ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಒಂದಾಗಿ ಕೋವಿಡ್ ವಿರುದ್ಧ ಹೋರಾಡುತ್ತಿದೆ : ರಾಮನಾಥ್ ಕೋವಿಂದ್

|
Google Oneindia Kannada News

ನವದೆಹಲಿ, ಆಗಸ್ಟ್ 14 : "ವಸುಧೈವ ಕುಟುಂಬಕಂ ಎಂಬ ಮಾತು ಈಗ ಸತ್ಯವಾಗಿದೆ. ಇಡೀ ವಿಶ್ವ ಒಂದು ರೋಗದ ವಿರುದ್ಧ ಹೋರಾಟ ಮಾಡುತ್ತಿದೆ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಕ್ರವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆ: ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ? ಇಲ್ಲಿದೆ ಪಟ್ಟಿಸ್ವಾತಂತ್ರ್ಯ ದಿನಾಚರಣೆ: ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ? ಇಲ್ಲಿದೆ ಪಟ್ಟಿ

President Ram Nath Kovind’s Address To The Nation On Eve Of Independence day

"ನಮಗೆ ನಮ್ಮ ಸೈನಿಕರು, ವೈದ್ಯರು, ಆರೋಗ್ಯ ಕಾರ್ಯಕರ್ತರ ಮೇಲೆ ಗೌರವವಿದೆ. ಸೈನಿಕರು ಗಡಿಯಲ್ಲಿ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರು ದೇಶದೊಳಗೆ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ" ಎಂದರು.

ಸ್ವಾತಂತ್ರ್ಯ ದಿನಾಚರಣೆಯಿಂದ ದೂರ ಉಳಿದ ರಾಜ್ಯಪಾಲರು ಸ್ವಾತಂತ್ರ್ಯ ದಿನಾಚರಣೆಯಿಂದ ದೂರ ಉಳಿದ ರಾಜ್ಯಪಾಲರು

"ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವಿಶಿಷ್ಟವಾದದ್ದು. ಒಂದು ರೋಗದ ವಿರುದ್ಧ ದೇಶದ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು. ಈ ರೋಗ ದೇಶದ ವಿವಿಧ ಚಟುವಟಿಕೆಗಳ ಮೇಲೆ ತನ್ನ ಪ್ರಭಾವ ಬೀರಿದೆ" ಎಂದು ರಾಷ್ಟ್ರಪತಿಗಳು ಹೇಳಿದರು.

'ವಂದೇ ಭಾರತ್ ಮಿಷನ್' ವಿಶ್ವದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆ 'ವಂದೇ ಭಾರತ್ ಮಿಷನ್' ವಿಶ್ವದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆ

"ಆರೋಗ್ಯ ಕಾರ್ಯಕರ್ತರು ಸಮಯದ ಮಿತಿಯನ್ನೂ ನೋಡದೆ ಕೋವಿಡ್ ಸೋಂಕಿನ ಜೊತೆ ಹೋರಾಟ ಮಾಡುತ್ತಿದ್ದಾರೆ. ದೇಶದ ಜನರ ಜೀವ ಉಳಿಸಲು ಪ್ರಯತ್ನ ನಡೆಸುತ್ತಿದ್ದಾರೆ" ಎಂದರು.

"ದೇಶ ಆತ್ಮ ನಿರ್ಭರ್ ಭಾರತ್ ಎಂಬ ಘೋಷಣೆಯನ್ನು ಮಾಡಿದೆ. ವಿಶ್ವದ ಇತರ ದೇಶಗಳ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ತನ್ನ ಶಕ್ತಿಯನ್ನು ಸಾಬೀತು ಮಾಡಲಿದೆ" ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದರು.

"ಗಡಿಯಲ್ಲಿನ ಯೋಧರು ಯಾವುದೇ ರಾಷ್ಟ್ರ ಶಾಂತಿಗೆ ಧಕ್ಕೆ ತಂದಲ್ಲಿ ತಕ್ಕ ಉತ್ತರವನ್ನು ನೀಡಲಾಗುತ್ತದೆ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ" ಎಂದು ರಾಮನಾಥ್ ಕೋವಿಂದ್ ಹೇಳಿದರು.

"ದೇಶದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ದೂರದೃಷ್ಟಿಯನ್ನು ಹೊಂದಿದೆ. ಹೊಸ ನೀತಿಯ ಅನುಕೂಲಗಳು ಹಲವು ವರ್ಷಗಳ ಬಳಿಕ ನಮಗೆ ತಿಳಿಯುತ್ತದೆ" ಎಂದು ರಾಷ್ಟ್ರಪತಿಗಳು ಭರವಸೆ ವ್ಯಕ್ತಪಡಿಸಿದರು.

"ಕೋವಿಡ್ ಕಾರಣದಿಂದಾಗಿ ಶೈಕ್ಷಣಿಕ ಸಂಸ್ಥೆಗಳು ಮುಚ್ಚಿರಬಹುದು. ಆದರೆ, ಈ ಕಾಲ ಬೇಗ ಸರಿದು ಹೋಗುತ್ತದೆ. ವಿದ್ಯಾರ್ಥಿಗಳ ಕನಸಿಗೆ ಯಾವುದೇ ಹಿನ್ನಡೆ ಉಂಟಾಗುವುದಿಲ್ಲ" ಎಂದು ರಾಷ್ಟ್ರಪತಿಗಳು ಹೇಳಿದರು.

"ನಮ್ಮ ವಿಜ್ಞಾನ, ಸಂಶೋಧನೆ ಹೆಚ್ಚು ಮುಂದುವರೆದಿದೆ. ಸರಿಯಾದ ಮಾಹಿತಿ, ಮುನ್ನೆಚ್ಚರಿಕೆ ಮುಂತಾದ ಕಾರಣಗಳಿಂದಾಗಿ ಚಂಡಮಾರುತ ಅಪ್ಪಳಿಸಿದ ಪಶ್ಚಿಮ ಬಂಗಾಳ, ಒಡಿಶಾ ರಾಜ್ಯದಲ್ಲಿ ನಷ್ಟವನ್ನು ಕಡಿಮೆ ಮಾಡಲು ಸಾಧ್ಯವಾಯಿತು" ಎಂದರು.

"ಕೋವಿಡ್ ಸಂದರ್ಭದಲ್ಲಿ ಭಾರತೀಯ ರೈಲ್ವೆ ಉತ್ತಮ ಕೆಲಸ ಮಾಡಿದೆ. ಸರಕು ಸೇವೆಗಳ ಸಾಗಣೆ, ಕಾರ್ಮಿಕರ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ರೈಲುಗಳ ಸಂಚಾರವನ್ನು ನಡೆಸಿದೆ" ಎಂದು ರಾಷ್ಟ್ರಪತಿಗಳು ತಿಳಿಸಿದರು.

"ಮನೆಯಿಂದಲೇ ಕೆಲಸ ಮಾಡುವುದು ದೇಶದ ಹಲವಾರು ಕ್ಷೇತ್ರದಲ್ಲಿ ಜಾರಿಯಲ್ಲಿದೆ. ತಂತ್ರಜ್ಞಾನ ಇದಕ್ಕೆ ನಮಗೆ ಸಹಾಯ ಮಾಡಿದೆ. ಕೋವಿಡ್ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆಗೆ ಹಿನ್ನಡೆಯಾಗದಂತೆ ಕೆಲಸ ಸಾಗುತ್ತಿದೆ. ಯುವ ಸಮುದಾಯ ಹೊಸ ಸವಾಲುಗಳಿಗೆ ಒಗ್ಗಿಕೊಂಡಿದೆ" ಎಂದರು.

"2020 ನಮಗೆ ಹಲವು ಪಾಠಗಳನ್ನು ಕಲಿಸಿದೆ. ಯಾವುದೋ ಒಂದು ಕಣ್ಣಿಗೆ ಕಾರಣ ವೈರಸ್ ನಮ್ಮೆಲ್ಲರನ್ನೂ ಒಂದಾಗಿಸಿದೆ. ಮಾನವನು ಪ್ರಕೃತಿ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ತಿದ್ದಿಕೊಂಡು ಮುನ್ನೆಡೆಯಲು ಸಮಯ ಇನ್ನೂ ಬಾಕಿ ಇದೆ ಎಂದು ಅನ್ನಿಸುತ್ತಿದೆ" ಎಂದು ರಾಷ್ಟ್ರಪತಿಗಳು ಹೇಳಿದರು.

English summary
Here is the President Ram Nath Kovind speech on the eve of 74th Independence day in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X