ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಯಲ್ಲಿ ಪಟಾಕಿ ಸಿಡಿಸುವವರು ಎಚ್ಚರವಾಗಿರಿ!

By ಬಿ.ಎಂ.ಲವಕುಮಾರ್
|
Google Oneindia Kannada News

ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಲವವರು ಪಟಾಕಿ ಸಿಡಿಸುವಾಗ ಕಣ್ಣು, ಕೈ ಕಳೆದುಕೊಂಡು ಅಂಗವಿಕಲರಾಗಿದ್ದಾರೆ. ಪ್ರತಿವರ್ಷವೂ ಪಟಾಕಿಯಿಂದ ಆಗುವ ಅನಾಹುತದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಲೇ ಇದೆ.

ಬೆಂಗಳೂರಿನ ಪಟಾಕಿ ವ್ಯಾಪಾರಿಗಳ ಬಿಸಿನೆಸ್ ಟುಸ್!ಬೆಂಗಳೂರಿನ ಪಟಾಕಿ ವ್ಯಾಪಾರಿಗಳ ಬಿಸಿನೆಸ್ ಟುಸ್!

ಅದರಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ ಪಟಾಕಿ ತ್ಯಜಿಸಿ ಆಂದೋಲನ ಶುರುವಾಗಿದ್ದು, ಇದಕ್ಕೆ ಒಂದಷ್ಟು ಬೆಂಬಲವೂ ವ್ಯಕ್ತವಾಗಿರುವುದನ್ನು ಕಾಣಬಹುದಾಗಿದೆ. ಮತ್ತೊಂದೆಡೆ ಭಾರೀ ಶಬ್ದ ಬರುವ, ಜೀವಕ್ಕೆ ಅಪಾಯ ತರುವಂತಹ ಪಟಾಕಿಗಳನ್ನು ಸರ್ಕಾರವೂ ನಿಷೇಧಿಸಿದೆ.

ಪಟಾಕಿ ದುಷ್ಪರಿಣಾಮಗಳೇನು? ಆರೋಗ್ಯಕ್ಕೆ ಹೇಗೆ ಮಾರಕ?ಪಟಾಕಿ ದುಷ್ಪರಿಣಾಮಗಳೇನು? ಆರೋಗ್ಯಕ್ಕೆ ಹೇಗೆ ಮಾರಕ?

ಇದರ ನಡುವೆಯೂ ಪಟಾಕಿ ಹೊಡೆಯುವವರೂ ಇದ್ದಾರೆ. ಇನ್ನು ಮನೆಗಳಲ್ಲಿ ಮಕ್ಕಳಿಗೆ ಹಬ್ಬದಲ್ಲಿ ಮಾಡುವ ಹಬ್ಬದೂಟಕ್ಕಿಂತ ಪಟಾಕಿಯ ಮೇಲೆಯೇ ಆಶೆ. ವಿವಿಧ ನಮೂನೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ತವಕ ಇಲ್ಲದಿಲ್ಲ. ಹೀಗಿರುವಾಗ ಪಟಾಕಿ ಸಿಡಿಸದೆ ಹಬ್ಬ ಆಚರಿಸಿ ಎನ್ನುವುದು ಕೂಡ ಸಾಧ್ಯವಾಗದ ಮಾತು.

ಪಟಾಕಿ ಸಿಡಿಸುವುದರಿಂದ ಆಗುವ ಅನಾನುಕೂಲ ಮತ್ತು ದುರಂತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದಾರೆ. ಆದರೂ ಅದು ಸಂಪೂರ್ಣ ಯಶಸ್ಸು ಕಾಣಬೇಕಾದರೆ ಇನ್ನೊಂದಷ್ಟು ವರ್ಷ ಬೇಕಾಗಬಹುದು. ಸರ್ಕಾರಿ ಪಟಾಕಿ ನಿಷೇಧಿಸುವ ತನಕ ಪಟಾಕಿಯಿಲ್ಲದೆ ಹಬ್ಬ ಆಚರಿಸುವುದು ಕಷ್ಟವೇ!

ಮೈಸೂರು: ಸುರಕ್ಷಿತ ದೀಪಾವಳಿಗೆ ಒಂದಷ್ಟು ಸಲಹೆಮೈಸೂರು: ಸುರಕ್ಷಿತ ದೀಪಾವಳಿಗೆ ಒಂದಷ್ಟು ಸಲಹೆ

ಅದೇನೇ ಇರಲಿ. ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸೋ ಭರದಲ್ಲಿ ಎಚ್ಚರ ತಪ್ಪಿ ತಮ್ಮ ಬದುಕನ್ನು ಕತ್ತಲೆಗೆ ತಳ್ಳಿಕೊಳ್ಳಬಾರದಲ್ಲ, ಹಾಗಾಗಿ ಪಟಾಕಿ ಸಿಡಿಸುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ಖರೀದಿಗೂ ಮುನ್ನ ಎಚ್ಚರ

ಖರೀದಿಗೂ ಮುನ್ನ ಎಚ್ಚರ

ಗುಣಮಟ್ಟದ ಪಟಾಕಿ ಹಾಗೂ ಪರವಾನಗಿ ಹೊಂದಿದವರಿಂದಲೇ ಖರೀದಿಸಿ. ಪಟಾಕಿ ಸಿಡಿಸಲು ಹೊರಡುವವರು ಹತ್ತಿ ಬಟ್ಟೆಯನ್ನು ಧರಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಹಬ್ಬದ ಜೋಶ್ ನಲ್ಲಿ ಪಟಾಕಿಯನ್ನು ಕೈಯ್ಯಲ್ಲಿ ಹಿಡಿದು ಬೆಂಕಿ ಹಚ್ಚುವ, ಬೇರೆಯವರ ಮೇಲೆ ಎಸೆಯುವ ಪ್ರಯತ್ನ ಮಾಡಬೇಡಿ.

