ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡೆತಡೆ ದಾಟಿ ಸುರಕ್ಷಿತವಾಗಿ ದೇಗುಲ ತಲುಪಿದ ಆಂಜನೇಯ

|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಕೋಲಾರದ ನಗರಸಾಪುರದಿಂದ ಸಾಗಿಸುತ್ತಿದ್ದ 62 ಅಡಿ ಉದ್ದದ 750 ಟನ್ ತೂಕದ ವೀರಾಂಜನೇಯ ಸೋಮವಾರ ಯಾವ ಅಡೆತಡೆಗಳಿಲ್ಲದೆ ದಾಟಿ ಸುರಕ್ಷಿತವಾಗಿ ನಗರದ ಕಾಚರಕನಹಳ್ಳಿಯ ಶ್ರೀಕೋದಂಡರಾಮ ದೇವಸ್ಥಾನದ ಆವರಣ ತಲುಪಿತು.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೊಸಕೋಟೆ ಬಳಿಯೇ ಪೊಲೀಸರು ವಿಗ್ರಹ ಸಾಗಿಸುತ್ತಿದ್ದ ಟ್ರಕ್ ತಡೆದಿದ್ದರು.ಇದಕ್ಕೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ವಿಗ್ರಹ ಸಾಗಿಸುವ ಕಾರ್ಯ ಮುಂದುವರೆದಿತ್ತು. ಸೋಮವಾರ ಬೆಳಗ್ಗೆ ರಿಂಗ್ ರಸ್ತೆಯ ಹೆಣ್ಣೂರು ಜಂಕ್ಷನ್ ನ ಕಾಚರಕನಹಳ್ಳಿ ಮುಖ್ಯ ರಸ್ತೆಯಿಂದ ದೇವಸ್ಥಾನದವರೆಗಿನ ಸುಮಾರು 500 ಮೀಟರ್ ದೂರ ಕ್ರಮಿಸಲು ಅರ್ಧ ದಿನ ಹಿಡಿಯಿತು.

ಕಾವೇರಿಗಾಗಿ ತಮಿಳುನಾಡು ರೈತರ ವಿಭಿನ್ನ ಪ್ರತಿಭಟನೆ:ಇತರೆ ಚಿತ್ರಗಳು ಕಾವೇರಿಗಾಗಿ ತಮಿಳುನಾಡು ರೈತರ ವಿಭಿನ್ನ ಪ್ರತಿಭಟನೆ:ಇತರೆ ಚಿತ್ರಗಳು

ವಿದ್ಯುತ್ ಕಂಬ, ಮರಗಳು, ಸೇತುವೆಗಳು ವಿಗ್ರಹ ಸಾಗಣೆ ಟ್ರಕ್ ಸಂಚಾರಕ್ಕೆ ಅಡ್ಡಿಯಾಯಿತು. ಇದರ ನಡುವೆಯೂ ಬಹಳ ಎಚ್ಚರಿಕೆಯಿಂದ ವಿಗ್ರಹವನ್ನು ಸುರಕ್ಷಿತವಾಗಿ ದೇವಾಲಯದ ಆವರಣಕ್ಕೆ ತಲುಪಿಸಲಾಯಿತು. ವಿಗ್ರಹ ಸಾಗಿಸುವ ಮಾರ್ಗದ ಹೆಣ್ಣೂರು ರಸ್ತೆಯ ರೈಲ್ವೆ ಸಥುವೆ ಕೆಳಗಡೆ ಟ್ರಕ್ ಸಂಚರಿಸಲು ಅಡ್ಡಿಯಾಗಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಹೀಗಾಗಿ ಸೇತುವೆ ಕಳೆಗಡೆಯ ರಸ್ತೆಯನ್ನು ಮೂರ್ನಾಲ್ಕು ಅಡಿಯಷ್ಟು ಅಗೆದು ಟ್ರಕ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಂತೆಯೇ ಅದೇ ಮಾರ್ಗದಲ್ಲಿ ರಸ್ತೆ ವಿಭಜಕಗಳನ್ನು ತೆರವು ಮಾಡಲಾಯಿತು. ಜತೆಗೆ ವಿದ್ಯುತ್ ಕಂಬ ಹಾಗೂ ಮರವೊಂದನ್ನು ತೆರವುಗೊಳಿಸಲಾಯಿತು. ಈ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಯಿತು.

