• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ.15 ರಂದು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಮೂರನೇ ಹಂತ ಆರಂಭ

|

ನವದೆಹಲಿ,ಜನವರಿ 14: ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯ ಮೂರನೇ ಹಂತ ಜನವರಿ 15 ರಂದು ಆರಂಭಿಸಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಯೋಜನೆಯನ್ನು ದೇಶದ 600 ಜಿಲ್ಲೆಗಳಲ್ಲಿ ಶುಕ್ರವಾರ ಆರಂಭಿಸಲಾಗುತ್ತದೆ, ಸ್ಕಿಲ್ ಇಂಡಿಯಾ ಮಿಷನ್ -ಪಿಎಂಕೆವಿವೈ ಮೂರನೇ ಹಂತರದಲ್ಲಿ 2020-2021ರ ಸ್ಕೀಮ್ ಅವಧಿಯಲ್ಲಿ ಎಂಟು ಲಕ್ಷ ಅಭ್ಯರ್ಥಿಗಳಿಗೆ 948.90 ಕೋಟಿ ರೂ ವೆಚ್ಚದಲ್ಲಿ ತರಬೇತಿ ನೀಡಲಾಗುವುದು. 729 ಪ್ರಧಾನಮಂತ್ರಿ ಕೌಶಲ್ಯ ಕೇಂದ್ರಗಳು (ಪಿಎಂಕೆಕೆಗಳು), 200 ಕ್ಕೂ ಹೆಚ್ಚು ಐಟಿಐಗಳಲ್ಲಿ ತರಬೇತಿ ನೀಡಲಾಗುವುದು.

ಪಿಎಂಕೆವಿವೈ -1.0 ಮತ್ತು ಪಿಎಂಕೆವಿವೈ- 2.0 ಯಿಂದ ಪಡೆದ ಕಲಿಕೆಯ ಆಧಾರದ ಮೇಲೆ, ಸದ್ಯ ನೀತಿ ಸಿದ್ಧಾಂತಕ್ಕೆ ಹೊಂದಿಕೆಯಾಗುವಂತೆ ಮತ್ತು ಸಿಒವಿಐಡಿ -19 ಸಾಂಕ್ರಾಮಿಕ ರೋಗದಿಂದ ಪ್ರಭಾವಿತವಾದ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಬಲಗೊಳಿಸಲು ಸಚಿವಾಲಯ ಯೋಜನೆಯ ಹೊಸ ಆವೃತ್ತಿಯನ್ನು ಆರಂಭಿಸುತ್ತಿದೆ.

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂಎಸ್ ಡಿಇ) ನೇತೃತ್ವದಲ್ಲಿ ಮೂರನೇ ಹಂತವು ಹೊಸ-ಯುಗ ಮತ್ತು ಕೋವಿಡ್ ಸಂಬಂಧಿತ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಲಿದೆ.

English summary
The third phase of Pradhan Mantri Kaushal Vikas Yojana (PMKVY 3.0) will be launched on Friday in 600 districts across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X