ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಸೇರಿ 5 ರಾಜ್ಯಗಳಿಗೆ ಹೊಸ ರಾಜ್ಯಪಾಲರು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ತಮಿಳುನಾಡು, ಬಿಹಾರ, ಅಸ್ಸಾಂ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳಿಗೆ ಐವರು ನೂತನ ರಾಜ್ಯಪಾಲರನ್ನು ನೇಮಿಸಿರುವ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಿಗೆ ಲೆಫ್ಟೆನೆಂಟ್ ಗವರ್ನರ್ ಅವರನ್ನು ನೇಮಿಸಿದ್ದಾರೆ.

ಬಕ್ರೀದ್: ಮುಸ್ಲಿಂ ಬಾಂಧವರಿಗೆ ಮೋದಿ, ಕೋವಿಂದ್, ಸಿದ್ದು ಶುಭಹಾರೈಕೆಬಕ್ರೀದ್: ಮುಸ್ಲಿಂ ಬಾಂಧವರಿಗೆ ಮೋದಿ, ಕೋವಿಂದ್, ಸಿದ್ದು ಶುಭಹಾರೈಕೆ

ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ ಅವರನ್ನು ಅರುಣಾಚಲದ ರಾಜ್ಯಪಾಲರಾಗಿ ನೇಮಿಸಿರುವ ಕೋವಿಂದ್, ಅರುಣಾಚಲ ಪ್ರದೇಶಕ್ಕೆ ಬಿ.ಡಿ. ಮಿಶ್ರಾ, ಬಿಹಾರ್ ಗೆ ಸತ್ಯಪಾಲ್ ಮಲಿಕ್, ತಮಿಳುನಾಡಿಗೆ ಬನ್ವಾರಿಲಾಲ್ ಪುರೋಹಿತ್, ಅಸ್ಸಾಂಗೆ ಜಗದೀಶ್ ಮುಖಿ ಹಾಗೂ ಮೇಘಾಲಯಕ್ಕೆ ಗಂಗಾ ಪ್ರಸಾದ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

President Kovind Appoints 5 Governors, 1 Lieutenant Governor

ಅನೇಕ ದಿನಗಳಿಂದ ಪೂರ್ಣ ಪ್ರಮಾಣದ ರಾಜ್ಯಪಾಲರಿಲ್ಲದೇ ಉಳಿದಿದ್ದ ತಮಿಳುನಾಡಿಗೆ ಈಗ ಆ ಕೊರತೆ ನೀಗಿದಂತಾಗಿದೆ.

ಈವರೆಗೂ, ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ವಿದ್ಯಾಸಾಗರ್ ರಾವ್ ಅವರನ್ನು ತಮಿಳುನಾಡು ರಾಜ್ಯಪಾಲರಾಗಿ ನಿಯೋಜಿಸಲಾಗಿತ್ತು. ಇದೀಗ, ಆ ರಾಜ್ಯಕ್ಕೆ ಬನ್ವಾರಿಲಾಲ್ ಪುರೋಹಿತ್ ಅವರನ್ನು ನೇಮಿಸಲಾಗಿರುವುದರಿಂದ ವಿದ್ಯಾಸಾಗರ್ ಅವರ ಮೇಲಿದ್ದ ಹೆಚ್ಚುವರಿ ಹೊರೆಯೊಂದು ಇಳಿದಂತಾಗಿದೆ.

English summary
President Ram Nath Kovind today appointed five governors for the states of Bihar, Tamil Nadu, Assam, Meghalaya and Arunachal Pradesh. Lieutenant Governor for Andaman and Nicobar Islands was also appointed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X