ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

19 ವರ್ಷ ಹಳೆಯ ವಿಡಿಯೋ ವಿಶ್ವದಾದ್ಯಂತ ಟ್ರೆಂಡಿಂಗ್: ಯಾರೀ ನೇಸಮಣಿ?

|
Google Oneindia Kannada News

ಬೆಂಗಳೂರು, ಮೇ 30: 'ಪ್ರೇ ಫಾರ್ ನೇಸಮಣಿ' (#prayfornesamani) ಎಂಬ ಹ್ಯಾಷ್‌ಟ್ಯಾಗ್ ಇಡೀಯ ವಿಶ್ವದಲ್ಲಿ ಟ್ರೆಂಡ್ ಆಗುತ್ತಿದೆ. ಯಾರೀ ನೇಸಮಣಿ ಆತನಿಗೆ ಏನಾಯಿತು ಎಂದು ತಿಳಿದುಕೊಳ್ಳಬೇಕೆಂದರೆ 19 ವರ್ಷದ ಹಿಂದಕ್ಕೆ ಹೋಗಬೇಕು.

19 ವರ್ಷದ ಹಿಂದೆ ತಮಿಳಿನಲ್ಲಿ ಸಿನಿಮಾವೊಂದು ಬಿಡುಗಡೆ ಆಗಿತ್ತು, ಅದರ ಹೆಸರು ಫ್ರೆಂಡ್ಸ್‌ ವಿಜಯ್ ಮತ್ತು ಸೂರ್ಯ ನಾಯಕರಾಗಿದ್ದ ಆ ಚಿತ್ರ ಭಾರಿ ಹಿಟ್ ಆಗಿ ಹಲವು ಭಾಷೆಗಳಲ್ಲಿ ರೀಮೇಕ್ ಸಹ ಆಗಿತ್ತು. ಆ ಸಿನಿಮಾಕ್ಕೂ ಪ್ರೇ ಫಾರ್ ನೇಸಮಣಿಗೂ ನೇರ ಸಂಬಂಧವಿದೆ.

ಆಹಾ ! ಎಷ್ಟು ಮುದ್ದು ಎಂದು ಕಾಂಗ್ರೆಸ್ ನಾಯಕಿ ರಮ್ಯಾ ಟ್ವೀಟ್ಆಹಾ ! ಎಷ್ಟು ಮುದ್ದು ಎಂದು ಕಾಂಗ್ರೆಸ್ ನಾಯಕಿ ರಮ್ಯಾ ಟ್ವೀಟ್

ಆ ಸಿನಿಮಾದಲ್ಲಿನ ಪಾತ್ರಧಾರಿಯ ಹೆಸರೇ ನೇಸಮಣಿ. ಆ ಪಾತ್ರವನ್ನು ಭಾರತದ ಖ್ಯಾತ ಹಾಸ್ಯನಟ ವಡಿವೇಲು ನಿರ್ವಹಸಿದ್ದರು. ಆದರೆ ಈಗೇಕೆ ನೇಸಮಣಿಗಾಗಿ ಜನ ಪ್ರಾರ್ಥಿಸುತ್ತಿದ್ದಾರೆ ಎಂಬುದು ಕುತೂಹಲ.

ಸಿನಿಮಾದಲ್ಲಿ ಮೇಸ್ತ್ರಿ ನೇಸಮಣಿಯ ತಲೆಯ ಮೇಲೆ ಸುತ್ತಿಗೆಯೊಂದು ಬಿದ್ದು ಆತ ಮೂರ್ಛೆ ಹೋಗುತ್ತಾನೆ, ಇತರ ಕೆಲವು ಹಾಸ್ಯ ಪಾತ್ರಗಳು ಆತನ ಮೇಲೆ ಬಟ್ಟೆ ಹೊದಿಸಿ ರಸ್ತೆಯಲ್ಲಿ ಇರಿಸಿ ಹೋಗುತ್ತವೆ. ಇದಿಷ್ಟೆ ಹಾಸ್ಯ ದೃಶ್ಯ ಆದರೆ, ಇಡೀಯ ವಿಶ್ವವೇ ಈಗ 19 ವರ್ಷದ ನಂತರ ನೇಸಮಣಿ ಬೇಗ ಹುಷಾರಾಗಲಿ ಎಂದು ಹಾರೈಸುತ್ತಿದೆ.

