ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ರೌಪದಿ ಮುರ್ಮು ಬಿಜೆಪಿಯ 'ಡಮ್ಮಿ' ರಾಷ್ಟ್ರಪತಿ ಅಭ್ಯರ್ಥಿ: ಪುದುಚೇರಿ ಕಾಂಗ್ರೆಸ್ ಟ್ವೀಟ್

|
Google Oneindia Kannada News

ಭಾರತೀಯ ಜನತಾ ಪಕ್ಷ (ಬಿಜೆಪಿ) ಇತ್ತೀಚೆಗೆ ಖ್ಯಾತ ರಾಜಕಾರಣಿ ಮತ್ತು ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರನ್ನು ಮುಂಬರುವ ರಾಷ್ಟ್ರಪತಿ ಚುನಾವಣೆ 2022 ಕ್ಕೆ ತಮ್ಮ ಅಭ್ಯರ್ಥಿ ಎಂದು ಘೋಷಿಸಿದೆ. ಈ ಬಗ್ಗೆ ಪುದುಚೇರಿ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ವಿವಾದಾತ್ಮಕ ಕಾಮೆಂಟ್ ಮಾಡಿದೆ.

ಇದೀಗ ಅಳಿಸಲಾದ ಟ್ವೀಟ್‌ನಲ್ಲಿ ಪುದುಚೇರಿ ಕಾಂಗ್ರೆಸ್ ಹೀಗೆ ಬರೆದಿತ್ತು. ಆಡಳಿತಾರೂಢ ಬಿಜೆಪಿಯು ದ್ರೌಪದಿ ಮುರ್ಮು ಅವರನ್ನು "ಡಮ್ಮಿ" ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಲು ಬಯಸುತ್ತದೆ ಎಂದು ಹೇಳಿದೆ. ರಾಷ್ಟ್ರಪತಿ ಚುನಾವಣೆಗಳು ಮುನ್ನೆಲೆಯಲ್ಲಿರುವಂತೆಯೇ ಕೇಂದ್ರವು "ಎಸ್‌ಸಿ / ಎಸ್‌ಟಿ ಸಮುದಾಯವನ್ನು ವಂಚಿಸಲು" ಬಯಸುತ್ತದೆ ಎಂದು ಆರೋಪಿಸಿದೆ.

ಐಎನ್‌ಸಿ ಪುದುಚೇರಿಯ ಈ ಕಾಮೆಂಟ್ ಬಿಜೆಪಿಯಿಂದ ಸಾಕಷ್ಟು ಟೀಕೆಗೆ ಗುರಿಯಾಯಿತು. ಆಡಳಿತ ಪಕ್ಷವು ಪ್ರತಿಪಕ್ಷಗಳು ಬುಡಕಟ್ಟು ಸಮುದಾಯ ಮತ್ತು ಮಹಿಳೆಯರನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದೆ. ಕಾಂಗ್ರೆಸ್‌ನ ಟ್ವೀಟ್‌ಗೆ ಸಿಡಿಮಿಡಿಗೊಂಡ ಬಿಜೆಪಿ, ವಿರೋಧ ಪಕ್ಷವು ಹೆಸರಾಂತ ಮಹಿಳಾ ಬುಡಕಟ್ಟು ನಾಯಕಿಯನ್ನು ಅವಮಾನಿಸುತ್ತಿದೆ ಎಂದು ಹೇಳಿದೆ.

ಪುದುಚೇರಿ ಕಾಂಗ್ರೆಸ್ ಟ್ವೀಟ್

ಪುದುಚೇರಿ ಕಾಂಗ್ರೆಸ್ ಟ್ವೀಟ್

ರಾಷ್ಟ್ರೀಯ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, "ಕಾಂಗ್ರೆಸ್ ಬುಡಕಟ್ಟು ಸಮುದಾಯ ಮತ್ತು ಮಹಿಳೆಯರನ್ನು ಅವಮಾನಿಸಲು ಪ್ರಾರಂಭಿಸಿದೆ. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್ ದ್ರೌಪದಿ ಮುರ್ಮು ಜಿ ಅವರನ್ನು "ಡಮ್ಮಿ" ಎಂದು ಹೇಳಿದೆ. ಜಾರ್ಖಂಡ್ ಸರ್ಕಾರಕ್ಕೆ ಒಡಿಶಾದ ಮೊದಲ ಮಹಿಳಾ ಬುಡಕಟ್ಟು ನಾಯಕಿ, 2 ಬಾರಿ ಶಾಸಕಿ, ಅವರು ಅವಮಾನಕ್ಕೊಳಗಾಗಿದ್ದಾರೆ'' ಎಂದು ದೂರಿದೆ.

