ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವರಾದ ಮೊದಲ ತ್ರಿಪುರ ನಿವಾಸಿ ಪ್ರತಿಮಾ ಭೌಮಿಕ್‌

|
Google Oneindia Kannada News

ಅಗರ್ತಲಾ, ಜು.08: ತ್ರಿಪುರಾ ರಾಜ್ಯದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ-ನಾಯಕರಲ್ಲಿ ಒಬ್ಬರಾದ ಪ್ರತಿಮಾ ಭೌಮಿಕ್‌ ಕೇಂದ್ರ ಸಚಿವರಾದ ಮೊದಲ ತ್ರಿಪುರ ನಿವಾಸಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

52 ವರ್ಷದ ಪ್ರತಿಮಾ ಭೌಮಿಕ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವೆಯಾಗಿದ್ದಾರೆ. 'ಪ್ರತಿಮಾ ದಿ' ಎಂದೇ ಪರಿಚಿತರಾಗಿರುವ ಭೌಮಿಕ್ ತ್ರಿಪುರಾ ರಾಜ್ಯದ ಬಿಜೆಪಿಯ ಹಿರಿಯ ನಾಯಕರು.

ನರೇಂದ್ರ ಮೋದಿ ಸರಕಾರ ಮತ್ತು 16 ಮಹಿಳಾ ಶಕ್ತಿಗಳುನರೇಂದ್ರ ಮೋದಿ ಸರಕಾರ ಮತ್ತು 16 ಮಹಿಳಾ ಶಕ್ತಿಗಳು

ವಿಜ್ಞಾನ ಪದವೀಧರರಾದ ಭೌಮಿಕ್ 1991 ರಲ್ಲಿ ಪಕ್ಷಕ್ಕೆ ಸೇರಿದ್ದಾರೆ. ಅಂದಿನಿಂದ ರಾಜ್ಯದಲ್ಲಿ ಸಾಂಸ್ಥಿಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. 1998 ಮತ್ತು 2018 ರಲ್ಲಿ ತ್ರಿಪುರದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ವಿರುದ್ಧ ಎರಡು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು ಎರಡು ಬಾರಿಯೂ ಪರಾಭವಗೊಂಡಿದ್ದಾರೆ. 2019 ರಲ್ಲಿ ತ್ರಿಪುರಾದಿಂದ ಮೊದಲ ಬಾರಿಗೆ ಸಂಸತ್ ಸದಸ್ಯರಾದರು.

Pratima Bhowmik is first Tripura resident to become Union minister

ಶಾಲಾ ಶಿಕ್ಷಕನ ಮಗಳಾದ ಭೌಮಿಕ್ ಸೋನಮುರಾದ ತನ್ನ ಸ್ಥಳೀಯ ಬಾರನಾರಾಯಣ್ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ ಖೋ-ಖೋ ಮತ್ತು ಕಬಡ್ಡಿ ಆಟಗಳಲ್ಲಿ ಬ್ಲಾಕ್, ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕೀರ್ತಿಯೂ ಭೌಮಿಕ್‌ಗೆ ಇದೆ.

ಈ ಹಿಂದೆ ಪಶ್ಚಿಮ ಬಂಗಾಳದವರಾಗಿದ್ದರೂ ರಾಜ್ಯಸಭೆಯಲ್ಲಿ ತ್ರಿಪುರವನ್ನು ಪ್ರತಿನಿಧಿಸಿದ ತ್ರಿಗುನ ಸೇನ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದರು. ಅಸ್ಸಾಂ ನಿವಾಸಿ ಸಂತೋಷ್ ಮೋಹನ್ ದೇವ್ 1989 ರಲ್ಲಿ ಪಶ್ಚಿಮ ತ್ರಿಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಂಪುಟದಲ್ಲಿ ಸಚಿವರಾದರು.

ಮೋದಿ ಸಂಪುಟ ವಿಸ್ತರಣೆ: ಇಲ್ಲಿದೆ ಸಚಿವರುಗಳ ವಿದ್ಯಾರ್ಹತೆ ವಿವರಮೋದಿ ಸಂಪುಟ ವಿಸ್ತರಣೆ: ಇಲ್ಲಿದೆ ಸಚಿವರುಗಳ ವಿದ್ಯಾರ್ಹತೆ ವಿವರ

ಆದರೆ ಪ್ರತಿಮಾ ಭೌಮಿಕ್‌ ಕೇಂದ್ರ ಸಚಿವರಾದ ಮೊದಲ ತ್ರಿಪುರ ನಿವಾಸಿಯಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಅಸ್ಸಾಂನ ಬಿಜಯಾ ಚಕ್ರವರ್ತಿ ನಂತರ ಭೌಮಿಕ್ ಈಶಾನ್ಯದಿಂದ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಎರಡನೇ ಮಹಿಳೆಯಾಗಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Pratima Bhowmik, 52, is the first resident of Tripura to become a Union minister. She is among the senior-most leaders of the Bharatiya Janata Party (BJP) in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X