ವಿಡಿಯೋ ವೈರಲ್: ಮಂಗಳೂರಿನ ರಸ್ತೆ ಪರಿಸ್ಥಿತಿ ಅಣಕಿಸಿದ ಮಿಲ್ಕ್ ಶೇಕ್ ಚಾಲೆಂಜ್ವಿಡಿಯೋ ವೈರಲ್: ಮಂಗಳೂರಿನ ರಸ್ತೆ ಪರಿಸ್ಥಿತಿ ಅಣಕಿಸಿದ ಮಿಲ್ಕ್ ಶೇಕ್ ಚಾಲೆಂಜ್

ಆದದ್ದಿಷ್ಟು ಟ್ವಿಟ್ಟರ್‌ನಲ್ಲಿ ಪಾಕಿಸ್ತಾನದ ಪ್ರಸಿದ್ಧ ಟ್ರೋಲ್ ಪೇಜ್ ಒಂದು ಸುತ್ತಿಗೆಯ ಚಿತ್ರ ಹಾಕಿ ಇದನ್ನು ನಿಮ್ಮ ದೇಶದಲ್ಲಿ ಏನೆನ್ನುತ್ತಾರೆ ಎಂದು ಪ್ರಶ್ನೆ ಮಾಡಿತ್ತು. ಇದಕ್ಕೆ ತಮಿಳುನಾಡಿನ ಹುಡುಗನೊಬ್ಬ ಪ್ರತಿಕ್ರಿಯಿಸಿ ಇದನ್ನು ಸುತ್ತಿಗೆ ಎನ್ನುತ್ತಾರೆ, ಇದು ನಮ್ಮ ನೇಸಮಣಿಯ ತಲೆಯ ಮೇಲೆ ಬಿದ್ದು ಆತ ಕೋಮಾಕ್ಕೆ ಹೋಗಿದ್ದ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾನೆ.

ಆ ಪ್ರತಿಕ್ರಿಯೆಗೆ ಮತ್ತಷ್ಟು ಪ್ರತಿಕ್ರಿಯೆಗಳು ಸೇರಿಕೊಂಡಿವೆ. ಯಾರು ನೇಸಮಣಿ, ಏನಾಗಿದೆ ಅವರಿಗೆ ಎಂಬಲ್ಲಿಂದ ಪ್ರಾರಂಭವಾಗಿದ್ದು, ಪ್ರೇ ಫಾರ್ ನೇಸಮಣಿ ಎಂದು ಹ್ಯಾಷ್‌ಟ್ಯಾಗ್ ಪ್ರಾರಂಭವಾಗಿ ಇಡೀಯ ವಿಶ್ವದಾದ್ಯಂತ ಭಾರಿ ಚಾಲ್ತಿಗೆ ಬಂದಿದೆ. ದೊಡ್ಡ-ದೊಡ್ಡ ಸಿನಿಮಾ ಸ್ಟಾರ್‌ಗಳು, ಕ್ರಿಕೆಟರ್‌ಗಳು, ಪತ್ರಕರ್ತರು, ಪ್ರಾಂಚೈಸಿಗಳು, ಸಂಸ್ಥೆಗಳು ಪ್ರೇ ಫಾರ್ ನೇಸಮಣಿ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ.

