ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಉತ್ತರಪ್ರದೇಶದಂತೆ ಉಲ್ಟಾ ಹೊಡೆಯುವುದೇ ಗುಜರಾತ್ ಸಮೀಕ್ಷೆ?

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಗುಜರಾತ್ ಚುನಾವಣೆ 2017 : ಮತಗಟ್ಟೆ ಸಮೀಕ್ಷೆ ಚುನಾವಣಾಪೂರ್ವ ಸಮೀಕ್ಷೆ ಸುಳ್ಳಾಗುತ್ತಾ | Oneindia Kannada

    ಇಡೀ ದೇಶ ಕುತೂಹಲದಿಂದ ಕಾಯುತ್ತಿರುವ ಗುಜರಾತ್ ಅಸೆಂಬ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಶನಿವಾರ (ಡಿ 9) ಮೊದಲ ಹಂತ ಮತ್ತು ಎರಡನೇ ಹಂತದ ಮತದಾನ ಡಿ.14ರಂದು ನಡೆಯಲಿದೆ. ಡಿ. 18ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಗುಜರಾತ್ ಚುನಾವಣೆಗೆ ಮುನ್ನ ಕೊನೆಯ ಚುನಾವಣಾಪೂರ್ವ ಸಮೀಕ್ಷೆ ಎನ್ನಲಾಗುತ್ತಿರುವ ಎಬಿಪಿ ನ್ಯೂಸ್- ಸಿಎಸ್‌ಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಹೊರಬಿದ್ದಿದೆ. ಇನ್ನೇನಿದ್ದರೂ ಡಿಸೆಂಬರ್ 14-15ರಂದು ಪ್ರಕಟವಾಗಲಿರುವ ಮತಗಟ್ಟೆ ಸಮೀಕ್ಷೆ.

    ಎಬಿಪಿ ನ್ಯೂಸ್ ಸಮೀಕ್ಷೆ : ಗುಜರಾತ್ ನಲ್ಲಿ ಬಿಜೆಪಿಗೆ ಸುಲಭವಲ್ಲ ಜಯ!

    ಮಾಧ್ಯಮಗಳ ಸಹಯೋಗದೊಂದಿಗೆ ಇತರ ಸಂಸ್ಥೆಗಳು ನಡೆಸುವ ಚುನಾವಣಾಪೂರ್ವ ಮತ್ತು ಮತಗಟ್ಟೆ ಸಮೀಕ್ಷೆಗಳು ಕರಾರುವಕ್ಕಾದ ವರದಿ ನೀಡುತ್ತಿವೆಯಾ ಎಂದು ಕೇಳಿದರೆ, ಕೆಲವೇ ಕೆಲವು ಸಂಸ್ಥೆಗಳ ಸಮೀಕ್ಷಾ ವರದಿಯನ್ನು ಹೊರತು ಪಡಿಸಿ, ಇತರ ಎಲ್ಲಾ ಸಮೀಕ್ಷಾ ವರದಿಗಳಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬರುತ್ತದೆ.

    ಯುಪಿಯಲ್ಲಿ ಎಎಪಿ ಚಮತ್ಕಾರ, 11 ಸ್ಥಾನಗಳಲ್ಲಿ ಅಚ್ಚರಿಯ ಗೆಲುವು

    ಇದಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆಯೆಂದರೆ. ಫೆಬ್ರವರಿ ಹನ್ನೊಂದರಿಂದ ಮಾರ್ಚ್ ಎಂಟರವರೆಗೆ, ಏಳು ಹಂತದಲ್ಲಿ ನಡೆದ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣಾ ಫಲಿತಾಂಶ. ಪ್ರಮುಖವಾಗಿ ಐದು ವಿವಿಧ ಮಾಧ್ಯಮಗಳು ನಡೆಸಿದ್ದ ಚುನಾವಣಾಪೂರ್ವ ಫಲಿತಾಂಶವಾಗಲಿ, ಎಕ್ಸಿಟ್ ಪೋಲಾಗಲಿ, ಪ್ರಕಟಿತ ಫಲಿತಾಂಶದ ಹತ್ತಿರಕ್ಕೂ ಬರಲಿಲ್ಲ. ಇಲ್ಲಿ ಸಮೀಕ್ಷೆ ಹೇಳಿದ್ದೇ ಒಂದು ಆಗಿದ್ದು ಇನ್ನೊಂದು..

    ಉ.ಪ್ರದೇಶ ಅಭೂತಪೂರ್ವ ಜನಾದೇಶ: ಗುಜರಾತ್ ನಲ್ಲಿ ಗರಿಗೆದರಿದ ಬಿಜೆಪಿ!

