ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರ ಸಂಚಾರದ ಸಮಸ್ಯೆಗೆ ಬಗೆಹರಿಸಲು ಬಂತು ಪೋರ್ಟಲ್

|
Google Oneindia Kannada News

ನವದೆಹಲಿ, ಮೇ 17 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ವಲಸೆ ಕಾರ್ಮಿಕರು ಸಂಚಾರವೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಮಸ್ಯೆಯಾಗಿದೆ. ವಲಸೆ ಕಾರ್ಮಿಕರ ನೋಂದಣಿ, ಸಂಚಾರದ ಮಾಹಿತಿ ಸಂಗ್ರಹ ಮಾಡಲು ಪೋರ್ಟಲ್ ಆರಂಭಿಸಲಾಗಿದೆ.

ಕೇಂದ್ರ ಗೃಹ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಂಟಿಯಾಗಿ "ರಾಷ್ಟ್ರೀಯ ವಲಸೆ ಮಾಹಿತಿ ವ್ಯವಸ್ಥೆ" ಎಂಬ ಪೋರ್ಟಲ್ ಆರಂಭಿಸಿವೆ. ಈ ಪೋರ್ಟಲ್ ಉಪಯೋಗಿಸಿಕೊಂಡು ವಲಸೆ ಕಾರ್ಮಿಕರಿಗೆ ಸೌಲಭ್ಯ ನೀಡಬೇಕು ಎಂದು ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ ನೀಡಿದೆ.

ವಲಸೆ ಕಾರ್ಮಿಕರಿಗೆ ಸರ್ಕಾರದ ಕೈಗೆಟುಕುವ ಬಾಡಿಗೆ ವಸತಿ ಯೋಜನೆ ವಲಸೆ ಕಾರ್ಮಿಕರಿಗೆ ಸರ್ಕಾರದ ಕೈಗೆಟುಕುವ ಬಾಡಿಗೆ ವಸತಿ ಯೋಜನೆ

ವಲಸೆ ಕಾರ್ಮಿಕರು ಸಂಚಾರ ನಡೆಸಲು ಬಯಸಿದರೆ ಪೋರ್ಟಲ್‌ಗೆ ಮೊಬೈನ್ ನಂಬರ್ ಮತ್ತು ಆಧಾರ್ ವಿವರ ನೀಡಿ ನೋಂದಣಿಯಾಗಬಹುದು. ಇದರಿಂದಾಗಿ ರಾಜ್ಯಗಳು ವಸಲೆ ಕಾರ್ಮಿಕರನ್ನು ಹುಡುಕಲು ಅನುಕೂಲವಾಗಲಿದೆ.

ಕರ್ನಾಟಕದಿಂದ ವಾಪಸ್ ಆಗಲು 5 ಲಕ್ಷ ಕಾರ್ಮಿಕರ ನೋಂದಣಿ! ಕರ್ನಾಟಕದಿಂದ ವಾಪಸ್ ಆಗಲು 5 ಲಕ್ಷ ಕಾರ್ಮಿಕರ ನೋಂದಣಿ!

Migrant Workers

4ನೇ ಹಂತದ ಲಾಕ್ ಡೌನ್‌ನಲ್ಲಿಯೂ ವಲಸೆ ಕಾರ್ಮಿಕರ ಸಂಚಾರ ಮುಂದುವರೆಯುವ ಸೂಚನೆಗಳು ಸಿಕ್ಕಿವೆ. ಇನ್ನೂ ಹೆಚ್ಚಿನ ಶ್ರಮಿಕ್ ರೈಲುಗಳನ್ನು ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ಮರಳಲು ಓಡಿಸಲಾಗುತ್ತದೆ ಎಂದು ಕೇಂದ್ರ ರೈಲ್ವೆ ಇಲಾಖೆ ಹೇಳಿದೆ.

ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗೆ ಒಡಿಶಾದಲ್ಲಿ ಸಿಗುತ್ತಿದೆ ವಿಶೇಷ ತರಬೇತಿ!ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗೆ ಒಡಿಶಾದಲ್ಲಿ ಸಿಗುತ್ತಿದೆ ವಿಶೇಷ ತರಬೇತಿ!

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದ್ದು, ಅವರು ವಲಸೆ ಕಾರ್ಮಿಕರನ್ನು ಗುರುತಿಸಿ ಅವರು ಸಂಚಾರ ನಡೆಸಲು ಬಸ್ ವ್ಯವಸ್ಥೆ ಮಾಡಬಹುದಾಗಿದೆ. ರಾಜ್ಯಗಳು ಸಹ ಜಿಲ್ಲಾ ಮಟ್ಟದಲ್ಲಿ ಇದನ್ನು ಮಾಡಿದರೆ ಸರ್ಕಾರಕ್ಕೆ ಹೊರೆ ಕಡಿಮೆಯಾಗಲಿದೆ.

ಸೋಮವಾರದಿಂದ 4ನೇ ಹಂತದ ಲಾಕ್ ಡೌನ್ ಜಾರಿಗೆ ಬರಲಿದೆ. ಹೊಸ ಮಾರ್ಗಸೂಚಿ ಪ್ರಕಾರ ಕಂಟೈನ್‌ಮೆಂಟ್‌ ಝೋನ್‌ಗಳಲ್ಲದ ಪ್ರದೇಶಗಳಲ್ಲಿ ಬಸ್, ಆಟೋಗಳ ಸಂಚಾರಕ್ಕೂ ಷರತ್ತು ಬದ್ಧ ಅನುಮತಿ ನೀಡಲಾಗುತ್ತದೆ. ರಾಜ್ಯಗಳು ಸಲ್ಲಿಸಿದ ಮಾರ್ಗಸೂಚಿ ಅನ್ವಯ ಕೇಂದ್ರ ಗೃಹ ಇಲಾಖೆ ಹೊಸ ಮಾರ್ಗಸೂಚಿ ರಚನೆ ಮಾಡಿದೆ.

English summary
Ministry of Home Affairs and the National Disaster Management Authority have come up with a portal to document the migrant workers transport arrangements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X