ಅಪೋಲೋ ಆಸ್ಪತ್ರೆಯಿಂದ ಹೇಳಿಕೆ ಬಿಡುಗಡೆ

ಅಪೋಲೋ ಆಸ್ಪತ್ರೆಯು ನೇಸಮಣಿ ಆರೋಗ್ಯದ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ನೇಸಮಣಿ ಅವರ ಆರೋಗ್ಯ ಸುಧಾರಿಸಿದೆ. ಅವರು ಬೆಳಿಗ್ಗೆ ಎರಡು ಇಡ್ಲಿ ತಿಂದಿದ್ದಾರೆ ಎಂದು ಹೇಳಿದೆ. ಕಾಂಟ್ರಾಕ್ಟರ್ ನೇಸಮಣಿ ಅವರನ್ನು ತಜ್ಞರ ತಂಡ ನೋಡಿಕೊಳ್ಳುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ನೇಸಮಣಿಗೆ ಎನ್‌ಜಿಕೆಗಿಂತಲೂ ದೊಡ್ಡ ಕಟೌಟ್‌

ಸೂರ್ಯ ಅವರ ಹೊಸ ಚಿತ್ರ ಎನ್‌ಜಿಕೆಗೆ ಭಾರತದಲ್ಲಿ ಅತಿ ದೊಡ್ಡ ಕಟೌಟ್‌ ಅನ್ನು ಕಟ್ಟಲಾಗಿದೆ. ಆದರೆ ನೇಸಮಣಿ ಅವರ ಆರೋಗ್ಯ ಸುಧಾರಿಸಲಿ ಎಂದು ಕಟ್ಟಿರುವ ಕಟೌಟ್‌ ಸೂರ್ಯ ಕಟೌಟ್‌ಗಿಂತಲೂ ದೊಡ್ಡದು, ಪ್ರೇ ಫಾರ್ ನೇಸಮಣಿ.

ಧೋನಿ ಮಾತ್ರವೇ ನೇಸಮಣಿಯ ಕಾಪಾಡಬಲ್ಲ

ನೇಸಮಣಿಯನ್ನು ಕಾಪಾಡಬಹುದಾಗಿದ್ದ ಏಕೈಕ ವ್ಯಕ್ತಿ ಈಗ ಇಂಗ್ಲೆಂಡ್‌ ನಲ್ಲಿ ಭಾರತದ ತಂಡದಲ್ಲಿ ಆಡುತ್ತಿದ್ದಾರೆ ಎಂದು ಮಹೇಂದ್ರ ಸಿಂಗ್ ಧೋನಿಯ ಚಿತ್ರವನ್ನು ಟ್ವೀಟ್ ಮಾಡಿದೆ ಚೆನ್ನೈ ಸೂಪರ್ ಕಿಂಗ್ಸ್‌. ಪಾಪ ನೇಸಮಣಿ.

ನೇಸಮಣಿಗಾಗಿ ಹರಭಜನ್ ಸಿಂಗ್ ಟ್ವೀಟ್

ನೇಸಮಣಿ ಅವರಿಗೆ ಹಳದಿ ಬಣ್ಣದ ತಲೆ ಸುತ್ತಿಕೊಳ್ಳುವ ಪೇಟವೆಂದರೆ ಭಾರಿ ಅಚ್ಚುಮೆಚ್ಚು ನನ್ನ ರೀತಿಯಲ್ಲೇ, ನೇಸಮಣಿ ಆದಷ್ಟು ಬೇಗ ಗುಣಮುಖವಾಗಲಿ ಎಂದು ಕ್ರಿಕೆಟರ್ ಹರಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಪಾಪ ಬಹಳ ಕಷ್ಟಪಡುತ್ತಿದೆ

ಬಿಜೆಪಿ ಐಟಿ ಸೆಲ್‌ ಪಾಪ ಬಹಳ ಕಷ್ಟಪಡುತ್ತಿದೆ. ಇಂದು ಮೋದಿ ಪ್ರಮಾಣ ವಚನವನ್ನು ಟ್ರೆಂಡ್ ಮಾಡಲು ಬಿಜೆಪಿ ಬಹಳ ಶ್ರಮಪಡುತ್ತಿದೆ ಆದರೆ ಪ್ರೇ ಫಾರ್ ನೇಸಮಣಿ ಮೋದಿಯನ್ನೂ ಮೀರಿಸಿ ಬಿಟ್ಟಿದ್ದಾರೆ ಎನ್ನುತ್ತಿವೆ ಕೆಲವು ಟ್ವೀಟ್‌