ಪಟಾಕಿಯನ್ನು ಕೈಯಲ್ಲಿ ಹಿಡಿಯಬೇಡಿ

ಪಟಾಕಿಯನ್ನು ಕೈಯಲ್ಲಿ ಹಿಡಿಯಬೇಡಿ

ಪಟಾಕಿ ಸಿಡಿಯಲಿಲ್ಲವೆಂದು ಅದನ್ನು ಕೈಯ್ಯಲ್ಲಿಡಿದು ಮೇಲಿನ ಪೇಪರ್ ಸುಲಿದು ಬೆಂಕಿ ಹಚ್ಚುವ ಯತ್ನ ಮಾಡಬೇಡಿ. ಕೆಲವೊಮ್ಮೆ ತಡವಾಗಿ ಸಿಡಿಯುವ ಸಾಧ್ಯತೆಯೂ ಇರುತ್ತದೆ. ಪಟಾಕಿ ಸಿಡಿಸುವಾಗ ಕಿವಿಗೆ ಹತ್ತಿ ಹಾಗೂ ಮೂಗಿಗೆ ಮಾಸ್ಕ್ ಹಾಕಿಕೊಳ್ಳಿ. ಭಾರೀ ಸದ್ದು ಮಾಡುವ ಪಟಾಕಿಗಳಿಂದ ದೂರ ಸರಿಯಿರಿ ಇಲ್ಲಾಂದ್ರೆ ಕಿವಿಯ ತಮಟೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಣ್ಣಿಗೆ ಕನ್ನಡಕ ಧರಿಸುವುದು ಕೂಡ ಒಳ್ಳೆಯದು.

ಮಕ್ಕಳ ಬಗ್ಗೆ ನಿಗಾ ಇರಲಿ

ಮಕ್ಕಳ ಬಗ್ಗೆ ನಿಗಾ ಇರಲಿ

ಮನೆಯ ಹಿರಿಯರು ಮಕ್ಕಳನ್ನು ಅವರಿಷ್ಟದಂತೆ ಪಟಾಕಿ ಸಿಡಿಸಲು ಬಿಡಬೇಡಿ ನೀವು ಕೂಡ ಜೊತೆಗಿದ್ದು ಅವರ ಬಗ್ಗೆ ನಿಗಾ ವಹಿಸಿ ಜೊತೆಗೆ ಸಲಹೆ ನೀಡಿ. ಮಕ್ಕಳ ವಯಸ್ಸಿಗೆ ತಕ್ಕದಾದ ಪಟಾಕಿಗಳನ್ನೇ ಖರೀದಿಸಿ ತನ್ನಿ. ಭಾರೀ ಶಬ್ದ ಬರುವ ಪಟಾಕಿಗಳನ್ನು ನೀಡಬೇಡಿ. ಹೂಕುಂಡ(ಫ್ಲವರ್ ಪಾಟ್)ಗಳಿಗೆ ಬೆಂಕಿ ಹಚ್ಚುವಾಗ ಅಂತರ ಕಾಪಾಡಿ. ಕೈಯ್ಯಿಂದ ಹಚ್ಚುವುದು ಒಳ್ಳೆಯದಲ್ಲ. ಹೂಕುಂಡಗಳು ಸಿಡಿದು ಕೈ,ಕಣ್ಣು ಕಳೆದುಕೊಂಡಿರುವ ಉದಾಹರಣೆಗಳು ಬಹಳಷ್ಟಿವೆ.

ಮೂಕ ಪ್ರಾಣಿಗಳಿಂದ ವಿಕೃತ ಮನರಂಜನೆ ಬೇಡ

ಮೂಕ ಪ್ರಾಣಿಗಳಿಂದ ವಿಕೃತ ಮನರಂಜನೆ ಬೇಡ

ಪ್ರಾಣಿಗಳ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುವ ವಿಕೃತ ಕೆಲಸವನ್ನು ದಯವಿಟ್ಟು ಮಾಡಬೇಡಿ. ಪಟಾಕಿಯ ಹೊಗೆಯಲ್ಲಿ ಹೆಚ್ಚು ಹೊತ್ತು ಇರಬೇಡಿ. ಪಟಾಕಿ ಹಚ್ಚಿದ ಕೈಯ್ಯನ್ನು ಚೆನ್ನಾಗಿ ತೊಳೆದು ಆಹಾರ ಸೇವಿಸಿ. ಹೀಗೆ ಒಂದಷ್ಟು ಮುಂಜಾಗ್ರತೆಯಿದ್ದರೆ ದೀಪಾವಳಿ ಹಬ್ಬವನ್ನು ಎಂಜಾಯ್ ಮಾಡಲು ಸಾಧ್ಯವಿದೆ.

English summary
People all over the country are in festival mood now. Hindus celebrating festival of lights with joy. Here are some precautionary measures one should take before using firecrackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X