ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿ-2 ಕ್ಷಿಪಣಿ ಯಶಸ್ಸಿಗೆ ರಾಷ್ಟ್ರಪತಿ ಅಭಿನಂದನೆ

|
Google Oneindia Kannada News

ನವದೆಹಲಿ, ನ.10 : 2 ಸಾವಿರ ಕಿ.ಮೀ. ದೂರದ ಗುರಿ ತಲುಪಬಲ್ಲ ಪರಮಾಣು ಸಾಮರ್ಥ್ಯದ ಅಗ್ನಿ-2 ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಿದ ಡಿಆರ್ ಡಿಒ ವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿನಂದಿಸಿದ್ದಾರೆ.

ಭಾರತದ ಸೈನಿಕ ಶಕ್ತಿ ಹೆಚ್ಚಳಕ್ಕೆ ಇಂಥ ಕ್ಷಿಪಣಿಗಳು ಕೊಡುಗೆ ನೀಡುತ್ತವೆ. ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲಲು ಇಂಥ ಯಶಸ್ವಿ ಪ್ರಯೋಗಗಳು ನೆರವಾಗುತ್ತವೆ ಎಂದು ಹೇಳಿದ್ದಾರೆ.[ಅಂತರಿಕ್ಷದಲ್ಲಿ ಒಂದು ರೋಮಾಂಚನಕಾರಿ ರೇಸ್!]

agni

ಅಗ್ನಿ-2 ಕ್ಷಿಪಣಿಯನ್ನು ಒರಿಸ್ಸಾದ ಕರಾವಳಿ ತೀರದಲ್ಲಿ ಮೊಬೈಲ್ ಲಾಂಚರ್ ಮೂಲಕ ಭಾನುವಾರ ಉಡಾವಣೆ ಮಾಡಲಾಯಿತು ಎಂದು ಐಟಿಆರ್ ನಿರ್ದೇಶಕ ಎಂವಿಕೆವಿ ಪ್ರಸಾದ್ ಮಾಹಿತಿ ನೀಡಿದರು.

ಎರಡು ಹಂತದ ಅಗ್ಷಿ-2 ಕ್ಷಿಪಣಿ, ಸುಧಾರಿತ ಮಾರ್ಗಸೂಚಿ ಮತ್ತು ಹಾರಾಟ ವ್ಯವಸ್ಥೆ ಒಳಗೊಂಡಿದೆ. ಹೈದರಾಬಾದ್‌ನ ಭಾರತ್ ಡೈನಮಿಕ್ಸ್ ಲಿ. ಸಂಯೋಜನೆಯಲ್ಲಿ ತಯಾರಾಗಿರುವ ಕ್ಷಿಪಣಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. [ಭಾರತದ ವಾಯು ಸೇನೆಗೆ ಇನ್ನು 'ನಿರ್ಭಯ']

ಇತ್ತೀಚೆಗಷ್ಟೇ ನಿರ್ಭಯ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದ ಭಾರತದ ಸೇನೆ ಇದೀಗ ಮತ್ತೊಂದು ಸಾಧನೆ ಮಾಡುವುದರಲ್ಲೂ ಯಶಸ್ವಿಯಾಗಿದೆ.

ಅಗ್ನಿ-2 ಸ್ಪೆಷಾಲಿಟಿ
ಉದ್ದ: 20 ಮೀಟರ್
ತೂಕ: 17 ಟನ್
ಹಾರಾಟ ಸಾಮರ್ಥ್ಯ : 2,000 ಕಿ.ಮೀ.
ಅಲ್ಲದೇ ಒಂದು ಸಾವಿರ ಕೆಜಿ ತೂಕದ ಮದ್ದು ಗುಂಡುಗಳನ್ನು ಹೊತ್ತೊಯ್ಯಬಹುದು.

English summary
President Pranab Mukherjee congratulated DRDO on the successful test-firing of medium-range nuclear-capable Agni-II missile. "I extend my heartiest congratulations to all those associated with the successful test-firing of 'Agni-II' Intermediate Range Ballistic Missile (IRBM)" The President said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X