ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರದ ಅಭಿವೃದ್ದಿಗೆ ಎಲ್ಲರೂ ಪಣ ತೊಡೋಣ : ರಾಷ್ಟ್ರಪತಿ ಭಾಷಣ

By Gururaj
|
Google Oneindia Kannada News

Recommended Video

ರಾಷ್ಟ್ರ ಅಭಿವೃದ್ದಿ ಬಗ್ಗೆ ರಾಷ್ಟ್ರಪತಿಗಳ ಭಾಷಣ..! | Oneindia Kannada

ನವದೆಹಲಿ, ಆಗಸ್ಟ್ 14 : 'ರಾಷ್ಟ್ರದ ಅಭಿವೃದ್ದಿಗೆ ಎಲ್ಲರೂ ಪಣ ತೊಡಬೇಕಿದೆ. ದೇಶದಲ್ಲಿ ನಿರುದ್ಯೋಗ ತೊಲಗಬೇಕು, ಬಡತನ ನಿವಾರಣೆಯಾಗಬೇಕು' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದರು.

72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ರಾಮನಾಥ್ ಕೋವಿಂದ್ ಮಂಗಳವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. 'ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನ ಪಾಲಿಗೆ ಪವಿತ್ರವಾದ ದಿನ. ನಮ್ಮ ತ್ರಿವರ್ಣ ಧ್ವಜ ದೇಶದ ಅಸ್ಮಿತೆಯ ಸಂಕೇತ' ಎಂದು ಬಣ್ಣಿಸಿದರು.

ಆಗಸ್ಟ್ 15; ಭಾರತವಲ್ಲದೆ ಇನ್ನೂ ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ದೊರೆತ ದಿನಆಗಸ್ಟ್ 15; ಭಾರತವಲ್ಲದೆ ಇನ್ನೂ ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ದೊರೆತ ದಿನ

ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ರಾಷ್ಟ್ರಪತಿಗಳು, 'ನಮ್ಮ ಪೂರ್ವಜರ ತ್ಯಾಗ, ಬಲಿದಾನದಿಂದಾಗಿ ನಮಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ಸಾಗಬೇಕಿದೆ' ಎಂದರು.

President Ram Nath Kovind

ಸ್ವಾತಂತ್ರ್ಯ ಭಾರತದ ಆಶಯ ಈಡೇರುವುದು ಯಾವಾಗ?ಸ್ವಾತಂತ್ರ್ಯ ಭಾರತದ ಆಶಯ ಈಡೇರುವುದು ಯಾವಾಗ?

ರಾಷ್ಟ್ರಪತಿಗಳ ಭಾಷಣದ ಮುಖ್ಯಾಂಶಗಳು

* ನಮ್ಮ ರೈತರು ಜನರ ಹಸಿವು ನೀಗಿಸಲು ಆಹಾರವನ್ನು ಉತ್ಪಾದಿಸುತ್ತಾರೆ. ಅವರ ಆದಾಯ ದ್ವಿಗುಣವಾಗಬೇಕಿದೆ. ಅನ್ನದಾತರ ಏಳಿಗೆಗೆ ನಾವು ಶ್ರಮಿಸುವ ಮೂಲಕ ಸ್ವಾತಂತ್ರ್ಯ ಯೋಧರ ಕನಸನ್ನು ನನಸು ಮಾಡಬೇಕಿದೆ.

* ಒಂದು ಕಡೆ ರೈತರು ಆಹಾರ ಬೆಳೆದು ದೇಶವನ್ನು ಕಾಪಾಡುತ್ತಿದ್ದಾರೆ. ಮತ್ತೊಂದು ಕಡೆ ಸೈನಿಕರು ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ಕಾಪಾಡುತ್ತಿದ್ದಾರೆ. ಅವರ ಕಾರ್ಯವನ್ನು ನಾವು ಕೊಂಡಾಡಬೇಕು.

* ಮಹಾತ್ಮಾ ಗಾಂಧೀಜಿ ಅವರು ಅಹಿಂಸೆ ಎನ್ನುವ ಅಸ್ತ್ರವನ್ನು ನೀಡಿದ್ದಾರೆ. ಗಾಂಧೀಜಿ ಅವರ ಆಲೋಚನೆಗಳ ಆಳವನ್ನು ನಾವು ಅರ್ಥ ಮಾಡಿಕೊಳ್ಳಬೇಕು.

* ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಕ್ಟೋಬರ್ 2ರ ಗಾಂಧಿ ಜಯಂತಿ ಮಹತ್ವ ಪಡೆದುಕೊಂಡಿದೆ. ಅಕ್ಟೋಬರ್ 2ರಂದು ಗಾಂಧೀಜಿ ಅವರ 150ನೇ ಜನ್ಮದಿನೋತ್ಸವವಾಗಿದೆ.

English summary
President of India Ram Nath Kovind on Tuesday address to the nation on the eve of India's 72nd Independence Day. In his speech he recalled Mahatma Gandhi's most noble mantra on the power of ahinsa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X