ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ದರ ಲೀಟರ್‌ಗೆ 25 ರೂ ಇಳಿಸಲು ಸಾಧ್ಯ: ಚಿದಂಬರಂ

|
Google Oneindia Kannada News

ನವದೆಹಲಿ, ಮೇ 23: ಪೆಟ್ರೋಲ್ ದರವನ್ನು ಲೀಟರ್‌ಗೆ 25 ರೂ.ನಷ್ಟು ತಗ್ಗಿಸಲು ಅವಕಾಶವಿದೆ. ಆದರೆ, ಕೇಂದ್ರ ಸರ್ಕಾರವು ಲೀಟರ್‌ಗೆ ಕೇವಲ ಒಂದೆರಡು ರೂಪಾಯಿಯಷ್ಟು ಮಾತ್ರ ಇಳಿಕೆ ಮಾಡಿ ಜನರನ್ನು ವಂಚಿಸುತ್ತಿದೆ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಬುಧವಾರ ಆರೋಪಿಸಿದ್ದಾರೆ.

ಗಗನಕ್ಕೇರಿದ ಇಂಧನ ದರ, ಪರ್ಯಾಯದತ್ತ ಕೇಂದ್ರದ ಚಿಂತನೆ ಗಗನಕ್ಕೇರಿದ ಇಂಧನ ದರ, ಪರ್ಯಾಯದತ್ತ ಕೇಂದ್ರದ ಚಿಂತನೆ

ಕಚ್ಚಾತೈಲದ ಬೆಲೆಯಲ್ಲಿ ಇಳಿಕೆಯಾಗಿದೆ. ಇದರ ಪ್ರಮಾಣಕ್ಕೆ ಅನುಗುಣವಾಗಿ ಪೆಟ್ರೋಲ್ ದರವನ್ನು ಲೇಟರ್‌ಗೆ 15 ರೂ.ನಷ್ಟು ಇಳಿಕೆ ಮಾಡಲು ಸಾಧ್ಯವಿದೆ. ಅಲ್ಲದೆ ಪೆಟ್ರೋಲ್ ಮೇಲಿನ 10 ರೂ. ಹೆಚ್ಚುವರಿ ತೆರಿಗೆಯನ್ನು ಸಹ ಕೇಂದ್ರ ಸರ್ಕಾರ ಕಡಿತ ಮಾಡಬಹುದು. ಇದರಿಂದ ಒಟ್ಟಾರೆ ಪೆಟ್ರೋಲ್ ದರವನ್ನು 25 ರೂ ನಷ್ಟು ತಗ್ಗಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಕಚ್ಚಾ ತೈಲ ಬೆಲೆಯ ಕುಸಿತದಿಂದ ಕೇಂದ್ರ ಸರ್ಕಾರಕ್ಕೆ ಲೀಟರ್‌ಗೆ 15 ರೂಪಾಯಿ ಉಳಿತಾಯವಾಗುತ್ತಿದೆ. ಅಲ್ಲದೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 10 ರೂ. ಹೆಚ್ಚುವರಿ ತೆರಿಗೆಯನ್ನು ವಿಧಿಸುತ್ತಿದೆ ಎಂದು ಚಿದಂಬರಂ ಟ್ವಿಟ್ಟರ್‌ನಲ್ಲಿ ಆರೋಪಿಸಿದ್ದಾರೆ.

possible to reduce the petrol price by rs 25 per litre

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇತ್ತೀಚೆಗೆ ಸತತ ಏರಿಕೆಗಳನ್ನು ಮಾಡುತ್ತಿರುವುದು ದೇಶದ ಅನೇಕ ಕಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ

ಜಾಗತಿಕ ಕಚ್ಚಾ ತೈಲದ ಮೇಲಿನ ದರ ಹೆಚ್ಚಳ ಮತ್ತು ಇರಾನ್ ಮೇಲಿನ ಅಮೆರಿಕದ ನಿರ್ಬಂಧದ ಪರಿಣಾಮ ತೈಲ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಮಂಗಳವಾರ ತಿಳಿಸಿದ್ದರು.

ಬೆಲೆ ಇಳಿಕೆ ಮಾಡಲು ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪೆಟ್ರೋಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಬೆಲೆ ನಿಯಂತ್ರಣ ಸಾಧ್ಯ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಜಿಎಸ್‌ಟಿ ಸಮಿತಿಯಲ್ಲಿ ಒಮ್ಮತ ಮೂಡದ ಹೊರತು ಇದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

English summary
Former Finance minister P. Chidambaram claimed that it is possible to reduce the petrol prices by Rs 25 per litre. But the Central government is cheating the people by cutting fuel price Rs 1 or 2 per litre of petrol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X