ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವುದು ಬೇಡ: ಆರೋಗ್ಯ ಸಚಿವಾಲಯ

|
Google Oneindia Kannada News

ನವದೆಹಲಿ, ಜನವರಿ 15: ಗರ್ಭಿಣಿಯರಿಗೆ ಈಗ ಕೊರೊನಾ ಲಸಿಕೆ ನೀಡುವುದು ಬೇಡ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಗರ್ಭಿಣಿಯರು, ಬಾಣಂತಿಯರನ್ನು ಕೊವಿಡ್ 19 ಲಸಿಕೆ ಪ್ರಯೋಗಕ್ಕೆ ಒಳಪಡಿಸಿದರೆ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಇರಿಗೆ ಕೊರೊನಾ ಲಸಿಕೆ ಬೇಡ ಎಂದಿದೆ.

ಎರಡು ಪ್ರತ್ಯೇಕ ಕೋವಿಡ್ 19 ಲಸಿಕೆಗಳನ್ನು ನೀಡಬಾರದು ಎಂದು ಸೂಚಿಸಿರುವ ಸಚಿವಾಲಯವು, ಎರಡನೇ ಡೋಸ್ ನೀಡುವ ಸಂದರ್ಭದಲ್ಲೂ ಮೊದಲು ಯಾವ ಕಂಪನಿ ಲಸಿಕೆ ನೀಡಲಾಗಿತ್ತೋ, ಅದನ್ನೇ ನೀಡಬೇಕು ಎಂದು ಹೇಳಿದ್ದಾರೆ.

ಕೊರೊನಾ ಲಸಿಕೆಗಳ ವ್ಯತಿರಿಕ್ತ ಪರಿಣಾಮಕ್ಕೆ ಕಂಪನಿಗಳೇ ಹೊಣೆಕೊರೊನಾ ಲಸಿಕೆಗಳ ವ್ಯತಿರಿಕ್ತ ಪರಿಣಾಮಕ್ಕೆ ಕಂಪನಿಗಳೇ ಹೊಣೆ

ಈ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಸಚಿವಾಲಯ, ತುರ್ತು ಸಂದರ್ಭದಲ್ಲಿ 18 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಲಸಿಕೆ ನೀಡಬೇಕು. ಅಗತ್ಯವಿದ್ದಲ್ಲಿ, ಕೊವಿಡ್ 19 ಹಾಗೂ ಇತರೆ ಲಸಿಕೆಗಳ ನಡುವೆ 14 ದಿನ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದೆ.

ಜನವರಿ 16 ರಿಂದ ಕೊರೊನಾ ಲಸಿಕೆ ವಿತರಣೆ ಅಭಿಯಾನ

ಜನವರಿ 16 ರಿಂದ ಕೊರೊನಾ ಲಸಿಕೆ ವಿತರಣೆ ಅಭಿಯಾನ

ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡುವ ಲಸಿಕೆ ಹಾಕುವ ಜಗತ್ತಿನ ಅತಿದೊಡ್ಡ ಅಭಿಯಾನ ಭಾರತದಲ್ಲಿ ಇದೇ 16ರಂದು ಆರಂಭವಾಗಲಿದ್ದು, ಆರಂಭದ ದಿನ 2,934 ಕೇಂದ್ರಗಳಲ್ಲಿ ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು ಹಾಕಲು ಕೇಂದ್ರ ಸರ್ಕಾರ ಯೋಜಿಸಿದೆ.

3 ಲಕ್ಷ ಕಾರ್ಯಕರ್ತರಿಗೆ ಮೊದಲು ಲಸಿಕೆ

3 ಲಕ್ಷ ಕಾರ್ಯಕರ್ತರಿಗೆ ಮೊದಲು ಲಸಿಕೆ

ಭಾರತದ ಇತಿಹಾಸದಲ್ಲಿ ಇದು ಅತಿದೊಡ್ಡ ಲಸಿಕಾ ಅಭಿಯಾನವಾಗಿದ್ದು ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ 2,934 ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ಲಸಿಕೆ ಹಾಕಲು ತೀರ್ಮಾನಿಸಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ದಿಷ್ಟ ಸುರಕ್ಷತೆ ಮತ್ತು ಶಕ್ತಿವರ್ಧಕ ಮೌಲ್ಯ ಹೆಚ್ಚಿಸುವ ನಿಯಂತ್ರಕ ಪ್ರಕ್ರಿಯೆಗಳ ಮೂಲಕ ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳ ತುರ್ತು ಪ್ರಯೋಗಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಲಸಿಕೆಗೆ 200ರಿಂದ 295 ರೂಪಾಯಿ ವೆಚ್ಚವಾಗಬಹುದು.

ಲಸಿಕೆಗಳ ಖರೀದಿ ಮೊತ್ತ ಹಂಚಿಕೆ

ಲಸಿಕೆಗಳ ಖರೀದಿ ಮೊತ್ತ ಹಂಚಿಕೆ

ಕೊವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳ ಸಂಪೂರ್ಣ ಆರಂಭಿಕ ಖರೀದಿ ಮೊತ್ತವನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ.ಆರೋಗ್ಯ ಸೇವೆ ಕಾರ್ಯಕರ್ತರ ಅಂಕಿಅಂಶಗಳನ್ನು ನೋಡಿಕೊಂಡು ಲಸಿಕೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಲಸಿಕೆ ಪ್ರಮಾಣಗಳ ಆರಂಭಿಕ ಪೂರೈಕೆಯು ಮುಂದಿನ ವಾರಗಳಲ್ಲಿ ನಿರಂತರವಾಗಿ ಮರುಪೂರಣಗೊಳ್ಳುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಲಸಿಕೆ ನೀಡಲು ಸಿದ್ಧತೆ

ಲಸಿಕೆ ನೀಡಲು ಸಿದ್ಧತೆ

ಜನವರಿ 16 ರಿಂದ ಸಿಒವಿಐಡಿ -19 ಲಸಿಕೆಯನ್ನು ನೀಡಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯಗಳು ,ಕೇಂದ್ರಾಡಳಿತ ಪ್ರದೇಶಗಳಲ್ಲಿ 2,360 ಪ್ರಮುಖ ತರಬೇತುದಾರರು, 61,000 ಕಾರ್ಯಕ್ರಮ ನಿರ್ವಾಹಕರು, 2 ಲಕ್ಷ ಲಸಿಕೆ ಹಾಕುವವರು, 3.7 ಲಕ್ಷ ಇತರ ಲಸಿಕೆ ತಂಡದ ಸದಸ್ಯರು ಹೊಂದಿರುವ ಒಟ್ಟು 26 ವರ್ಚುವಲ್ ಸಭೆಗಳು, ತರಬೇತಿಗಳಲ್ಲಿ ಲಸಿಕೆ ಹಾಕುವ ಬಗ್ಗೆ ಇಲ್ಲಿಯವರೆಗೆ ತರಬೇತಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

English summary
Interchangeability of COVID-19 vaccines is not permitted and pregnant and lactating women should not be administered the shots as they have not been part of any anti-coronavirus vaccine clinical trial so far, the health ministry said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X