• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗರ್ಭಿಣಿಯರಿಗೆ ಕೊರೊನಾ ಲಸಿಕೆ; ಆರೋಗ್ಯ ಸಚಿವಾಲಯದ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಜೂನ್ 25: ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಬೇಕೆ, ಬೇಡವೇ? ಲಸಿಕೆ ನೀಡಿದರೆ ಅಡ್ಡ ಪರಿಣಾಮವಾಗುತ್ತದೆಯೇ? ಯಾವ ಲಸಿಕೆಯನ್ನು ಶಿಫಾರಸ್ಸು ಮಾಡಬಹುದು? ಗರ್ಭಿಣಿಯರಿಗೆ ಲಸಿಕೆ ನೀಡುವ ಸಂಬಂಧ ಹೀಗೆ ಹಲವು ಗೊಂದಲಗಳು ಹುಟ್ಟಿಕೊಂಡಿದ್ದವು. ಈ ಪ್ರಶ್ನೆಗಳಿಗೆ ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ ಉತ್ತರ ನೀಡಿದೆ.

ಗರ್ಭಿಣಿಯರಿಗೆ ಕೊರೊನಾ ಸೋಂಕಿಗೆ ನೀಡುವ ಲಸಿಕೆಗಳನ್ನು ನೀಡಬಹುದು. ಅವರ ಆರೋಗ್ಯದ ದೃಷ್ಟಿಯಿಂದ ಲಸಿಕೆ ನೀಡುವುದು ಅವಶ್ಯಕ ಕೂಡ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ. ಗರ್ಭಿಣಿಯರಿಗೆ ಕೊರೊನಾ ಲಸಿಕೆ ಕುರಿತ ಇನ್ನಷ್ಟು ಅವಶ್ಯಕ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದೆ. ಮುಂದೆ ಓದಿ...

 ಗರ್ಭಿಣಿಯರಿಗೆ ಕೊರೊನಾ ಲಸಿಕೆ ಅತ್ಯವಶ್ಯಕ

ಗರ್ಭಿಣಿಯರಿಗೆ ಕೊರೊನಾ ಲಸಿಕೆ ಅತ್ಯವಶ್ಯಕ

ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ್ -ಐಸಿಎಂಆರ್ ವ್ಯವಸ್ಥಾಪಕ ನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಅವರು ಈ ಕುರಿತು ಮಾತನಾಡಿದ್ದು, "ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಗರ್ಭಿಣಿಯರಿಗೆ ಲಸಿಕೆ ನೀಡಬಹುದು" ಎಂದು ತಿಳಿಸಿದ್ದಾರೆ. "ಗರ್ಭಿಣಿಯರಿಗೆ ಲಸಿಕೆ ಅವಶ್ಯಕವಾಗಿದೆ. ಹೀಗಾಗಿ ಅವರಿಗೆ ಲಸಿಕೆ ನೀಡಲೇಬೇಕು. ಅಡ್ಡಪರಿಣಾಮದ ಕುರಿತು ಆತಂಕ ಬೇಡ" ಎಂದು ಹೇಳಿದ್ದಾರೆ.

ಕೊರೊನಾ 3ನೇ ಅಲೆ:ದೇಶದಲ್ಲಿ ಶೀಘ್ರ ಗರ್ಭಿಣಿಯರಿಗೂ ಕೊರೊನಾ ಲಸಿಕೆ!ಕೊರೊನಾ 3ನೇ ಅಲೆ:ದೇಶದಲ್ಲಿ ಶೀಘ್ರ ಗರ್ಭಿಣಿಯರಿಗೂ ಕೊರೊನಾ ಲಸಿಕೆ!

