ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಮನೆಗೆ ಭೇಟಿ ನೀಡಿದ ಮುಖರ್ಜಿ

By Sachhidananda Acharya
|
Google Oneindia Kannada News

ನಾಗ್ಪುರ, ಜೂನ್ 7: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ಬಂದಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಸಂಘದ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡಗೇವಾರ್ ಮನೆಗೆ ಭೇಟಿ ನೀಡಿದರು.

ಹೆಡಗೇವಾರ್ ಮನೆಗೆ ಆಗಮಿಸಿದ ಅವರನ್ನು ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗ್ವತ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ ಸ್ವಾಗತಿಸಿದರು.

Pranab visits Hedgewar birthplace ahead of RSS speech

ನೆಹರೂ, ಇಂದಿರಾಗೂ ಇತ್ತು ಆರ್‌ಎಸ್‌ಎಸ್‌ ಜತೆ ಬಾಂಧವ್ಯನೆಹರೂ, ಇಂದಿರಾಗೂ ಇತ್ತು ಆರ್‌ಎಸ್‌ಎಸ್‌ ಜತೆ ಬಾಂಧವ್ಯ

ಮೂಲಗಳ ಪ್ರಕಾರ ಮುಖರ್ಜಿಯವರ ಕಾರ್ಯಕ್ರಮಗಳ ಪಟ್ಟಿಯಲ್ಲಿ ಹೆಡಗೇವಾರ್ ನಿವಾಸಕ್ಕೆ ಭೇಟಿ ನೀಡುವ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆದರೆ ಆರ್.ಎಸ್.ಎಸ್ ನ ಎರಡು ಮತ್ತು ಮೂರನೇ ವರ್ಷದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ, 'ಶಿಕ್ಷಾ ವರ್ಗ್'ನಲ್ಲಿ ಭಾಗವಹಿಸಲು ಬುಧವಾರವೇ ನಾಗ್ಪುರಕ್ಕೆ ಆಗಮಿಸಿದ್ದ ಮುಖರ್ಜಿ ಇಂದು ಹೆಡಗೇವಾರ್ ನಿವಾಸಕ್ಕೆ ಭೇಟಿ ನೀಡಿದರು.

ಆರೆಸ್ಸೆಸ್ ಕಾರ್ಯಕ್ರಮಕ್ಕೆ ಪ್ರಣವ್ ಮುಖರ್ಜಿ, ಕಾಂಗ್ರೆಸ್ ನಲ್ಲಿ ಕಂಪನಆರೆಸ್ಸೆಸ್ ಕಾರ್ಯಕ್ರಮಕ್ಕೆ ಪ್ರಣವ್ ಮುಖರ್ಜಿ, ಕಾಂಗ್ರೆಸ್ ನಲ್ಲಿ ಕಂಪನ

ಇದೀಗ ಅವರು ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಾಗ್ಪುರದ ಆರ್.ಎಸ್.ಎಸ್ ಕೇಂದ್ರ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅವರು ಕೇಂದ್ರ ಕಚೇರಿಯಲ್ಲಿ ಹೆಡಗೇವಾರ್ ಪುಥ್ಥಳಿಗೆ ಹಾರಾರ್ಪಣೆ ಮಾಡಲಿದ್ದಾರೆ. ನಂತರ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.

English summary
Former President and the Congress veteran Pranab Mukherjee today visited the birth place of the RSS founding Sarsanghachalak Keshav Baliram Hedgewar ahead of his much-anticipated speech at the Sangh headquarters here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X