ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರದಾನ

|
Google Oneindia Kannada News

ನವದೆಹಲಿ, ಮಾ. 27: ಮಾಜಿ ಪ್ರಧಾನಿ, ಸಂಸದೀಯ ಪಟು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶುಕ್ರವಾರ ಭಾರತ ರತ್ನ ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೌರವವನ್ನು ಪ್ರದಾನ ಮಾಡಿದರು.

ವಾಜಪೇಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು. ವಾಜಪೇಯಿ ಅವರ ಜತೆ ಮದನ್ ಮೋಹನ್ ಮಾಳವೀಯ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲಾಗಿದೆ.[ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪರಿಚಯ]

bharat ratna

ಪ್ರಧಾನಿ ಮೋದಿ ಈ ಬಗ್ಗೆ ಟ್ವಿಟ್ಟರ್ ಸಂದೇಶವನ್ನು ನೀಡಿದ್ದು, ಇಂದಿನ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಭಾರತದ ಜನ ಹೆಮ್ಮೆ ಪಡುವ ದಿನ ಇದಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು, ವಾಜಪೇಯಿ ಅವರು ಎಲ್ಲರಿಗೂ ಪ್ರೀತಿಪಾತ್ರರಾದ ವ್ಯಕ್ತಿ, ಅವರ ಮೇಲಿರುವ ಗೌರವ ಎಂದಿಗೂ ಕಡಿಮೆಯಾಗುವಂತಹದ್ದಲ್ಲ. ವಾಜಪೇಯಿ ಅವರು ಭಾರತ ವ್ಯಕ್ತಿಯಷ್ಟೇ ಅಲ್ಲ, ಅವರು ಅಂತಾರಾಷ್ಟ್ರೀಯ ವ್ಯಕ್ತಿ ಎಂದು ಕೊಂಡಾಡಿದರು.[ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ' ಘೋಷಣೆ]

bharat ratna

ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಪ್ರಮುಖರನ್ನು ಮಾತ್ರ ಆಹ್ವಾನಿಸಲಾಗಿತ್ತು. ಅಮೆರಿಕಕ್ಕೆ ಸೆಡ್ಡು ಹೊಡೆದು ನಡೆಸಿದ ಅಣು ಪರೀಕ್ಷೆ, ಪಾಕಿಸ್ತಾನದ ಜತೆ ಯುದ್ಧ ಮತ್ತು ವಿಜಯ, ವಿದೇಶಗಳ ಜತೆ ಸಂಬಂಧ ಬೆಳೆಸುವ ರೀತಿ ಇನ್ನು ಅನೇಕ ಬಗೆಯಲ್ಲಿ ದೇಶವನ್ನು ಉನ್ನತಿಗೇರಿಸಿದ ಕೀರ್ತಿ ವಾಜಪೇಯಿಗೆ ಸಲ್ಲುತ್ತದೆ.

English summary
President Pranab Mukherjee on Friday conferred Bharat Ratna, highest civilian award to former Prime Minister and veteran Parliamentarian Atal Bihari Vajpayee. In a departure from protocol, President visited Vajpayee personally at his Krishna Menon Marg residence and handed over the award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X