• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮೀಕ್ಷೆ : ರಾಹುಲ್ ಜನಪ್ರಿಯತೆಯ ಮಟ್ಟ ಏರಿದೆಯಾ? ಇಳಿದಿದೆಯಾ?

|

ನವದೆಹಲಿ, ಫೆಬ್ರವರಿ 21 : ಕಳೆದ ಲೋಕಸಭೆ ಚುನಾವಣೆಯ ಸಮಯಕ್ಕೆ ಹೋಲಿಸಿದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆ ಮಟ್ಟ ಈಗ ಎಷ್ಟಿದೆ? ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುರುಸಿನ ಪೈಪೋಟಿ ನೀಡುವಷ್ಟು ಪ್ರಬಲರಾಗಿದ್ದಾರೆಯೆ?

ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ದಕ್ಕಿದ ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವ ರಾಹುಲ್ ನಿಜಕ್ಕೂ ರಾಷ್ಟ್ರಮಟ್ಟದಲ್ಲಿ ಮತಬೇಟೆಗೆ ಸಿದ್ಧರಿದ್ದಾರೆಯೆ?ಇತ್ಯಾದಿ ಪ್ರಶ್ನೆಗಳನ್ನಿಟ್ಟುಕೊಂಡು ಟೈಮ್ಸ್ ನಡೆಸಿದ ಸಮೀಕ್ಷೆ ಹಲವಾರು ಕುತೂಹಲಕರ ಸಂಗತಿಗಳನ್ನು ಬಯಲು ಮಾಡಿದೆ.

ಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ

ಕಾಂಗ್ರೆಸ್ ಪಕ್ಷ ಮಹಾಘಟಬಂಧನ್ ಜೊತೆ ಗುರುತಿಸಿಕೊಂಡಿದ್ದರೂ, ಅವರೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ. ಅಸಲಿಗೆ, ರಾಹುಲ್ ಅವರು ನಾಯಕತ್ವದ ಮೇಲೆಯೇ ಮಹಾಘಟಬಂಧನ್ ದಲ್ಲಿ ಯಾವುದೇ ನಾಯಕನಿಗೂ ವಿಶ್ವಾಸವಿದ್ದಂತಿಲ್ಲ.

ಅದಕ್ಕಾಗಿಯೇ ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಮುಂತಾದವರ ಹೆಸರುಗಳು ಪ್ರಧಾನಿ ಹುದ್ದೆಗೆ ಕೇಳಿಬರುತ್ತಿವೆಯೇ ಹೊರತು ರಾಹುಲ್ ಅವರದ್ದಲ್ಲ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವವನ್ನೇ ಗಮನದಲ್ಲಿಟ್ಟುಕೊಂಡು ನಡೆಸಿದ ಸಮೀಕ್ಷೆ ಕುತೂಹಲಭರಿತವಾಗಿದೆ.

ರಾಹುಲ್ ಜನಪ್ರಿಯತೆಯ ಮಟ್ಟ ಎಷ್ಟಿದೆ?

ರಾಹುಲ್ ಜನಪ್ರಿಯತೆಯ ಮಟ್ಟ ಎಷ್ಟಿದೆ?

2014ಕ್ಕೆ ಹೋಲಿಸಿದರೆ ರಾಹುಲ್ ಗಾಂಧಿ ಅವರು ಹೆಚ್ಚು ಜನಪ್ರಿಯರಾಗಿದ್ದಾರೆಯೆ ಎಂದು ಕೇಳಲಾಗಿದ್ದ ಪ್ರಶ್ನೆಗೆ, ಶೇ.31.15ರಷ್ಟು ಜನರು ರಾಹುಲ್ ಖಂಡಿತವಾಗಿಯೂ ಜನಪ್ರಿಯರಾಗಿದ್ದಾರೆ ಎಂದು ಹೇಳಿದ್ದರೆ, ಅಚ್ಚರಿಯ ಶೇ.63.03ರಷ್ಟು ಸಮೀಕ್ಷೆಯಲ್ಲಿ ಮತಹಾಕಿದ ಜನರು 'ಇಲ್ಲ' ಎಂದು ಒಕ್ಕೊರಲಿನಿಂದ ಕೂಗಿದ್ದಾರೆ. ಶೇ.5.82ರಷ್ಟು ಜನರು ಹೇಳಲಾಗುವುದಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರರ್ಥ, ರಾಹುಲ್ ಗಾಂಧಿ ಅವರು ಅಂದುಕೊಂಡಂತೆ ಜನಪ್ರಿಯತೆಯ ತುದಿ ಇನ್ನೂ ಮುಟ್ಟಿಲ್ಲ ಎಂದೇ ಹೇಳಬೇಕಾಗುತ್ತದೆ.