"ಗರ್ಭಿಣಿಯರಿಗೆ ಲಸಿಕೆ ಕುರಿತು ಸೂಕ್ತ ದತ್ತಾಂಶ ಲಭ್ಯವಿರಲಿಲ್ಲ"

ಸುರಕ್ಷತಾ ಮಾಹಿತಿಯ ಕೊರತೆಯಿಂದಾಗಿ ಗರ್ಭಿಣಿಯರಿಗೆ ಸರ್ಕಾರ ಲಸಿಕೆ ನೀಡಲು ಶಿಫಾರಸು ಮಾಡಿರಲಿಲ್ಲ. ಲಸಿಕೆ ಪ್ರಯೋಗಗಳಿಂದ ಪ್ರಸ್ತುತ ಲಭ್ಯವಿರುವ ದತ್ತಾಂಶದ ಆಧಾರದ ಮೇಲೆ ಗರ್ಭಿಣಿ ಮಹಿಳೆಯರಿಗೆ ಲಸಿಕೆಯನ್ನು ಶಿಫಾರಸು ಮಾಡಬಹುದೇ ಎಂಬ ಬಗ್ಗೆ ವೈದ್ಯರು ಮತ್ತು ವೈಜ್ಞಾನಿಕ ಸಮುದಾಯವು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಲಸಿಕೆ ನೀಡಬಹುದು ಎಂದು ತಿಳಿಸಿದ್ದಾರೆ.

 ಇನ್ನಷ್ಟು ಮಾಹಿತಿ ಸಂಗ್ರಹ

ಇನ್ನಷ್ಟು ಮಾಹಿತಿ ಸಂಗ್ರಹ

ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಸೋಂಕಿನಿಂದ ಉಂಟಾಗುವ ಅಪಾಯಗಳು, ವ್ಯಾಕ್ಸಿನೇಷನ್‌ನ ಪ್ರಯೋಜನಗಳ ಕುರಿತಾದ ಮಾಹಿತಿಯೊಂದಿಗೆ ಕೋವಿಡ್ 19 ಲಸಿಕೆಗಳನ್ನು ನೀಡಬೇಕೆಂದು ಎನ್‌ಟಿಎಜಿಐ ಮೇ 28ರ ಸಭೆಯಲ್ಲಿ ಹೇಳಿತ್ತು. ನಂತರ ಗರ್ಭಿಣಿಯರಿಗೆ ಲಸಿಕೆ ನೀಡುವ ಸಂಬಂಧ ಯಾವುದೇ ಶಿಫಾರಸ್ಸುಗಳನ್ನು ಮಾಡಿರಲಿಲ್ಲ.

 ಮಕ್ಕಳಿಗೆ ಲಸಿಕೆ ಯಾವಾಗ?

ಮಕ್ಕಳಿಗೆ ಲಸಿಕೆ ಯಾವಾಗ?

"ಸದ್ಯಕ್ಕೆ ಕೇವಲ ಒಂದು ದೇಶದಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಪುಟ್ಟ ಮಕ್ಕಳಿಗೆ ಲಸಿಕೆ ಅಗತ್ಯವೇ ಇಲ್ಲವೇ ಎಂಬುದು ಇನ್ನೂ ಪ್ರಶ್ನೆಯಾಗಿದೆ. ಮಕ್ಕಳಿಗೆ ಲಸಿಕೆ ನೀಡುವ ಕುರಿತು ಇನ್ನಷ್ಟು ಮಾಹಿತಿ ದೊರೆತ ನಂತರ ಈ ಬಗ್ಗೆ ತೀರ್ಮಾನಿಸಲಾಗುವುದು. ಅಲ್ಲಿಯವರೆಗೂ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಬಲರಾಮ್ ತಿಳಿಸಿದ್ದಾರೆ. ಆದರೆ 2-18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಅಧ್ಯಯನ ನಡೆಸುತ್ತಿದ್ದೇವೆ. ಸೆಪ್ಟೆಂಬರ್ ವೇಳೆಗೆ ಅಧ್ಯಯನದ ಫಲಿತಾಂಶಗಳು ಲಭ್ಯವಾಗಲಿವೆ ಎಂದಿದ್ದಾರೆ.

English summary
Pregnant women can be vaccinated against COVID-19, says Union Health Ministry on friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X