ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತಾಜಿ ಸುಭಾಷ್‌ ಚಂದ್ರ ಬೋಸ್ ಎಂದು ಸಿನಿಮಾ ನಟನ ಚಿತ್ರ ಅನಾವರಣ ಮಾಡಿದ ರಾಷ್ಟ್ರಪತಿ

|
Google Oneindia Kannada News

ನವದೆಹಲಿ, ಜನವರಿ 25: ರಾಷ್ಟ್ರಪತಿ ರಾಮನಾಥ್ ಕೋವಿಡ್ ಅವರು ರಾಷ್ಟ್ರಪತಿ ಭವನದಲ್ಲಿ ಜ. 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಪ್ರಯುಕ್ತ ಅವರ ವರ್ಣಚಿತ್ರವನ್ನು ಅನಾವರಣಗೊಳಿಸಿದ್ದರು. ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟ್ಟರ್ ಖಾತೆ ಕೂಡ ಈ ಚಿತ್ರವನ್ನು ಹಂಚಿಕೊಂಡಿತ್ತು.

ಆದರೆ, ಈ ಚಿತ್ರ ಈಗ ತೀವ್ರ ಟೀಕೆಗೆ ಗುರಿಯಾಗಿದೆ. ಏಕೆಂದರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅನಾವರಣಗೊಳಿಸಿದ ಚಿತ್ರ ವಾಸ್ತವವಾಗಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಲ್ಲ. ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಸಾವಿನ ಕುರಿತು ಶ್ರೀಜಿತ್ ಮುಖರ್ಜಿ ಅವರ ನಿರ್ದೇಶನದಲ್ಲಿ ತಯಾರಾದ ಬಂಗಾಳಿ ಚಿತ್ರದಲ್ಲಿ ನೇತಾಜಿಯ ಪಾತ್ರ ವಹಿಸಿದ್ದ ಪ್ರೊಸೆಂಜಿತ್ ಚಟರ್ಜಿ ಅವರ ಚಿತ್ರವಿದು.

ಇಂದು ನೇತಾಜಿ ಜನ್ಮದಿನ: ಸುಭಾಷ್ ಚಂದ್ರ ಬೋಸ್ ಅವರ ನೆಚ್ಚಿನ ತಿನಿಸು ಯಾವುದು ಗೊತ್ತೇ?ಇಂದು ನೇತಾಜಿ ಜನ್ಮದಿನ: ಸುಭಾಷ್ ಚಂದ್ರ ಬೋಸ್ ಅವರ ನೆಚ್ಚಿನ ತಿನಿಸು ಯಾವುದು ಗೊತ್ತೇ?

'ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರವನ್ನು ಅನಾವರಣಗೊಳಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವರ್ಷಾಚರಣೆಯ ಆರಂಭದ ಅಂಗವಾಗಿ ಈ ಚಿತ್ರದ ಅನಾವರಣ ಮಾಡಲಾಗಿದೆ' ಎಂದು ರಾಷ್ಟ್ರಪತಿ ಭವನ ಹೇಳಿಕೆ ನೀಡಿತ್ತು.

ಸುಭಾಷ್ ಚಂದ್ರ ಬೋಸ್ ಅವರ ಹಳೆಯ ಚಿತ್ರವನ್ನು ನೋಡಿದವರಿಗೆ ಈ ಚಿತ್ರ ಅವರನ್ನು ಹೋಲುವುದಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು ಮತ್ತು ಪ್ರಮುಖ ವ್ಯಕ್ತಿಗಳು, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿ ಭವನವನ್ನು ಲೇವಡಿ ಮಾಡಿದ್ದಾರೆ. ಮುಂದೆ ಓದಿ.

 ಬ್ರೆಜಿಲ್‌ಗೆ ಕೊರೊನಾ ಲಸಿಕೆ ಪೂರೈಕೆ: 'ಗೌರವ ನಮ್ಮದು' ಎಂದ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್‌ಗೆ ಕೊರೊನಾ ಲಸಿಕೆ ಪೂರೈಕೆ: 'ಗೌರವ ನಮ್ಮದು' ಎಂದ ಪ್ರಧಾನಿ ನರೇಂದ್ರ ಮೋದಿ

