ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ವಾಗ್ದಾಳಿ; ಬೆಂಬಲಕ್ಕೆ ನಿಂತ ಪ್ರಕಾಶ್ ರೈ

|
Google Oneindia Kannada News

"ರಾಹುಲ್ ಗಾಂಧಿ ಅವರು ಮಹಿಳೆಯರಿಗೆ ವಿರುದ್ಧ ಅಲ್ಲ. ಅತಿ ಮುಖ್ಯವಾಗಿ ಹುದ್ದೆಗೆ ತೃತೀಯಲಿಂಗಿಯೊಬ್ಬರನ್ನು ಅವರು ನೇಮಿಸಿದ್ದಾರೆ. ಏಕೆ ಅವರ ಹೇಳಿಕೆಯನ್ನು ಒಂದೇ ದಾರಿಯಲ್ಲಿ ನೋಡ್ತೀರಿ? ಪ್ರಧಾನಿ ಮೋದಿ ಅವರು ಉತ್ತರ (ರಫೇಲ್ ಪ್ರಶ್ನೆಗಳಿಗೆ) ಹೇಳಿಲ್ಲ ಹಾಗೂ ಸಂಸತ್ ನಲ್ಲಿ ಇಲ್ಲ ಅನ್ನೋದು ನಿಜವಲ್ಲವಾ?" ಎಂದು ನಟ ಪ್ರಕಾಶ್ ರೈ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರದ ಟೀಕಾಕಾರರಾದ ಪ್ರಕಾಶ್ ರೈ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರ ಮೇಲೆ ರಾಹುಲ್ ಗಾಂಧಿ ನಡೆಸುತ್ತಿರುವ ವಾಗ್ದಾಳಿಗೆ ವಿರೋಧ ವ್ಯಕ್ತವಾಗುತ್ತಿದೆ.

ಲೋಕಸಭಾ ಚುನಾವಣೆಗೆ ಸ್ಪರ್ಧೆ: ಕ್ಷೇತ್ರ ಫೈನಲ್ ಮಾಡಿದ ಪ್ರಕಾಶ್ ರೈಲೋಕಸಭಾ ಚುನಾವಣೆಗೆ ಸ್ಪರ್ಧೆ: ಕ್ಷೇತ್ರ ಫೈನಲ್ ಮಾಡಿದ ಪ್ರಕಾಶ್ ರೈ

ಸಂಸತ್ ನಲ್ಲಿ ನಡೆಯುತ್ತಿರುವ ರಫೇಲ್ ಯುದ್ಧ ವಿಮಾನ ಖರೀದಿ ಚರ್ಚೆಯಿಂದ ಪ್ರಧಾನಿ ಮೋದಿ ಓಡಿಹೋಗಿದ್ದಾರೆ. ಅವರ ಬದಲು ದೇಶದ ಮೊದಲ ಬಾರಿಗೆ ರಕ್ಷಣಾ ಖಾತೆ ಹೊಣೆ ಹೊತ್ತಿರುವ ಮಹಿಳೆಯನ್ನು ಮುಂದೆ ಬಿಟ್ಟಿದ್ದಾರೆ ಎಂದು ರಾಹುಲ್ ಆರೋಪ ಮಾಡಿದ್ದರು.

Prakash Raj supports Rahul Gandhi in row over remark against Nirmala Sitharaman

ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದರು. ಭಾರತದ ಮಹಿಳಾ ಶಕ್ತಿಗೆ ಇದು ಅವಮಾನ ಎಂದಿದ್ದರು. "ಅವರು ರಕ್ಷಣಾ ಸಚಿವೆಗೆ ಅವಮಾನ ಮಾಡುತ್ತಿದ್ದಾರೆ. ಇದು ಮಹಿಳೆಯೊಬ್ಬರಿಗೆ ಮಾಡುತ್ತಿರುವ ಅವಮಾನ ಅಲ್ಲ. ಭಾರತದ ಇಡೀ ಸ್ತ್ರೀ ಶಕ್ತಿಗೆ ಮಾಡುತ್ತಿರುವ ಅವಮಾನ. ಇಂಥ ಬೇಜವಾಬ್ದಾರಿ ನಾಯಕರು ಇದಕ್ಕಾಗಿ ಬೆಲೆ ತೆರುತ್ತಾರೆ" ಎಂದು ಮೋದಿ ಹೇಳಿದ್ದರು.

'ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?''ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?'

ರಾಹುಲ್ ಗಾಂಧಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಗುರುವಾರ ನೋಟಿಸ್ ಕೂಡ ನೀಡಲಾಗಿದೆ. ಇನ್ನು ನಟ ಪ್ರಕಾಶ್ ರೈ ಇತ್ತೀಚೆಗೆ ಹೇಳಿಕೆ ನೀಡಿ, ಮುಂಬರುವ ಲೋಕಸಭಾ ಚುನಾವಣೆಗೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು.

English summary
Congress president Rahul Gandhi who has been under attack for his comments attacking defence minister Nirmala Sitharaman found support from actor Prakash Raj on Thursday. The actor, a vocal critic of the NDA government, hinted that the Congress chief’s statement has been misconstrued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X