ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ವಿವಿಧ ಸಂಸ್ಥೆಗಳು, ವಾಹಿನಿಗಳು ಸಮೀಕ್ಷೆ ನಡೆಸುತ್ತಿವೆ.

ಈ ಚುನಾವಣೆಗಳು ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಲ್ಲ ರಾಜಕೀಯ ಪಕ್ಷಗಳೂ ಬಹು ಗಂಭೀರವಾಗಿ ಪರಿಗಣಿಸಿವೆ.

ಈಗಾಗಲೇ ಎಬಿಪಿ, ಟೈಮ್ಸ್‌ ನೌ, ಡೇಲಿಹಂಟ್ ಚುನಾವಣಾ ಸಮೀಕ್ಷೆಗಳು ವಿಭಿನ್ನ ಫಲಿತಾಂಶಗಳನ್ನು ನೀಡಿವೆ. ಹೀಗೆ ಬಂದ ಸಮೀಕ್ಷೆಗಳನ್ನು ಮತ್ತೆ ಸಮೀಕ್ಷೆಗೆ ಒಳಪಡಿಸಿ ಅದರ ಫಲಿತಾಂಶದ ಆಧಾರದಲ್ಲಿ ಯಾವ ಪಕ್ಷಗಳು ಅಧಿಕಾರಕ್ಕೆ ಬರಬಹುದು ಎಂಬ ಲೆಕ್ಕಾಚಾರ ಮಾಡಲಾಗುತ್ತಿದೆ.

ಮುಖ್ಯವಾಗಿ ಮೂರು ರಾಜ್ಯಗಳಾದ ಛತ್ತೀಸಗಡ, ಮಧ್ಯ ಪ್ರದೇಶ ಮತ್ತು ರಾಜಸ್ಥಾನಗಳ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಸಮೀಕ್ಷೆಗಳ ಮೇಲಿನ ಸಮೀಕ್ಷೆ ಪ್ರಕಾರ ಇವುಗಳಲ್ಲಿ ಎರಡು ರಾಜ್ಯಗಳು ಕಾಂಗ್ರೆಸ್ ಪಾಲಾಗಲಿವೆ.

ಮಧ್ಯಪ್ರದೇಶದಲ್ಲಿ ಸತತ ಮೂರು ಅವಧಿಗಳಿಂದ ಅಧಿಕಾರದಲ್ಲಿರುವ ಬಿಜೆಪಿ, ಈ ಬಾರಿಯೂ ತನ್ನ ಹಿಡಿತ ಉಳಿಸಿಕೊಳ್ಳಲಿದೆ.

ಟೈಮ್ಸ್‌ ನೌ ಸಮೀಕ್ಷೆ: ರಾಜಸ್ಥಾನದಲ್ಲಿ ಪುಟಿದೇಳಲಿದೆ ಕಾಂಗ್ರೆಸ್‌, ಕುಸಿಯಲಿದೆ ಬಿಜೆಪಿಟೈಮ್ಸ್‌ ನೌ ಸಮೀಕ್ಷೆ: ರಾಜಸ್ಥಾನದಲ್ಲಿ ಪುಟಿದೇಳಲಿದೆ ಕಾಂಗ್ರೆಸ್‌, ಕುಸಿಯಲಿದೆ ಬಿಜೆಪಿ

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದರೆ, ಛತ್ತೀಸಗಡದಲ್ಲಿ ಸಮೀಪದ ಜಯ ಕಾಣಲಿದೆ ಎಂದು ಸಮೀಕ್ಷೆಗೆ ಸಂಬಂಧಿಸಿದಂತೆ ಎನ್‌ಡಿಟಿವಿ ನೀಡಿರುವ ವರದಿ ತಿಳಿಸಿದೆ.

ಬಿಜೆಪಿಯದೇ ಪಾರುಪತ್ಯ

ಬಿಜೆಪಿಯದೇ ಪಾರುಪತ್ಯ

ಮೂರು ಅವಧಿಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಮಧ್ಯಪ್ರದೇಶದಲ್ಲಿ ನಾಲ್ಕನೆಯ ಅವಧಿಗೂ ಆಡಳಿತದ ಚುಕ್ಕಾಣಿ ಹಿಡಿಯಲಿದೆ. 230 ಕ್ಷೇತ್ರಗಳ ಪೈಕಿ ಬಿಜೆಪಿ 126 ಸ್ಥಾನಗಳಲ್ಲಿ ಗೆಲ್ಲಲಿದೆ. ಬಹುಮತಕ್ಕೆ ಬೇಕಿರುವುದು 116 ಸೀಟುಗಳು. ಹೀಗಾಗಿ ಬಿಜೆಪಿ ಸುಲಭವಾಗಿ ಅಧಿಕಾರಕ್ಕೆ ಬರಲಿದೆ ಎನ್ನುತ್ತವೆ ಸಮೀಕ್ಷೆಗಳು. ಆದರೆ, 2013ರಲ್ಲಿ ಬಿಜೆಪಿ 165 ಸೀಟುಗಳನ್ನು ಗೆದ್ದಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೀಟುಗಳನ್ನು ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ತನ್ನ ಶಕ್ತಿಯನ್ನು 58ರಿಂದ 97 ಸೀಟುಗಳಿಗೆ ಹೆಚ್ಚಿಸಿಕೊಳ್ಳಲಿದೆ.

ಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜ

ಕಾಂಗ್ರೆಸ್ ಆರೋಹಣ

ಕಾಂಗ್ರೆಸ್ ಆರೋಹಣ

ಅಧಿಕಾರಾರೂಢ ಬಿಜೆಪಿ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತವೆ ಸಮೀಕ್ಷೆಗಳು. ರಾಜ್ಯದಲ್ಲಿ ವಸುಂಧರಾರಾಜೇ ನೇತೃತ್ವದ ಸರ್ಕಾರದ ವಿರುದ್ಧ ಜನಮತಾಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಭಾರಿ ಪ್ರಮಾಣದಲ್ಲಿ ತನ್ನ ಸೀಟುಗಳನ್ನು ಅದು ಕಳೆದುಕೊಳ್ಳಲಿದೆ. ಸಮೀಕ್ಷೆ ಪ್ರಕಾರ ಅದು ಬರೋಬ್ಬರಿ ನೂರು ಸೀಟುಗಳ ನಷ್ಟ ಅನುಭವಿಸಲಿದೆ. 2013ರ ಚುನಾವಣೆಯಲ್ಲಿ 163 ಸೀಟುಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಕೇವಲ 63 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ.

200 ಸೀಟುಗಳ ಪೈಕಿ ಕೇವಲ 21ರಲ್ಲಿ ಗೆದ್ದಿದ್ದ ಕಾಂಗ್ರೆಸ್, ಈ ಚುನಾವಣೆಯಲ್ಲಿ 129 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯಲಿದೆ. ಇಲ್ಲಿ ಸರ್ಕಾರ ರಚನೆಗೆ 101 ಸ್ಥಾನಗಳ ಅವಶ್ಯಕತೆಯಿದೆ.

ಎಬಿಪಿ ನ್ಯೂಸ್ ಸಮೀಕ್ಷೆ : 3 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ!ಎಬಿಪಿ ನ್ಯೂಸ್ ಸಮೀಕ್ಷೆ : 3 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ!

ರಾರಾಜಿಸಲಿದೆ ಕೈ ಬಾವುಟ

ರಾರಾಜಿಸಲಿದೆ ಕೈ ಬಾವುಟ

ಛತ್ತೀಸಗಡದಲ್ಲಿ ನಾಲ್ಕನೆಯ ಬಾರಿಗೆ ಅಧಿಕಾರಕ್ಕೇರಲು ಹವಣಿಸುತ್ತಿರಯವ ಬಿಜೆಪಿಗೆ, ಕಾಂಗ್ರೆಸ್ ಆಘಾತ ನೀಡುವ ಸಾಧ್ಯತೆ ಇದೆ. ಅತ್ಯಂತ ಸಮೀಪದ ಅಂತರದಿಂದ ಕಾಂಗ್ರೆಸ್ ಗದ್ದುಗೆಗೇರಲಿದೆ. 90 ಸೀಟುಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 46 ಸ್ಥಾನಗಳು ಬೇಕು. ಕಳೆದ ವರ್ಷ ಬಿಜೆಪಿ 49 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅದು ಹತ್ತು ಸ್ಥಾನಗಳನ್ನು ಕಳೆದುಕೊಳ್ಳಲಿದೆ. 2013ರಲ್ಲಿ 39 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಬಹುಮತಕ್ಕಿಂತ ಒಂದು ಹೆಚ್ಚಿನ ಕ್ಷೇತ್ರವನ್ನು ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆಗಳ ಸಮೀಕ್ಷೆ ತಿಳಿಸಿದೆ.

ಟೈಮ್ಸ್‌ನೌ ಸಮೀಕ್ಷೆ : ಛತ್ತೀಸ್‌ಗಢದಲ್ಲಿ ಮತ್ತೆ ಬಿಜೆಪಿ ಸರ್ಕಾರ! ಟೈಮ್ಸ್‌ನೌ ಸಮೀಕ್ಷೆ : ಛತ್ತೀಸ್‌ಗಢದಲ್ಲಿ ಮತ್ತೆ ಬಿಜೆಪಿ ಸರ್ಕಾರ!

ಈ ಬಾರಿಯೂ ಕೆಸಿಆರ್ ಹವಾ

ಈ ಬಾರಿಯೂ ಕೆಸಿಆರ್ ಹವಾ

ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಅವಧಿಗೆ ಮುನ್ನವೇ ಚುನಾವಣೆಗೆ ಮುಂದಾಗಿದ್ದಾರೆ. ಅವರ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷ ಭಾರಿ ಅಂತರದ ಗೆಲುವು ಸಾಧಿಸುವ ಮೂಲಕ ಎರಡನೆಯ ಅವಧಿಗೆ ಅಧಿಕಾರಕ್ಕೇರಲಿದೆ. 119 ಸೀಟುಗಳ ಪೈಕಿ 85 ಸೀಟುಗಳು ಟಿಆರ್‌ಎಸ್ ಪಾಲಾಗಲಿವೆ. ಇಲ್ಲಿ ಬಹುಮತಕ್ಕೆ ಬೇಕಿರುವುದು 60 ಸೀಟುಗಳು. ಕಾಂಗ್ರೆಸ್ ಕೇವಲ 18 ಸೀಟುಗಳನ್ನು ಪಡೆದುಕೊಂಡರೆ, ಬಿಜೆಪಿ ಪಾಲಿಗೆ 5 ಸ್ಥಾನಗಳು ಮಾತ್ರ ದಕ್ಕಲಿವೆ. ಮತ್ತೊಂದು ಸ್ಥಳೀಯ ಪಕ್ಷ ಎಐಎಂಐಎಂ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

English summary
Assembly elections will be conducted on November and December for 5 states. As per Poll of opinion polls BJP will lose 2 of its 3 states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X