ಜನಪ್ರಿಯತೆಯ ತುತ್ತತುದಿಗೆ ನರೇಂದ್ರ ಮೋದಿ

ಜನಪ್ರಿಯತೆಯ ತುತ್ತತುದಿಗೆ ನರೇಂದ್ರ ಮೋದಿ

ಆದರೆ, ಇನ್ನೊಂದು ಬದಿಯಲ್ಲಿ ಮತ್ತೊಂದು ಅವಧಿಗೆ ಆಡಳಿತ ನಡೆಸಲು ಸಿದ್ಧರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ತುತ್ತತುದಿಗೇರಿದೆ. ಇದೇ ಕ್ಷಣದಲ್ಲಿ ಒಂದು ವೇಳೆ ಲೋಕಸಭೆ ಚುನಾವಣೆ ನಡೆದರೆ ಯಾರ ನಾಯಕತ್ವವನ್ನು ಬೆಂಬಲಿಸುತ್ತೀರಿ? ಎಂಬ ಪ್ರಶ್ನೆಗೆ ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಮೋದಿ ಮೋದಿ ಎಂದು ಜನರು ಕೂಗಿದ್ದಾರೆ. ಶೇ.83.89ರಷ್ಟು ಜನರು ಮೋದಿಗೆ ಮತ ಹಾಕಿದ್ದರೆ, ರಾಹುಲ್ ಗಾಂಧಿ ಅವರಿಗೆ ಬಂದಿರುವುದು ಕೇವಲ ಶೇ.8.33ರಷ್ಟು ಮತಗಳು ಮಾತ್ರ. ಅವರು ಮೋದಿ ಹತ್ತಿರಕ್ಕೂ ಬಂದಿಲ್ಲ ಎಂಬುದು ಗಮನಾರ್ಹ. ಇನ್ನು ಮಮತಾ ಬ್ಯಾನರ್ಜಿ (ಶೇ.1.44) ಮತ್ತು ಮಾಯಾವತಿ (ಶೇ.0.43) ಮುಂತಾದವರು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದಾರೆ.

ನ್ಯೂಸ್ ನೇಷನ್ ಪಂಜಾಬ್ ಸಮೀಕ್ಷೆ: ಮೋದಿ ಮೊದಲ ಆಯ್ಕೆ, ರಾಹುಲ್ ನಂ.2

ಬಿಜೆಪಿ ಐಟಿ ಸೆಲ್ ಕಾಂಗ್ರೆಸ್ಸಿಗಿಂತ ಬಲಿಷ್ಠ

ಈ ಆನ್ ಲೈನ್ ಪೋಲ್ ಅನ್ನು ಕೆಲವರು ತಮಾಷೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ತಜ್ಞ ಮತ್ತು ರಾಜಕೀಯ ವಿಶ್ಲೇಷಣಕಾರರಾಗಿರುವ ಟಿನು ಚೆರಿಯನ್ ಅಬ್ರಹಾಂ ಅವರು, ಈ ಪೋಲ್ ಅನ್ನು ಅಪಹಾಸ್ಯ ಮಾಡಿದ್ದು, ಬಿಜೆಪಿಯ ಐಟಿ ಸೆಲ್ ಕಾಂಗ್ರೆಸ್ಸಿನ ಐಟಿ ವಿಭಾಗಕ್ಕಿಂತ ಸಾಕಷ್ಟು ಬಲಿಷ್ಠವಾಗಿದೆ ಎಂಬುದನ್ನು ರುಜುವಾತು ಮಾಡಿದೆ ಎಂದಿದ್ದಾರೆ. ಮರೆಯಬೇಡಿ, 2014ರಲ್ಲಿ ನರೇಂದ್ರ ಮೋದಿಯವರ ಅಲೆ ಜೋರಾಗಿ ಇದ್ದಾಗಲೇ ಬಿಜೆಪಿ ಶೇ.31ಕ್ಕಿಂತ ಹೆಚ್ಚು ಮತ್ತು ಎನ್ಡಿಎ ಒಟ್ಟಾಗಿ ಶೇ.38ಕ್ಕಿಂತ ಮತಗಳನ್ನು ಪಡೆದಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯಲ್ಲಿ ಉತ್ಸಾಹ ತುಂಬಿದ ಸಮೀಕ್ಷೆ

ಬಿಜೆಪಿಯಲ್ಲಿ ಉತ್ಸಾಹ ತುಂಬಿದ ಸಮೀಕ್ಷೆ

ಆದರೆ, ಈ ಆನ್ ಲೈನ್ ಪೋಲ್ ಭಾರತೀಯ ಜನತಾ ಪಕ್ಷಕ್ಕೆ ಸರಿಯಾದ ಸಮಯದಲ್ಲಿ ಭರ್ಜರಿ ಅಸ್ತ್ರ ಸಿಕ್ಕಂತಾಗಾದಿದೆ. ಕೇಂದ್ರ ಸಚಿವ ಪಿಯೂಶ್ ಗೋಯಲ್, ಸಂಸದೆ ಶೋಭಾ ಕರಂದ್ಲಾಜೆ, ಕರ್ನಾಟಕದ ಬಿಜೆಪಿ ಶಾಸಕ ಅಶ್ವಥ ನಾರಾಯಣ ಮುಂತಾದವರು ಈ ಸಮೀಕ್ಷೆಯ ಫಲಿತಾಂಶವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಾಳಯಕ್ಕೆ ರಾಹುಲ್ ಗಾಂಧಿ ಅವರ ತಂಗಿ ಪ್ರಿಯಾಂಕಾ ವಾದ್ರಾ ಅವರು ಬಂದಿದ್ದರೂ, ಅಂತಹ ಬದಲಾವಣೆ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಚುನಾವಣೆ ಇನ್ನೂ ಎರಡು ತಿಂಗಳು ಇರುವುದರಿಂದ ಈ ಸಮೀಕ್ಷೆಯ ಫಲಿತಾಂಶದಲ್ಲಿ ವ್ಯತ್ಯಾಸ ಕಂಡುಬಂದರೂ ಅಚ್ಚರಿಯಿಲ್ಲ.

ಟೈಮ್ಸ್ ನೌ ಸಮೀಕ್ಷೆ : ದಕ್ಷಿಣ ಭಾರತದಲ್ಲಿ ಎನ್ಡಿಎ ವಿರುದ್ಧ ಯುಪಿಎಗೆ ಜಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Poll Survey : Has Rahul Gandhi's popularity increased compared to 2014 general elections? If Lok Sabha Elections are conducted now who is the preferred prime minister? Online survey was conducted by Times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more