ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಮತ ಚಲಾವಣೆ; ಮನೆಗೆ ಬರಲಿದೆ ಮತ ಪತ್ರ

|
Google Oneindia Kannada News

ನವದೆಹಲಿ, ಅಕ್ಟೋಬರ್ 05: ಅಂಚೆ ಮತ ಚಲಾಯಿಸುವ ಪ್ರಕ್ರಿಯೆಯನ್ನು ಕೇಂದ್ರ ಚುನಾವಣಾ ಆಯೋಗ ಸರಳಗೊಳಿಸಿದೆ. ಅಂಗವಿಕಲರು ಮತ್ತು 80 ವರ್ಷ ಮೇಲ್ಪಟ್ಟವರು ಅಂಚೆ ಮತಪತ್ರದ ಮೂಲಕ ಮತವನ್ನು ಚಲಾಯಿಸಬಹುದಾಗಿದೆ.

ಅಂಚೆ ಮತ ಚಲಾವಣೆ ಮಾಡುವ ವ್ಯಕ್ತಿಯ ಮನೆಗೆ ಮತಗಟ್ಟೆ ಅಧಿಕಾರಿಗಳು 12-ಡಿ ಅರ್ಜಿ ನಮೂನೆಯನ್ನು ತಲುಪಿಸಲಿದ್ದಾರೆ. ಈ ಕುರಿತು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಂಚೆ ಮತಗಳ ಚಲಾವಣೆ; ವಯೋಮಿತಿ ಇಳಿಕೆ ಇಲ್ಲ ಅಂಚೆ ಮತಗಳ ಚಲಾವಣೆ; ವಯೋಮಿತಿ ಇಳಿಕೆ ಇಲ್ಲ

ಚುನಾವಣಾ ಅಧಿಸೂಚನೆ ಪ್ರಕಟವಾದ ಐದು ದಿನದೊಳಗೆ ಭರ್ತಿ ಮಾಡಿದ 12-ಡಿ ಅರ್ಜಿ ನಮೂನೆಯನ್ನು ಮತದಾರರಿಂದ ಪಡೆದು ಚುನಾವಣಾಧಿಕಾರಿಗಳಿಗೆ ಮತಗಟ್ಟೆ ಅಧಿಕಾರಿಗಳು ನೀಡಬೇಕು.

ಅಂಚೆ ಮತಗಳ ಚಲಾವಣೆ; ವಯೋಮಿತಿ ಸಡಿಲಿಕೆ ಅಂಚೆ ಮತಗಳ ಚಲಾವಣೆ; ವಯೋಮಿತಿ ಸಡಿಲಿಕೆ

Postal Vote 12 D Form Will Come To Door Step

ಚುನಾವಣಾಧಿಕಾರಿ ನಿಯೋಜನೆ ಮಾಡುವ ತಂಡ ಪೂರ್ವ ನಿಗದಿಪಡಿಸಿದ ದಿನಾಂಕದಂದು ಅಂಚೆ ಮತಪತ್ರಗಳನ್ನು ವ್ಯಕ್ತಿಯ ಮನೆಗೆ ತಲುಪಿಸುತ್ತವೆ. ಬಳಿಕ ಅಂಚೆ ಮತ ಪತ್ರ ಪಡೆದು ಚುನಾವಣಾಧಿಕಾರಿಗಳಿಗೆ ತಲುಪಿಸಲಿವೆ.

ಶಿರಾ ಉಪ ಚುನಾವಣಾ ಅಖಾಡಕ್ಕೆ ಬಿಗ್ ಬಾಸ್ ಸ್ಪರ್ಧಿ! ಶಿರಾ ಉಪ ಚುನಾವಣಾ ಅಖಾಡಕ್ಕೆ ಬಿಗ್ ಬಾಸ್ ಸ್ಪರ್ಧಿ!

ಸರ್ಕಾರಿ ನೌಕರಿಯಲ್ಲಿರುವವರಿಗೂ ಮತ್ತು ಮನೆಗೆ ತಲುಪಿಸುವ ಅಂಚೆ ಮತ ಮತ್ರಕ್ಕೂ ವ್ಯತ್ಯಾಸವಿದೆ. ಮನೆಗೆ ಬರುವ ಅಂಚೆ ಮತಪತ್ರದ ಜೊತೆ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಪಾರದರ್ಶಕತೆಯನ್ನು ಕಾಪಾಡಲು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.

ಚುನಾವಣಾ ಆಯೋಗದ ಈ ಹೊಸ ಆದೇಶ ಎಲ್ಲಾ ಚುನಾವಣೆ, ಉಪ ಚುನಾವಣೆಗಳಿಗೆ ಅನ್ವಯವಾಗಲಿದೆ. ಕಳೆದ ವಾರ ಘೋಷಣೆ ಮಾಡಲಾದ 56 ವಿಧಾನಸಭಾ ಕ್ಷೇತ್ರ, 1 ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೂ ಅನ್ವಯವಾಗಲಿದೆ.

English summary
Polling officer will send 12 D form to the home for the people who wish to chose postal vote facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X