ಸಂತಾಪ ಸೂಚಿಸಿದ ಏರ್‌ಇಂಡಿಯಾ ಏಷ್ಯಾ

ವಿಮಾನ ಯಾನ ಸಂಸ್ಥೆ ಏರ್‌ಇಂಡಿಯಾ ಏಷ್ಯಾ ಸಹ ಪ್ರೇ ಫಾರ್ ನೇಸಮಣಿ ಟ್ವೀಟ್‌ ಮಾಡಿದ್ದು, ತಲೆಗೆ ಪೆಟ್ಟಾಗಿರುವ ವ್ಯಕ್ತಿಯ ಚಿತ್ರವೊಂದನ್ನು ಪ್ರಕಟಿಸಿ ನೇಸಮಣಿಯು ಬೇಗ ಹುಷಾರಾಗಲಿ ಎಂದು ಕೋರಿದೆ.

ಬಿಬಿಸಿ ಸುದ್ದಿವಾಹಿನಿಯಲ್ಲಿ ನೇಸಮಣಿ

ವಿಶ್ವದಾದ್ಯಂತ ನೇಸಮಣಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಾಧ್ಯಮಗಳೂ ಸಹ ನೇಸಮಣಿಯ ಹಿಂದೆ ಬಿದ್ದಿವೆ. ಬಿಬಿಸಿ ನ್ಯೂಸ್‌ ತನ್ನ ವೆಬ್‌ಸೈಟ್‌ನಲ್ಲಿ 'ನೇಸಮಣಿ ಯಾರು, ಆತನಿಗೆ ಏನಾಗಿದೆ' ಎಂಬ ಶಿರೋನಾಮೆಯಲ್ಲಿ ಸುದ್ದಿಯೊಂದನ್ನು ಪ್ರಕಟಿಸಿದೆ.

ಮೋದಿಗಿಂತಲೂ ಫೇಮಸ್ ಆದ ನೇಸಮಣಿ

ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡ್‌ನಲ್ಲಿರುವ ನೇಸಮಣಿ ಗೂಗಲ್‌ನಲ್ಲಿಯೂ ಟಾಪ್‌ನಲ್ಲಿದ್ದಾರೆ. ಗೂಗಲ್‌ನಲ್ಲಿ who is ಎಂದು ಟೈಲಿಸಿದರೆ ಗೂಗಲ್ ಮೊದಲು ಸಜೆಸ್ಟ್‌ ಮಾಡುತ್ತಿರುವುದು ನೇಸಮಣಿಯ ಹೆಸರನ್ನು ನಂತರದ ಸ್ಥಾನ ಮೋದಿಗೆ. ಇಂಥಹಾ ನೇಸಮಣಿಗಾಗಿ ಪ್ರಾರ್ಥಿಸಿ!

ಸೋನಿ ಮ್ಯೂಸಿಕ್‌ ಸಹ ಪ್ರಾರ್ಥಿಸಿದೆ

ವಿಶ್ವವಿಖ್ಯಾತ ಸಂಗೀತ ಮತ್ತು ಮೊಬೈಲ್, ಎಲೆಕ್ಟ್ರಾನಿಕ್ ಗೆಜೆಟ್ ಸಂಸ್ಥೆ ಸೋನಿ ಸಹ ನೇಸಮಣಿಗಾಗಿ ಪ್ರಾರ್ಥಿಸಿದೆ. ನೇಸಮಣಿಗಾಗಿ ಎಲ್ಲರೂ ಪ್ರಾರ್ಥಿಸೋಣ ಎಂದು ಕೈಮುಗಿದು ದೇವರಲ್ಲಿ ಬೇಡಿಕೊಳ್ಳುತ್ತಿದೆ ಸೋನಿ ಸೌತ್ ಮ್ಯೂಸಿಕ್‌

English summary
Pray for Nesamani is widely trending all over the world. people searching for who is Nesamani and what happened to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X