ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19: ಗರ್ಭಾವಸ್ಥೆ, ಪ್ರಸವಾನಂತರದಲ್ಲಿ ಸೋಂಕು ಪ್ರಮಾಣ ಹೆಚ್ಚಳ

|
Google Oneindia Kannada News

ನವದೆಹಲಿ, ಜೂನ್ 17: ಕೊರೊನಾ ಎರಡನೇ ಅಲೆಯಲ್ಲಿ ಗರ್ಭಾವಸ್ಥೆ ಹಾಗೂ ಪ್ರಸವಾನಂತರದಲ್ಲಿ ಸೋಂಕು ತಗುಲಿರುವ ಪ್ರಮಾಣ ಹೆಚ್ಚು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿದೆ.

ಕೊರೊನಾ ಸೋಂಕಿನ ಗುಣಲಕ್ಷಣಗಳು ಎರಡನೇ ಅಲೆಯ ಸಂದರ್ಭದಲ್ಲಿ ಗರ್ಭಿಣಿ ಹಾಗೂ ಪ್ರಸವಾನಂತರ ಶೇ.28.7ರಷ್ಟು ಹೆಚ್ಚು ಕಾಣಿಸಿಕೊಂಡಿದೆ. ಮೊದಲ ಅಲೆಯಲ್ಲಿ ಶೇ.14.2ರಷ್ಟಿತ್ತು.

ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ 225 ಕೊವಿಡ್-19 ಸೋಂಕಿತೆಯರು!ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ 225 ಕೊವಿಡ್-19 ಸೋಂಕಿತೆಯರು!

ಮಹಿಳೆಯರ ಸಾವಿನ ಪ್ರಮಾಣವು ಹೆಚ್ಚಾಗಿರುವುದು ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ಪತ್ತೆಯಾಗಿದೆ. ಮೊದಲ ಕೊರೊನಾ ಅಲೆಯಲ್ಲಿ ಶೇ.0.7ರಷ್ಟಿದ್ದ ಸಾವಿನ ಪ್ರಮಾಣ ಎರಡನೇ ಅಲೆಯಲ್ಲಿ ಶೇ.5.7ಕ್ಕೆ ಹೆಚ್ಚಳವಾಗಿದೆ.

 ಲಸಿಕೆ ನೀಡುವುದರಿಂದ ಅಪಾಯ

ಲಸಿಕೆ ನೀಡುವುದರಿಂದ ಅಪಾಯ

ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆಫ್ ಇಮ್ಯುನೈಸೇಷನ್ ಸಭೆಯಲ್ಲಿ, ಗರ್ಭಿಣಿಯರಿಗೆ ಲಸಿಕೆ ನೀಡುವುದರಿಂದ ಅಪಾಯಕ್ಕೆ ತಂದೊಡ್ಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ದೀರ್ಘಕಾಲದ ಪ್ರತಿಕೂಲಗಳ ಬಗ್ಗೆ, ಭ್ರೂಣದ ಸುರಕ್ಷತೆ ಬಗ್ಗೆಲಸಿಕೆ ನೀಡುವ ಮೊದಲು ಮಹಿಳೆಗೆ ತಿಳಿಸಿ ಹೇಳಬೇಕೆಂಬ ಸಲಹೆ ನೀಡಲಾಗಿದೆ. ಹಾಲುಣಿಸುವ ಎಲ್ಲ ತಾಯಂದಿರಿಗೆ ಕೋವಿಡ್ 19 ಲಸಿಕೆಯನ್ನು ನೀಡಬೇಕು ಎಂಬ ಸಲಹೆಯ ನಡುವೆ ವೈದ್ಯಕೀಯ ಪರೀಕ್ಷೆಗಳ ಡೇಟಾಗಳ ಕೊರತೆಯಿಂದ ಗರ್ಭಿಣಿಯರಿಗೆ ಲಸಿಕೆ ನೀಡಲು ಸರ್ಕಾರ ಅನುಮತಿ ನೀಡಲ್ಲ.

 ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿಲ್ಲ

ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿಲ್ಲ

ಕೊರೊನಾ ವಿರುದ್ಧ ಲಸಿಕೆಯನ್ನು ಗರ್ಭಿಣಿಯರಿಗೆ ನೀಡುವ ಕುರಿತಾಗಿ ಸರ್ಕಾರ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ, ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯುಗರ್ಭಿಣಿಯರಲ್ಲಿ ಕೋವಿಡ್ ಸೋಂಕು ಹೆಚ್ಚಿನ ಅಪಾಯ ಮಾಡುವಂತಿದ್ದರೆ ಲಸಿಕೆ ನೀಡಿ ಎಂದು ಸಲಹೆ ನೀಡಿತ್ತು.

 ಗರ್ಭಿಣಿಯರಿಗೆ ಲಸಿಕೆ ನೀಡಬೇಕು

ಗರ್ಭಿಣಿಯರಿಗೆ ಲಸಿಕೆ ನೀಡಬೇಕು

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಕೊರೊನಾ ಲಸಿಕೆ ನೀಡುವುದು ಅತ್ಯಂತ ಉತ್ತಮ ಎಂದಿರುವ ಐಸಿಎಂಆರ್, ಎರಡನೇ ಕೋವಿಡ್ ಅಲೆಯಿಂದ ಮಹಿಳೆಯರ ಮೇಲೆ ಸಂಭವಿಸಿರುವ ಹೆಚ್ಚಿನ ಪ್ರಮಾಣದ ಹಾನಿಯ ಬಗ್ಗೆ ಮಾಹಿತಿ ನೀಡಿದೆ. ಕೋವಿಡ್ ಆರಂಭದಿಂದ ಇಂದಿನ ವರೆಗೆ ತಾಯರಂದಿರ ಸಾವಿನ ಪ್ರಮಾಣ ಶೇ.2ರಷ್ಟಿದೆ.

 ಭಾರತದ ಕೊರೊನಾ ಪ್ರಕರಣ

ಭಾರತದ ಕೊರೊನಾ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 67,208 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 2330 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಒಟ್ಟು 2,97,00,313 ಪ್ರಕರಣಗಳಿವೆ, ಒಂದೇ ದಿನದಲ್ಲಿ 1,03,570 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಇಲ್ಲಿಯವರೆಗೆ 2,84,91,670 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 3,81,903 ಮಂದಿ ಮೃತಪಟ್ಟಿದ್ದಾರೆ. 8,26,740 ಸಕ್ರಿಯ ಪ್ರಕರಣಗಳಿವೆ ಇದು 71ದಿನಗಳಲ್ಲೇ ಪತ್ತೆಯಾದ ಕಡಿಮೆ ಸಕ್ರಿಯ ಪ್ರಕರಣಗಳಾಗಿವೆ. 26,55,19,251 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಇದುವರೆಗೆ 38,52,38,220 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಜೂನ್ 16ರಂದು ಒಂದೇ ದಿನ 19,31,249 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

English summary
A study by the Indian Council of Medical Research (ICMR) has revealed that pregnant and postpartum women were more severely affected during the second Covid-19 wave in India as compared to the first, with case fatality rates and symptomatic cases being significantly higher this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X