• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯಾ. ಎನ್‌ವಿ ರಮಣ ಮುಂದಿನ ಸಿಜೆಐ: ರಾಷ್ಟ್ರಪತಿ ಕೋವಿಂದ್ ಅಂಕಿತ

|
Google Oneindia Kannada News

ನವದೆಹಲಿ, ಏಪ್ರಿಲ್ 6: ನಿರೀಕ್ಷೆಯಂತೆಯೇ ಸುಪ್ರೀಂಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ (ಸಿಜೆಐ) ಎನ್‌ವಿ ರಮಣ ಅವರನ್ನು ನೇಮಿಸಲಾಗಿದೆ. ಹಾಲಿ ಸಿಜೆಐ ಶರದ್ ಅರವಿಂದ್ ಬೋಬ್ಡೆ ಅವರ ಅಧಿಕಾರಾವಧಿ ಏಪ್ರಿಲ್ 23ರಂದು ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯನ್ನಾಗಿ ಎನ್‌ವಿ ರಮಣ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಈ ಸಂಬಂಧ ಆದೇಶ ಹೊರಡಿಸಿದ್ದು, ಏಪ್ರಿಲ್ 24ರಿಂದ ಜಾರಿಯಾಗುವಂತೆ ಸುಪ್ರೀಂಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಎನ್‌ವಿ ರಮಣ ಅವರನ್ನು ನೇಮಕ ಮಾಡಲಾಗಿದೆ.

ಮುಂದಿನ ಸಂಭಾವ್ಯ ಸಿಜೆಐ: ಆಂಧ್ರಪ್ರದೇಶದ ಎನ್‌ವಿ ರಮಣ ವ್ಯಕ್ತಿಚಿತ್ರಮುಂದಿನ ಸಂಭಾವ್ಯ ಸಿಜೆಐ: ಆಂಧ್ರಪ್ರದೇಶದ ಎನ್‌ವಿ ರಮಣ ವ್ಯಕ್ತಿಚಿತ್ರ

ಆಂಧ್ರಪ್ರದೇಶ ಮೂಲದ ನೂತಲಪತಿ ವೆಂಕಟ ರಮಣ ಅವರು ಸುಪ್ರೀಂಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದು, ಅವರು 2022ರ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಅವರು ಸಂಪ್ರದಾಯದಂತೆ ತಮ್ಮ ನಂತರದ ಅತಿ ಹಿರಿಯ ನ್ಯಾಯಮೂರ್ತಿ ಎನ್‌ವಿ ರಮಣ ಹೆಸರನ್ನು ಮುಂದಿನ ಸಿಜೆಐ ಹುದ್ದೆಗೆ ಕಳೆದ ತಿಂಗಳು ಶಿಫಾರಸು ಮಾಡಿದ್ದರು. ಈ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ.

ಮುಂದಿನ ಸಿಜೆಐ ಯಾರು? ಉತ್ತರಾಧಿಕಾರಿ ಹೆಸರು ಶಿಫಾರಸು ಮಾಡಿದ ಬೋಬ್ಡೆ ಮುಂದಿನ ಸಿಜೆಐ ಯಾರು? ಉತ್ತರಾಧಿಕಾರಿ ಹೆಸರು ಶಿಫಾರಸು ಮಾಡಿದ ಬೋಬ್ಡೆ

   #Covid19Update: 24 ಗಂಟೆಗಳಲ್ಲಿ ದೇಶದಲ್ಲಿ 96,982 ಜನರಿಗೆ ಕೊರೊನಾ ಸೋಂಕು ದೃಢ | Oneindia Kannada

   ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ಎನ್‌ವಿ ರಮಣ ಅವರನ್ನು 2014ರ ಫೆಬ್ರವರಿ 17ರಂದು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಮಾಡಲಾಗಿತ್ತು.

   English summary
   President Ram Nath Kovind appoints Justice NV Ramana as the next Chief Justice of India effective April 24.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X