ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾಪೂರ್ವ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಯಾರು?

|
Google Oneindia Kannada News

ನವದೆಹಲಿ, ಜ 22: ಕೇಂದ್ರದಲ್ಲಿ ಅಧಿಕಾರಕ್ಕೇರಲು ರಾಷ್ಟೀಯ ಪಕ್ಷಗಳಿಗೆ ದಕ್ಷಿಣ ಭಾರತದ ಸೀಟು ಲೆಕ್ಕಾಚಾರ ಅತ್ಯಂತ ನಿರ್ಣಾಯಕ. ಯಾಕೆಂದರೆ ಇಲ್ಲಿ ರಾಷ್ಟೀಯ ಪಕ್ಷದ ಜೊತೆ ಪ್ರಾದೇಶಿಕ ಪಕ್ಷಗಳ ಪಾತ್ರ ಅಷ್ಟೇ ಮಹತ್ವದ್ದು.

ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ವೈಎಸಾರ್ ಕಾಂಗ್ರೆಸ್, ತೆಲುಗುದೇಶಂ ಮತ್ತು ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಬಹುದು ಎನ್ನುವುದು ಸಮೀಕ್ಷೆಯಲ್ಲಿನ ಲೆಕ್ಕಾಚಾರ. (ಐದು ರಾಜ್ಯಗಳ ಚುನಾವಣಾಪೂರ್ವ ಸಮೀಕ್ಷೆ, ಎಲ್ಲಿ ಯಾರು)

ಇನ್ನು ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ಕೇಂದ್ರದಲ್ಲಿ ಅಧಿಕಾರಕ್ಕೇರಲು ಯುಪಿಎ ಮತ್ತು NDAಗೆ ತಮಿಳುನಾಡು ಪ್ರಾದೇಶಿಕ ಪಕ್ಷಗಳ ಸಹಾಯ ಅತ್ಯವಶ್ಯಕ ಎನ್ನುವುದು ಈಗಾಗಲೇ ಹಲವು ಬಾರಿ ರುಜುವಾತಾಗಿದೆ. (ಚುನಾವಣಾಪೂರ್ವ ಸಮೀಕ್ಷೆ: ಕರ್ನಾಟಕದಲ್ಲಿ ಯಾರಿಗೆ ಹೆಚ್ಚು ಸ್ಥಾನ)

ಐಬಿಎನ್ ಮತ್ತು ರಾಜನೀತಿ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯನ್ವಯ ಜನವರಿ 2014ರಲ್ಲಿ ಲೋಕಸಭಾ ಚುನಾವಣೆ ನಡೆದರೆ ಜನರ ಒಲವು ಯಾವ ಪಕ್ಷದತ್ತ? ಸ್ಲೈಡಿನಲ್ಲಿ ನೋಡಿ..

ಕರ್ನಾಟಕದಲ್ಲಿ ಮತದಾರರ ಒಲವು ಯಾವ ಪಕ್ಷದತ್ತ? ನಿರೀಕ್ಷಿಸಿ..

ತಮಿಳುನಾಡಿನಲ್ಲೂ ಮೋದಿ ಪ್ರಭಾವ

ತಮಿಳುನಾಡಿನಲ್ಲೂ ಮೋದಿ ಪ್ರಭಾವ

ಬಿಜೆಪಿ ಪ್ರಭಾವ ಇಲ್ಲವೇ ಇಲ್ಲ ಎನ್ನಬಹುದಾದ ತಮಿಳುನಾಡಿನಲ್ಲಿ ಶೇ. 17 ಮಂದಿ ನರೇಂದ್ರ ಮೋದಿ ಪ್ರಧಾನಿಯಾಗ ಬೇಕೆಂದು ಬಯಸಿದ್ದಾರೆ. ಶೇ. 18 ಮಂದಿ ಜಯಲಲಿತಾ, ಶೇ. 11 ಮಂದಿ ರಾಹುಲ್ ಗಾಂಧಿ ಮತ್ತು ಶೇ. 1ರಷ್ಟು ಮಂದಿ ಕರುಣಾನಿಧಿ ಪ್ರಧಾನಿಗೆ ಸೂಕ್ತ ಆಯ್ಕೆ ಎಂದಿದ್ದಾರೆ. ಅಲ್ಲದೇ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ. 2 ರಷ್ಟು ಮತ ಪಡೆದಿದ್ದ ಬಿಜೆಪಿ ಈಗ ಚುನಾವಣೆ ನಡೆದರೆ ಶೇ. 16ರಷ್ಟು ಮತ ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ತಮಿಳುನಾಡಿನಲ್ಲಿ ಅಮ್ಮ ಮುಂದೆ (ಒಟ್ಟು 39 ಸೀಟು)