    ಈಗ ಗುಜರಾತ್ ಚುನಾವಣೆಯ ಸರದಿ, ಚುನಾವಣಾಪೂರ್ವ ವರದಿಗಳ ಪ್ರಕಾರ, ಬಿಜೆಪಿಯ ಮತ್ತು ಪ್ರಧಾನಿ ಮೋದಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆದರೂ, ಅತ್ಯಂತ ಸರಳ ಬಹುಮತದಿಂದ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎನ್ನುತ್ತದೆ ಎಬಿಪಿ ನ್ಯೂಸಿನ ಲೇಟೆಸ್ಟ್ ವರದಿ. ಇದು ಎಷ್ಟರ ಮಟ್ಟಿಗೆ ಸತ್ಯವಾಗುತ್ತೆ ಅನ್ನೋದಕ್ಕೆ ಡಿಸೆಂಬರ್ ಹದಿನೆಂಟರ ತನಕ ಕಾಯಲೇಬೇಕು.

    ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆಯ ಬಗ್ಗೆ ಸಮೀಕ್ಷೆಗಳು ಏನು ಹೇಳಿದ್ದವು, ಆದರೆ ಆಗಿದ್ದೇನು, ಒಂದು ಝಲಕ್.. ಮುಂದೆ ಓದಿ..

    ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ

    ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ

    ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸದೆಯೇ ಬಿಜೆಪಿ, ಉತ್ತರಪ್ರದೇಶದ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿತ್ತು. ಒಟ್ಟು 403 ಸ್ಥಾನ ಹೊಂದಿರುವ ಅಸೆಂಬ್ಲಿಯಲ್ಲಿ ಬಿಜೆಪಿ - 325, ಎಸ್ಪಿ - 47, ಬಿಎಸ್ಪಿ - 19, ಕಾಂಗ್ರೆಸ್ - 7, ಇತರರು 5ಕ್ಷೇತ್ರದಲ್ಲಿ ಜಯಗಳಿಸಿದ್ದರು.

    ಮತಗಟ್ಟೆ ಸರ್ವೇ ನಡೆಸಿದ ಸಂಸ್ಥೆಗಳು

    ಮತಗಟ್ಟೆ ಸರ್ವೇ ನಡೆಸಿದ ಸಂಸ್ಥೆಗಳು

    ಟೈಮ್ಸ್ ನೌ - ವಿಎಂಆರ್, ಇಂಡಿಯಾ ನ್ಯೂಸ್ - ಎಂಆರ್ಸಿ, ಎಬಿಪಿ- ಸಿಎಸ್‌ಡಿಎಸ್, ಇಂಡಿಯಾ ಟಿವಿ-ಸಿವೋಟರ್, ನ್ಯೂಸ್ 24-ಚಾಣಕ್ಯ, ಮಾಧ್ಯಮ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ (ಎಕ್ಸಿಟ್ ಪೋಲ್) ನಡೆಸಿದ್ದವು. ಮಾರ್ಚ್ ಒಂಬತ್ತರಂದು ಎಲ್ಲಾ ಸಮೀಕ್ಷೆಗಳ ವರದಿ ಪ್ರಕಟವಾಗಿದ್ದವು.

    ವಿವಿಧ ವಾಹಿನಿಗಳು ನೀಡಿದ ಎಕ್ಸಿಟ್ ಫಲಿತಾಂಶ

    ವಿವಿಧ ವಾಹಿನಿಗಳು ನೀಡಿದ ಎಕ್ಸಿಟ್ ಫಲಿತಾಂಶ

    ಟೈಮ್ಸ್ ನೌ ಮತ್ತು ವಿಎಂಆರ್ (ಬಿಜೆಪಿ 190-210, ಎಸ್ಪಿ ಮತ್ತು ಕಾಂಗ್ರೆಸ್ 110-130, ಬಿಎಸ್ಪಿ - 57-74, ಇತರರು - 19)
    ಇಂಡಿಯಾ ನ್ಯೂಸ್ - ಎಂಆರ್ಸಿ (ಬಿಜೆಪಿ 185, ಎಸ್ಪಿ ಮತ್ತು ಕಾಂಗ್ರೆಸ್ - 120, ಬಿಎಸ್ಪಿ - 90, ಇತರರು - 8)
    ಎಬಿಪಿ-ಸಿಎಸ್‌ಡಿಎಸ್ (ಬಿಜೆಪಿ 164-167, ಎಸ್ಪಿ ಮತ್ತು ಕಾಂಗ್ರೆಸ್ - 156-169, ಬಿಎಸ್ಪಿ - 60-72, ಇತರರು - 2-6)
    ನ್ಯೂಸ್ 24-ಚಾಣಕ್ಯ (ಬಿಜೆಪಿ 285, ಎಸ್ಪಿ ಮತ್ತು ಕಾಂಗ್ರೆಸ್ - 88, ಬಿಎಸ್ಪಿ - 27, ಇತರರು - 3)

