನ: ಕಾಡುತ್ತಿದೆ ಈ ಸೈನಿಕನ ಕಣ್ಣೀರ ವಿದಾಯದ ಪ್ರೇಮ ಕಥೆ ಇಂದು ಸೇನಾ ದಿನ: ಕಾಡುತ್ತಿದೆ ಈ ಸೈನಿಕನ ಕಣ್ಣೀರ ವಿದಾಯದ ಪ್ರೇಮ ಕಥೆ

ಫೀಲ್ಡ್‌ ಮಾರ್ಷಲ್‌ ಕೆ ಎಂ ಕಾರಿಯಪ್ಪನವರ ಜನ್ಮದಿನದ ಸ್ಮರಣೆ. ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರು ನಮ್ಮ ಅತ್ತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು ಹಾಗೂ ಅತ್ಯಂತ ನೆಚ್ಚಿನ ರಾಷ್ಟ್ರ ನಾಯಕರಾಗಿ ಉಳಿದಿರುತ್ತಾರೆ - ರಾಷ್ಟ್ರಪತಿ ಕೋವಿಂದ್ ಎಂದು ರಾಷ್ಟ್ರಪತಿ ಅವರ ಖಾತೆಯಿಂದ ನಾಲ್ಕು ಭಾಷೆಗಳಲ್ಲಿ ಟ್ವೀಟ್ ಮಾಡಲಾಗಿದೆ.

English summary
President Ramnath Kovind remembered great son of Kodagu Field Marshal KM Cariappa on his birth anniversary. Kovind prises Cariappa in Kannada and Kodava also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X