ಭಾರತವನ್ನು ದೇವರೇ ಕಾಪಾಡಲಿ

ಭಾರತವನ್ನು ದೇವರೇ ಕಾಪಾಡಲಿ

'ರಾಮಮಂದಿರಕ್ಕೆ ಐದು ಲಕ್ಷ ರೂ ದೇಣಿಗೆ ನೀಡಿದ ಬಳಿಕ ರಾಷ್ಟ್ರಪತಿಯವರು ನೇತಾಜಿ ಅವರ ಬಯೋಪಿಕ್‌ನಲ್ಲಿ ನಟಿಸಿದ್ದ ಪ್ರೊಸೆಂಜಿತ್ ಅವರ ಚಿತ್ರವನ್ನು ಅನಾವರಣಗೊಳಿಸುವ ಮೂಲಕ ನೇತಾಜಿ ಅವರಿಗೆ ಗೌರವ ಅರ್ಪಿಸಿದ್ದಾರೆ. ದೇವರು ಭಾರತವನ್ನು ಕಾಪಾಡಲಿ (ಏಕೆಂದರೆ ಭಾರತ ಸರ್ಕಾರಕ್ಕೆ ಖಂಡಿತವಾಗಿಯೂ ಸಾಧ್ಯವಿಲ್ಲ)' ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಟ್ವೀಟ್ ಮಾಡಿದ್ದಾರೆ.

ಅದು ನೇತಾಜಿ ಅವರಲ್ಲ

ಅದು ನೇತಾಜಿ ಅವರಲ್ಲ

'ಈ ದೇಶದಲ್ಲಿನ ಸರ್ಕಾರದ ವ್ಯವಹಾರಗಳು ಈ ಸ್ಥಿತಿಯಲ್ಲಿದೆ. ನನ್ನನ್ನು ನಂಬಿ, ಭಾರತದ ರಾಷ್ಟ್ರಪತಿಯವರು ರಾಷ್ಟ್ರಪತಿ ಭವನದಲ್ಲಿ ಪ್ರೊಸೆಂಜಿತ್ ಚಟರ್ಜಿ (ಬುಂಬಡಾ) ಅವರ ಚಿತ್ರ ಅನಾವರಣಗೊಳಿಸಿದ್ದಾರೆ, ನೇತಾಜಿ ಅವರದ್ದಲ್ಲ' ಎಂದು ಡಾ. ಆದಿಲ್ ಹೊಸೈನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅಜಯ್ ದೇವಗನ್, ಭಗತ್ ಸಿಂಗ್ ಅಲ್ಲ!

ಅಜಯ್ ದೇವಗನ್, ಭಗತ್ ಸಿಂಗ್ ಅಲ್ಲ!

'ಇದು ನಂಬಲಸಾಧ್ಯವಾದ ಕುಚೋದ್ಯ. ರಾಷ್ಟ್ರಪತಿ ಅವರು ಅನಾವರಣಗೊಳಿಸಿದ ಚಿತ್ರ ನೇತಾಜಿ ಅವರ ಪಾತ್ರ ನಿಭಾಯಿಸಿದ್ದವರದ್ದು (ಆ ಕಣ್ಣುಗಳನ್ನು ನೋಡಿ). ಇದು ಭಗತ್ ಸಿಂಗ್ ಎಂದು ಅಜಯ್ ದೇವಗನ್ ಅವರ ಭಾವಚಿತ್ರವನ್ನು ಅನಾವರಣಗೊಳಿಸುವ ರೀತಿಯಂತಾಗಿದೆ' ಎಂದು ಜಾಯ್ ಎಂಬುವವರು ಟೀಕಿಸಿದ್ದಾರೆ.

ಇವರು ಬೆನ್‌ಕಿಂಗ್ಸ್‌ಲೇ!

ಇವರು ಬೆನ್‌ಕಿಂಗ್ಸ್‌ಲೇ!

ಆತ್ಮೀಯ ರಾಷ್ಟ್ರಪತಿ ಭವನ, ಇವರು ನಟ ಬೆನ್ ಕಿಂಗ್ಸ್‌ಲೇ, ಮಹಾತ್ಮ ಗಾಂಧಿ ಅಲ್ಲ. ಮುಂದಿನ ಬಾರಿ ಚಿತ್ರ ಅನಾವರಣಗೊಳಿಸುವ ಮುನ್ನ ಕೇಳಿ ತಿಳಿದುಕೊಳ್ಳಿ. ನಿಮಗೆ ನಾಚಿಕೆಯಾಗುವುದು ತಪ್ಪುತ್ತದೆ ಎಂದು ಪತ್ರಕರ್ತೆ ಸ್ವಾತಿ ಚತುರ್ವೇದಿ ಹೇಳಿದ್ದಾರೆ. ಗಾಂಧಿ ಚಿತ್ರದಲ್ಲಿ ಮಹಾತ್ಮ ಗಾಂಧಿ ಪಾತ್ರ ನಿಭಾಯಿಸಿದ್ದ ಕಿಂಗ್ಸ್‌ಲೇ ಅವರನ್ನು ಗಾಂಧಿ ಎಂದು ತಪ್ಪು ತಿಳಿಯಬೇಡಿ ಎಂದು ವ್ಯಂಗ್ಯವಾಡಿದ್ದಾರೆ.

English summary
President Ram Nath Kovind on Saturday has unveil a photo of Bengali actor Prosenjit Chatterjee as Netaji Subhash Chandra Bose at Rashtrapati Bhavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X