ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ರಾಷ್ಟ್ರಪತಿಯಿಂದ ಕಾರ್ಗಿಲ್‌ ಹುತಾತ್ಮರಿಗೆ ನಮನ

|
Google Oneindia Kannada News

ನವದೆಹಲಿ,ಜುಲೈ. 26: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ 1999 ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸೋಮವಾರ ಅಧಿಕಾರ ವಹಿಸಿಕೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಗಿಲ್‌ ವಿಜಯ ದಿನವನ್ನು ಅಸಾಧಾರಣ ಶೌರ್ಯದ ಸಂಕೇತ ಎಂದು ಬಣ್ಣಿಸಿದರು.

ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ, ಶೌರ್ಯ ಮತ್ತು ಸಂಕಲ್ಪದ ಸಂಕೇತವಾಗಿದೆ. ಭಾರತ ಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ವೀರ ಸೈನಿಕರಿಗೆ ನಾನು ನಮಿಸುತ್ತೇನೆ. ಎಲ್ಲಾ ದೇಶವಾಸಿಗಳು ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಯಾವಾಗಲೂ ಋಣಿಯಾಗಿರುತ್ತಾರೆ. ಜೈ ಹಿಂದ್! ಎಂದು ಮುರ್ಮು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವಿಟರ್‌ನಲ್ಲಿ ದೇಶದ ಎಲ್ಲ ವೀರ ಪುತ್ರರಿಗೆ ವಂದನೆ ಸಲ್ಲಿಸಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ಭಾರತೀಯ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ಮಾತೃಭೂಮಿಯ ರಕ್ಷಣೆಯಲ್ಲಿ ತಮ್ಮ ಶೌರ್ಯ ಮೆರೆದ ದೇಶದ ಎಲ್ಲಾ ವೀರ ಪುತ್ರರಿಗೆ ನನ್ನ ವಂದನೆಗಳು. ಜೈ ಹಿಂದ್! ಎಂದು ಪ್ರಧಾನಿ ಮೋದಿ ಟ್ವಿಟ್‌ ಮಾಡಿದ್ದಾರೆ.

1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಗೌರವಿಸಲು ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ ಅನ್ನು ಜುಲೈ 26 ರಂದು ಆಚರಿಸಲಾಗುತ್ತದೆ. ಹಾಗಾಗಿ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಪ ನಮನ ಸಲ್ಲಿಸಲಾಗುತ್ತದೆ.

ಆಪರೇಷನ್ ವಿಜಯ್‌ನಲ್ಲಿ ಭಾಗವಹಿಸಿದ ಭಾರತೀಯ ಸಶಸ್ತ್ರ ಪಡೆಗಳು ಜುಲೈ 26, 1999 ರಂದು ಪಾಕಿಸ್ತಾನವನ್ನು ಸೋಲಿಸಿದವು. ಅಂದಿನಿಂದ ಸೈನಿಕರ ಹೆಮ್ಮೆ ಮತ್ತು ಶೌರ್ಯವನ್ನು ಸ್ಮರಣೆ ಮಾಡಲು ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಜುಲೈ 26, 1999 ರಂದು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯು ಆಕ್ರಮಿಸಿಕೊಂಡಿದ್ದ ಪರ್ವತವನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾಗಿದ್ದರು.

ಕಾರ್ಗಿಲ್ ಯುದ್ಧವು ಮೇ 8, 1999 ರಿಂದ ಜುಲೈ 26, 1999 ರ ನಡುವೆ ನಡೆಯಿತು. ಪಾಕಿಸ್ತಾನಿ ಸೈನಿಕರು 1998ರಲ್ಲಿ ಚಳಿಗಾಲದಲ್ಲಿ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿ ನಿಯಮ ಉಲ್ಲಂಘಿಸಿದರು. ಕಾರ್ಗಿಲ್‌ನ ದ್ರಾಸ್ ಮತ್ತು ಬಟಾಲಿಕ್‌ನಲ್ಲಿರುವ ಎನ್‌ಎಚ್‌ 1ಎ ಯ ಮೇಲಿರುವ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರು.