ತಮಿಳುನಾಡಿನಲ್ಲಿ ಅಮ್ಮ ಮುಂದೆ (ಒಟ್ಟು 39 ಸೀಟು)

ಎಐಡಿಎಂಕೆ - 15 ರಿಂದ 23
ಡಿಎಂಕೆ - 7 ರಿಂದ 13
ಕಾಂಗ್ರೆಸ್ - 1 ರಿಂದ 5
ಎಂಡಿಎಂಕೆ ಮತ್ತು ಇತರರು - 4 ರಿಂದ 10

ಆಂಧ್ರಪ್ರದೇಶ : ಕಾಂಗ್ರೆಸ್ಸಿಗೆ ಹಿನ್ನಡೆ

ಆಂಧ್ರಪ್ರದೇಶ : ಕಾಂಗ್ರೆಸ್ಸಿಗೆ ಹಿನ್ನಡೆ

ತೆಲಂಗಾಣ ರಾಜ್ಯದ ಘೋಷಣೆಯ ನಂತರ ಆಡಳಿತಾರೂಢ ಕಾಂಗ್ರೆಸ್ಸಿಗೆ ರಾಜ್ಯದಲ್ಲಿ ಹಿನ್ನಡೆಯಾಗಲಿದೆ ಎನ್ನುತ್ತದೆ ಸಮೀಕ್ಷೆ. ವೈಎಸ್ಆರ್ ಕಾಂಗ್ರೆಸ್ ಪ್ರಭಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಪ್ರಮುಖವಾಗಿ ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸಲಿದೆ. ಇನ್ನು ತೆಲಂಗಾಣ ಭಾಗದಲ್ಲಿ TRS ತನ್ನ ಶಕ್ತಿಯನ್ನು ಇನ್ನಷ್ಟು ವೃದ್ದಿಗೊಳಿಸಿ ಕೊಳ್ಳಲಿದೆ. ಇನ್ನು ಪ್ರಧಾನಿಗೆ ಯಾರು ಸೂಕ್ತ ಎನ್ನುವ ಪಶ್ನೆಗೆ ನರೇಂದ್ರ ಮೋದಿ ಉತ್ತಮ ಆಯ್ಕೆ ಎಂದಿದ್ದಾರೆ ಆಂಧ್ರದ ಜನತೆ.

ಸಮೀಕ್ಷೆ ಪ್ರಕಾರ ಆಂಧ್ರದಲ್ಲಿ ಯಾರಿಗೆ ಎಷ್ಟು?

ಸಮೀಕ್ಷೆ ಪ್ರಕಾರ ಆಂಧ್ರದಲ್ಲಿ ಯಾರಿಗೆ ಎಷ್ಟು?

ಕಾಂಗ್ರೆಸ್ - 5 ರಿಂದ 9 ಸ್ಥಾನ
ತೆಲುಗುದೇಶಂ - 9 ರಿಂದ 15 ಸ್ಥಾನ
ವೈಎಸ್ಆರ್ ಕಾಂಗ್ರೆಸ್ - 11 ರಿಂದ 19 ಸ್ಥಾನ
ಟಿ ಆರ್ ಎಸ್ - 4 ರಿಂದ 8 ಸ್ಥಾನ
ಇತರರು - 0 ರಿಂದ 4 ಸ್ಥಾನ

ಕೇರಳ

ಕೇರಳ

ಕೇರಳದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತೆ ತನ್ನ ಪ್ರಾಭಲ್ಯ ಮೆರೆಯುಲಿದೆ ಎನ್ನುವುದು ಸಮೀಕ್ಷೆಯಲ್ಲಿನ ವರದಿ. ರಾಜ್ಯದ ಒಟ್ಟು 20 ಸ್ಥಾನಗಳಲ್ಲಿ ಕಾಂಗ್ರೆಸ್ - ಯುಡಿಎಫ್ 12 ರಿಂದ 18 ಸ್ಥಾನ ಮತ್ತು LDF 2 ರಿಂದ 8 ಸ್ಥಾನ ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

English summary
Pre Poll survey conducted by Rajniti - IBN National tracker poll of Three states of South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X