    ಸಮೀಕ್ಷೆ ಹೇಳಿದ್ದು ಯಾವುದೂ ಸರಿಯಾಗಿಲ್ಲ

    ಸಮೀಕ್ಷೆ ಹೇಳಿದ್ದು ಯಾವುದೂ ಸರಿಯಾಗಿಲ್ಲ

    ಅದೇ ರೀತಿ, ಇಂಡಿಯಾ ಟುಡೇ-ಏಕ್ಸಿಸ್, ಟೈಮ್ಸ್ ನೌ - ವಿಎಂಆರ್, ಎಬಿಪಿ ನ್ಯೂಸ್ - ಲೋಕನೀತಿ- ಸಿಎಸ್‌ಡಿಎಸ್, ವಿಡಿಪಿ ಅಸೋಸಿಯೇಟ್ಸ್, ದಿ ವೀಕ್ - ಹನ್ಸ್ ರಿಸರ್ಚ್, ಇಂಡಿಯಾ ಟಿವಿ -ಸಿವೋಟರ್ ಮುಂತಾದವು ಮಾರ್ಚ್ 2016ರಿಂದ ಜನವರಿ 2017ರ ವರೆಗೆ ವಿವಿಧ ಹಂತಗಳಲ್ಲಿ ಚುನಾವಣಾಪೂರ್ವ ಸಮೀಕ್ಷೆ ನಡೆಸಿದ್ದವು.

    ಜನವರಿ ತಿಂಗಳಾಂತ್ಯದಲ್ಲಿ ವಿವಿಧ ವಾಹಿನಿಗಳು ನೀಡಿದ ಚುನಾವಣಾಪೂರ್ವ ಫಲಿತಾಂಶ ಹೀಗಿತ್ತು

    ಜನವರಿ ತಿಂಗಳಾಂತ್ಯದಲ್ಲಿ ವಿವಿಧ ವಾಹಿನಿಗಳು ನೀಡಿದ ಚುನಾವಣಾಪೂರ್ವ ಫಲಿತಾಂಶ ಹೀಗಿತ್ತು

    ಟೈಮ್ಸ್ ನೌ ಮತ್ತು ವಿಎಂಆರ್ (ಬಿಜೆಪಿ 202, ಎಸ್ಪಿ ಮತ್ತು ಕಾಂಗ್ರೆಸ್ - 147, ಬಿಎಸ್ಪಿ - 57-74, ಇತರರು - 19)
    ಇಂಡಿಯಾ ಟುಡೇ- Axis (ಬಿಜೆಪಿ 180-191, ಎಸ್ಪಿ ಮತ್ತು ಕಾಂಗ್ರೆಸ್ - 168-178, ಬಿಎಸ್ಪಿ - 39-43, ಇತರರು - 1-4)
    ಎಬಿಪಿ-ಸಿಎಸ್‌ಡಿಎಸ್-ಲೋಕನೀತಿ (ಬಿಜೆಪಿ 161-128, ಎಸ್ಪಿ ಮತ್ತು ಕಾಂಗ್ರೆಸ್ - 187-197, ಬಿಎಸ್ಪಿ - 76-86)
    ನ್ಯೂಸ್ 24-ಚಾಣಕ್ಯ (ಬಿಜೆಪಿ 285, ಎಸ್ಪಿ ಮತ್ತು ಕಾಂಗ್ರೆಸ್ - 88, ಬಿಎಸ್ಪಿ - 27, ಇತರರು - 3)
    ವಿಡಿಪಿ ಅಸೋಸಿಯೇಟ್ಸ್ (ಬಿಜೆಪಿ 207, ಎಸ್ಪಿ ಮತ್ತು ಕಾಂಗ್ರೆಸ್ - 128, ಬಿಎಸ್ಪಿ - 58)
    ದಿ ವೀಕ್ - ಹನ್ಸ್ ರಿಸರ್ಚ್ (ಬಿಜೆಪಿ 192-196, ಎಸ್ಪಿ ಮತ್ತು ಕಾಂಗ್ರೆಸ್ - 178-182, ಬಿಎಸ್ಪಿ - 20-24, ಇತರರು - 5-9)

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Pre poll survey and Exit Poll ever be fully accurate? Recent Uttar Pradesh assembly election result shows, these survey results are never come to close to the actual figure.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more