ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ದಾಳಿ ಸೂಚನೆ; ಪಂಜಾಬ್‌ನಲ್ಲಿ ಹೈ ಅಲರ್ಟ್

|
Google Oneindia Kannada News

ನವದೆಹಲಿ, ಡಿಸೆಂಬರ್ 26: ವರ್ಷಾಂತ್ಯದಲ್ಲಿ ಪಂಜಾಬ್‌ನಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿದೆ. ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಐಎಸ್ಖಲಿಸ್ತಾನ ಮೂಲದ ಸಂಘಟನೆಗೆ ಪಂಜಾಬ್‌ನಲ್ಲಿ ದಾಳಿ ನಡೆಸುವ ಹೊಣೆಯನ್ನು ನೀಡಿದೆ. ಗುಪ್ತಚರ ಇಲಾಖೆಗೆ ಈ ಬಗ್ಗೆ ಸಿಕ್ಕಿರುವ ಮಾಹಿತಿ ಡಿಕೋಡ್ ಮಾಡಲಾಗಿದ್ದು, ಭದ್ರತೆ ಹೆಚ್ಚಳ ಮಾಡಲಾಗಿದೆ.

ಪಂಜಾಬ್ ನ ಮುಖ್ಯಮಂತ್ರಿ ಪತ್ನಿ- ಸಂಸದೆ ಕೌರ್ ಗೆ ರು. 23 ಲಕ್ಷ ಸೈಬರ್ ವಂಚನೆ ಪಂಜಾಬ್ ನ ಮುಖ್ಯಮಂತ್ರಿ ಪತ್ನಿ- ಸಂಸದೆ ಕೌರ್ ಗೆ ರು. 23 ಲಕ್ಷ ಸೈಬರ್ ವಂಚನೆ

ಪಂಜಾಬ್‌ಗೆ ಸ್ಫೋಟಕಗಳನ್ನು ಸಾಗಣೆ ಮಾಡಲು ಈಗಾಗಲೆ ಒಮ್ಮೆ ಪ್ರಯತ್ನ ಮಾಡಲಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆ ಕೈ ಸೇರಿದೆ. ಪಂಜಾಬ್‌ನ ವಿವಿಧ ನಗರಗಳು ಮತ್ತು ಗಡಿ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಪ.ಬಂಗಾಲ ಮೂಲದ ಆರು ಕಾರ್ಮಿಕರನ್ನು ಕುಲ್ಗಾಂನಲ್ಲಿ ಹತ್ಯೆ ಮಾಡಿದ ಉಗ್ರರುಪ.ಬಂಗಾಲ ಮೂಲದ ಆರು ಕಾರ್ಮಿಕರನ್ನು ಕುಲ್ಗಾಂನಲ್ಲಿ ಹತ್ಯೆ ಮಾಡಿದ ಉಗ್ರರು

Possible Terror Attack High Alert In Punjab

ಖಲಿಸ್ತಾನ ಉಗ್ರರ ಕಾರ್ಯಾಚರಣೆಯ ಪ್ರಮುಖ ಸ್ಥಾನ ಕೆನಡಾದಲ್ಲಿದೆ. ಯು. ಕೆ.ಯಲ್ಲಿಯೂ ತಮ್ಮ ಕಾರ್ಯವನ್ನು ವಿಸ್ತರಣೆ ಮಾಡಲು ಖಲಿಸ್ತಾನ ಉಗ್ರರು ಪ್ರಯತ್ನ ನಡೆಸಿದ್ದರು. ಗುಪ್ತಚರ ಇಲಾಖೆಯೂ ಖಲಿಸ್ತಾನ ಉಗ್ರರ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿತ್ತು.

 ಬಾಲಕೋಟ್‌ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯ: ಏನೇನೆಲ್ಲಾ ಕ್ರಮ? ಬಾಲಕೋಟ್‌ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯ: ಏನೇನೆಲ್ಲಾ ಕ್ರಮ?

2016ರಲ್ಲಿ ಪಂಜಾಬ್‌ನ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿ ನಡೆದಿತ್ತು. ಇದೇ ಮಾದರಿಯ ದಾಳಿಗಳು ನಡೆಯಬಹುದು ಎಂದು ಅಂದಾಜಿಸಲಾಗಿದ್ದು, ಭದ್ರತೆ ಹೆಚ್ಚಳ ಮಾಡಲಾಗಿದೆ. ಸೇನಾಪಡೆಗಳು ಸಹ ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿವೆ.

English summary
ISI has sponsored a major attack in Punjab. Intelligence Bureau officials have picked up intercepts about possible attack. Intercepts suggest that the ISI has tasked the Babbar Khalsa to carry out the attack and there are attempts to smuggle the arms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X