ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನು ಮಾರಿ ಟ್ರೋಲ್ ಆದ ಹುಡುಗಿಯ ಮಾನವೀಯತೆಗೆ ಶರಣು!

|
Google Oneindia Kannada News

ತಿರುವನಂತಪುರಂ, ಆಗಸ್ಟ್ 18: ಕೇರಳದ ತಿರುವನಂತಪುರಂನಲ್ಲಿ ಯೂನಿಫಾರ್ಮ್ ಹಾಕಿಕೊಂಡು ಮೀನು ಮಾರುತ್ತಿದ್ದ ಹುಡುಗಿಯೊಬ್ಬಳ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಟ್ರೋಲ್ ಆಗಿತ್ತು. ಕೇರಳದ ಹನಾನ್ ಹಮಿದ್ ಎಂಬ 21 ವರ್ಷ ವಯಸ್ಸಿನ ಈ ಯುವತಿ ಟ್ರೋಲಿಗರಿಗೆಲ್ಲ ಕ್ಯಾರೇ ಎನ್ನದೆ ತನ್ನ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಹೊರಟ ಕತೆಯನ್ನು ಒನ್ ಇಂಡಿಯಾ ನೀಡಿತ್ತು. ಇದೀಗ ಈ ಹುಡುಗಿ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ.

ತನ್ನ ಜೀವನೋಪಾಯಕ್ಕಾಗಿ ಮೀನುಮಾರುತ್ತಿದ್ದ ಹುಡುಗಿ ತಾನು ಸಂಪಾದಿಸಿದ 1.5 ಲಕ್ಷ ರೂಪಾಯಿಯನ್ನು ಪ್ರವಾಹ ಸಂತ್ರಸ್ತ ನಿಧಿಗೆ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ.

ಮೀನು ಮಾರಿ ಟ್ರೋಲ್ ಆದ ಹುಡುಗಿಯ ಕರುಣಾಜನಕ ಕತೆ ಕೇಳಿ...ಮೀನು ಮಾರಿ ಟ್ರೋಲ್ ಆದ ಹುಡುಗಿಯ ಕರುಣಾಜನಕ ಕತೆ ಕೇಳಿ...

ಕೇರಳದಲ್ಲಿ 320 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಭೀಕರ ಪ್ರವಾಹಕ್ಕೆ ಈಗಾಗಲೇ ದೇಶದಾದ್ಯಂತ ನೆರವು ಹರಿದುಬರುತ್ತಿದೆ. ಈ ನಡುವೆ ತಾನೇ ಕಷ್ಟದಲ್ಲಿದ್ದರೂ, ತಾನು ಕಷ್ಟಪಟ್ಟು ದುಡಿದ ಸಂಗ್ರಹಿಸಿದ ಹಣವನ್ನು ಹನಾನ್ ಪ್ರವಾಹ ಸಂತ್ರಸ್ತರಿಗಾಗಿ ನೀಡುತ್ತಿರುವುದು ಆದರ್ಶವೆನ್ನಿಸಿದೆ.

Poor girl Hanan donates Rs.1.5 lakhs for Kearala flood relief funds

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ, ತಂದೆಯ ಮದ್ಯವ್ಯಸನದಿಂದಾಗಿ ಪರಿತ್ಯಕ್ತರಾದ ಹನಾನ್ ಮತ್ತವರ ತಾಯಿ, ತಮ್ಮ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವೈದ್ಯೆಯಾಗಬೇಕು ಎಂಬ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಹಗಲಿರುಳೆನ್ನದೆ ದುಡಿಯುತ್ತಿರುವ ಹನಾನ್ ಒಮ್ಮೆ, ಕಾಲೇಜು ಯೂನಿಫಾರ್ಮ್ ತೊಟ್ತು ಮೀನು ಮಾರುತ್ತಿದ್ದ ಚಿತ್ರವನ್ನು ಕಿಡಿಗೇಡಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದು ಎಲ್ಲೆಡೆ ವೈರಲ್ ಆಗಿತ್ತು. ಹೀಗೆ ಮತ್ತೊಬ್ಬರ ಕಷ್ಟವನ್ನು ಕಂಡು ನೆರವಾಗುವ ಬದಲು, ಟ್ರೋಲ್ ಮಾಡುತ್ತಿರುವ ಕೀಳು ಅಭಿರುಚಿಯ ಬಗ್ಗೆ ಸಾಕಷ್ಟು ವಿವಆದ ಎದ್ದಿತ್ತು. ಆಕೆಯ ಬೆಂಬಲಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ನಿಂತಿದ್ದರು.

English summary
21-year-old college student, Hanan Hamid, who was trolled on social media for selling fish in uniform after college has donated her savings of RS.1.5 lakhs for Kerala flood relief fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X