ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣ, ಮುಖ್ಯಾಂಶಗಳು

|
Google Oneindia Kannada News

ನವದೆಹಲಿ, ಜನವರಿ 31 : 'ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರದ ಯೋಜನೆಗಳು ಬಡ ಜನರನ್ನು ತಲುಪುತ್ತಿದೆ ಎಂದು ಘೋಷಣೆ ಮಾಡಲು ಸಂತಸವಾಗುತ್ತಿದೆ' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದರು. ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು. ಶುಕ್ರವಾರ ಹಣಕಾಸು ಸಚಿವ ಪಿಯೂಷ್ ಘೋಯೆಲ್ 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.

ರೈತ ಪರ ಬಜೆಟ್ ಮಂಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ ರೈತ ಪರ ಬಜೆಟ್ ಮಂಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ

'ಆರೋಗ್ಯದ ವಿಚಾರದಲ್ಲಿ ಹೆಚ್ಚು ಖರ್ಚು ಮಾಡಿದಂತೆ ಬಡವ ಮತ್ತಷ್ಟು ಬಡವನಾಗುತ್ತಾ ಹೋಗುತ್ತಾನೆ. ಅದಕ್ಕಾಗಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದೆ. ಕಳೆದ ನಾಲ್ಕು ತಿಂಗಳಿನಲ್ಲಿ 10 ಲಕ್ಷಕ್ಕೂ ಅಧಿಕ ಜನರು ಆಸ್ಪತ್ರೆಗಳಲ್ಲಿ ಈ ಯೊಜನೆಯಡಿ ಸಹಾಯ ಪಡೆದಿದ್ದಾರೆ' ಎಂದರು.

President Ram Nath Kovind address joint session of parliament

ಭಾಷಣದ ಮುಖ್ಯಾಂಶಗಳು

* ಜನಧನ್ ಯೋಜನೆಯಡಿ 34 ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ದೇಶದ ಪ್ರತಿ ಕುಟುಂಬ ಬ್ಯಾಂಕ್ ಜೊತೆ ಸಂಪರ್ಕ ಹೊಂದಿದೆ. ಅಂತರಾಷ್ಟ್ರೀಯ ಸಂಸ್ಥೆಗಳು ನೀಡಿದ ವರದಿಗಳ ಪ್ರಕಾರ 2014 ರಿಂದ 2017ರ ತನಕ ಶೇ 55ರಷ್ಟು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.

ಬಜೆಟ್‌ಗೂ ಮುನ್ನ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆಬಜೆಟ್‌ಗೂ ಮುನ್ನ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ

* 2019 ಭಾರತದ ಪಾಲಿಗೆ ಅತ್ಯಂತ ಮಹತ್ವದ ವರ್ಷವಾಗಿದೆ. ದೇಶದ ನಾಗರೀಕರಾಗಿ ನಾವು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಎಲ್ಲರೂ ತಪ್ಪದೇ ಮತದಾನವನ್ನು ಮಾಡೋಣ ಎಂದು ಕರೆ ನೀಡಿದರು.

* ದೂರದೃಷ್ಟಿಯ ಆಲೋಚನೆಯೊಂದಿಗೆ ಜಿಎಸ್‌ಟಿಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಜಾರಿಗೆ ಬಂದ ಬಳಿಕ ದೇಶದ ತೆರಿಗೆ ದಾರರು ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದಾರೆ.

English summary
President of India Ram Nath Kovind on January 31, 2019 addresses the joint session of parliament. Budget 2019-20 will be presented on February 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X