 ಪಟ್ಟುಬಿಡದೆ ಉತ್ಸಾಹದಿಂದ ದಾಳಿ

ಪಟ್ಟುಬಿಡದೆ ಉತ್ಸಾಹದಿಂದ ದಾಳಿ

ಸೈನಿಕರು ಭಾರಿ ಕಷ್ಟಗಳನ್ನು ಎದುರಿಸಿ ಅಸಾಧ್ಯವಾದ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಅಪಾಯಗಳ ನಡುವೆಯೇ ಕೆಚ್ಚೆದೆಯ ಸೈನಿಕರು ಶೌರ್ಯ ಮೆರೆದರು. ನಮ್ಮ ಪ್ರದೇಶಗಳ ವಶಮಾಡಿಕೊಳ್ಳಲು ಪಟ್ಟುಬಿಡದೆ ಉತ್ಸಾಹದಿಂದ ದಾಳಿಯನ್ನು ಪ್ರಾರಂಭಿಸಿದರು. ಹೀಗೆ ದಿಗ್ಭ್ರಮೆಗೊಳಿಸುವ ವಿಜಯವನ್ನು ಸಾಧಿಸಿದರು.

 ಹಲವಾರು ಬ್ಯಾಂಡ್‌ಗಳಿಂದ ಪ್ರದರ್ಶನ

ಹಲವಾರು ಬ್ಯಾಂಡ್‌ಗಳಿಂದ ಪ್ರದರ್ಶನ

ಜುಲೈ 24 ರಂದು ಕಾರ್ಗಿಲ್ ಯುದ್ಧ ವೀರರಿಗೆ ಗೌರವ ಸಲ್ಲಿಸಲು ದ್ರಾಸ್ ಪಟ್ಟಣದಲ್ಲಿ "ಏಕ್ ಶಾಮ್ ಶಾಹಿದೋನ್ ಕೆ ನಾಮ್" ಎಂಬ ಶೀರ್ಷಿಕೆಯ ಸಂಗೀತ ಪ್ರದರ್ಶನದಲ್ಲಿ ಹಲವಾರು ಬ್ಯಾಂಡ್‌ಗಳು ಪ್ರದರ್ಶನ ನೀಡಿದವು. ಸ್ಥಳೀಯರು ಮತ್ತು ಭಾರತೀಯ ಸೇನೆಯ ಸಿಬ್ಬಂದಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಭರವಸೆಯ ಹೊಸ ಕಿರಣ: ರಾಜನಾಥ್‌ ಸಿಂಗ್‌

ಭರವಸೆಯ ಹೊಸ ಕಿರಣ: ರಾಜನಾಥ್‌ ಸಿಂಗ್‌

ಜಮ್ಮುವಿನಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಮಾತನಾಡಿ, ಭಾರತವು ಬಲಿಷ್ಠ ಮತ್ತು ಆತ್ಮವಿಶ್ವಾಸದ ರಾಷ್ಟ್ರವಾಗಿ ಮಾರ್ಪಟ್ಟಿದೆ, ತನ್ನ ಜನರ, ಪ್ರದೇಶಗಳ ಮೇಲೆ ಬೀಳುವ ಕೆಟ್ಟ ಕಣ್ಣುಗಳನ್ನು ನಿಗ್ರಹಿಸಲು ರಕ್ಷಿಸಲು ಸುಸಜ್ಜಿತವಾಗಿದೆ. ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆರ್ಟಿಕಲ್ 370ರ ರದ್ದತಿಯು ಜಮ್ಮು ಮತ್ತು ಕಾಶ್ಮೀರದ ಜನರ ಆಕಾಂಕ್ಷೆಗಳಿಗೆ ಭರವಸೆಯ ಹೊಸ ಕಿರಣವನ್ನು ತಂದಿದೆ ಎಂದು ಹೇಳಿದರು.

ಭಾರತ ಪ್ರವೇಶಿಸಿ ನಿಯಮ ಉಲ್ಲಂಘನೆ

ಭಾರತ ಪ್ರವೇಶಿಸಿ ನಿಯಮ ಉಲ್ಲಂಘನೆ

ಕಾರ್ಗಿಲ್ ಯುದ್ಧವು ಮೇ 8, 1999 ರಿಂದ ಜುಲೈ 26, 1999 ರ ನಡುವೆ ನಡೆಯಿತು. ಪಾಕಿಸ್ತಾನಿ ಸೈನಿಕರು 1998ರಲ್ಲಿ ಚಳಿಗಾಲದಲ್ಲಿ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿ ನಿಯಮ ಉಲ್ಲಂಘಿಸಿದರು. ಕಾರ್ಗಿಲ್‌ನ ದ್ರಾಸ್ ಮತ್ತು ಬಟಾಲಿಕ್‌ನಲ್ಲಿರುವ ಎನ್‌ಎಚ್‌ 1ಎ ಯ ಮೇಲಿರುವ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದರು.

English summary
New President Draupadi Murmu on Tuesday paid tributes to the martyrs of the 1999 Kargil war against Pakistan on the occasion of Kargil Vijay Divas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X