ಎಸ್‌ಸಿ/ಎಸ್‌ಟಿಗೆ ಮೋಸ

ಎಸ್‌ಸಿ/ಎಸ್‌ಟಿಗೆ ಮೋಸ

ಐಎನ್‌ಸಿ ಪೋಸ್ಟ್ ಮಾಡಿದ ಟ್ವೀಟ್‌ ಲಿಂಕ್ ಅನ್ನು ಸಹ ಪೂನಾವಾಲಾ ಹಂಚಿಕೊಂಡಿದ್ದಾರೆ. ಅದನ್ನು ಈಗ ಅಳಿಸಲಾಗಿದೆ. ಬಿಜೆಪಿ ನಾಯಕ ಪೋಸ್ಟ್ ಮಾಡಿದ ಟ್ವೀಟ್‌ನ ಸ್ಕ್ರೀನ್‌ಶಾಟ್ ಪ್ರಕಾರ, "ಬಿಜೆಪಿಗೆ ಡಮ್ಮಿ ರಾಷ್ಟ್ರಪತಿ ಬೇಕು ಮತ್ತು ಅವರು ಎಸ್‌ಸಿ/ಎಸ್‌ಟಿಗೆ ಮೋಸ ಮಾಡಲು ಬಯಸುತ್ತಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ''.

ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ

ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ

ಮುಂಬರುವ ರಾಷ್ಟ್ರಪತಿ ಚುನಾವಣೆ 2022 ರ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಪ್ರತಿಪಕ್ಷಗಳು ಘೋಷಿಸಿದ ಕೂಡಲೇ, ಬಿಜೆಪಿ ಮುಂದಿನ ತಿಂಗಳು ಚುನಾವಣೆಗೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿತು.

ಅವರ ರಾಜಕೀಯ ಹಿನ್ನೆಲೆ

ಅವರ ರಾಜಕೀಯ ಹಿನ್ನೆಲೆ

ಮುರ್ಮು ಒಡಿಶಾದಿಂದ 2 ಬಾರಿ ಶಾಸಕರಾಗಿದ್ದು, ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಪಿ) ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. BJD-BJP ಸಮ್ಮಿಶ್ರದಲ್ಲಿ, ಮುರ್ಮು 2000 ಮತ್ತು 2002 ರ ನಡುವೆ ವಾಣಿಜ್ಯ ಮತ್ತು ಸಾರಿಗೆ ಇಲಾಖೆ ಸ್ವತಂತ್ರ ಖಾತೆ ಸಚಿವರಾಗಿ ಮತ್ತು 2002 ರಿಂದ 2004 ರವರೆಗೆ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿಗೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಒಡಿಶಾ ವಿಧಾನಸಭೆಯ ಅತ್ಯುತ್ತಮ ಶಾಸಕಿ ನೀಲಕಂಠ ಪ್ರಶಸ್ತಿಯನ್ನು ಗೆದ್ದರು.

ಮುರ್ಮು ಅವರ 2 ದಶಕಗಳ ರಾಜಕೀಯ ಜೀವನವು ಕೌನ್ಸಿಲರ್ ಆಗಿ ಪ್ರಾರಂಭವಾಯಿತು. ಅವರು ರೈರಂಗಪುರ ರಾಷ್ಟ್ರೀಯ ಸಲಹಾ ಮಂಡಳಿಯ ಉಪಾಧ್ಯಕ್ಷರಾದರು. ಅವರು 2013 ರಲ್ಲಿ ಬಿಜೆಪಿಯ ST ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದರು. 2015 ರಲ್ಲಿ ಅವರು ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾದರು.

English summary
President election: The Bharatiya Janata Party (BJP) has recently announced that the famous politician and tribal leader Draupadi Murmu will be its candidate for the upcoming president election. The official Twitter handle of the Puducherry Congress made a controversial comment on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X