ದೇವರ ವಿಗ್ರಹ ಸಾಗಣೆಗೂ ತಟ್ಟಿದ ನೀತಿ ಸಂಹಿತೆ

ದೇವರ ವಿಗ್ರಹ ಸಾಗಣೆಗೂ ತಟ್ಟಿದ ನೀತಿ ಸಂಹಿತೆ

ರಾಜ್ಯದೆಲ್ಲೆಡೆ ಈಗ ಚುನಾವಣಾ ಕಾವು ಏರುತ್ತಿದೆ. ನೀತಿ ಸಂಹಿತೆಯ ಬಿಸಿ ಎಲ್ಲೆಡೆ ಹರಡಿದೆ. ವಿಶೇಷವೆಂದರೆ ಕೇವಲ ರಾಜಕಾರಣಿಗಳಿಗೆ, ಮತದಾರರಿಗೆ ಮಾತ್ರ ಈ ನೀತಿ ಸಂಹಿತೆ ಅಡ್ಡಿಯಾಗಿಲ್ಲ, ಹನುಮಂತನಿಗೂ ಇದರ ಶಾಖ ತಾಗಿದೆ, ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹ ಸಾಗಣೆಗೂ ನೀತಿ ಸಂಹಿತೆ ಅಡ್ಡಿಯಾಗಿತ್ತು. ಬೆಂಗಳೂರಿನಿಂದ 35 ಕಿಮೀ ದೂರದ ಹೊಸಕೋಟೆ ಸಮೀಪ ಚುನಾವಣಾಧಿಕಾರಿಗಳು ವಿಗ್ರಹ ಸಾಗಣೆಯಲ್ಲಿ ತೊಡಗಿದ್ದ ಟ್ರಾಲಿಯನ್ನು ತಡೆದಿದ್ದರು.

ಹಂಪ್ ಬ್ಯಾಕ್ ತಿಮಿಂಗಿಲ

ಹಂಪ್ ಬ್ಯಾಕ್ ತಿಮಿಂಗಿಲ

ಅರ್ಜೆಂಟಿನಾದ ಮರ್ ಡೆಲ್ ಪ್ಲಾಟಾ ಸಮುದ್ರದಲ್ಲಿ ಅರ್ಜೆಂಟಿನಾ ನಾವಲ್ ಪ್ರಿಫೆಕ್ಚರ್ ಹಾಗೂ ಸ್ವಯಂಸೇವಕರು ತಿಮಿಂಗಿಲ ರಕ್ಷಣಾ ಕಾರ್ಯದಲ್ಲಿ ತೊಡಗಿರುವುದು.

 ರಾಜಾಪಾರ್ಕ್ ಫ್ಯಾಕ್ಟರಿ ಅಗ್ನಿ ದುರಂತದ ಬಳಿಕ ಕಂಡಿದ್ದು ಹೀಗೆ

ರಾಜಾಪಾರ್ಕ್ ಫ್ಯಾಕ್ಟರಿ ಅಗ್ನಿ ದುರಂತದ ಬಳಿಕ ಕಂಡಿದ್ದು ಹೀಗೆ

ನವದೆಹಲಿಯ ಸುಲ್ತಾನ್‌ಪುರಿಯಲ್ಲಿರುವ ರಾಜಾ ಪಾರ್ಕ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ.ಬೆಳಗಿನ ಜಾವ 6.35ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ನಂತರ ಅಗ್ನಿ ಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ದುರಂತ ಕುರಿತು ಮಾಹಿತಿ ಕಲೆಹಾಕುತ್ತಿರುವುದನ್ನು ಈ ಚಿತ್ರದಲ್ಲಿ ನೋಡಬಹುದು.

ರಾಯಲ್ ರಷ್ಯನ್ ಬ್ಯಾಲೆಟ್ ಗ್ರೂಪ್ ನಿಂದ್ ಸ್ವಾನ್ ಲೇಕ್

ರಾಯಲ್ ರಷ್ಯನ್ ಬ್ಯಾಲೆಟ್ ಗ್ರೂಪ್ ನಿಂದ್ ಸ್ವಾನ್ ಲೇಕ್

ಏಪ್ರಿಲ್ 6ರಿಂದ 9ರವರೆಗೆ ಅಹಮದಾಬಾದ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಲ್ ರಷ್ಯನ್ ಬ್ಯಾಲೆಟ್ ಗ್ರೂಪ್ ಕಲಾವಿದರು ಸ್ವಾನ್ ಲೇಕ್ ನೃತ್ಯವನ್ನು ಪ್ರದರ್ಶಿಸಿಸಿದರು. ಅದರಲ್ಲಿ 45ಕ್ಕೂ ಹೆಚ್ಚು ರಷ್ಯನ್ ಕಲಾವಿದರು ಪಾಲ್ಗೊಂಡಿದ್ದರು. ಕಲಾವಿದರು ಈ ನೃತ್ಯಕ್ಕಾಗಿ ವಾರಪೂರ್ತಿ 8ರಿಂದ 10 ಗಂಟೆಗಳ ಕಾಲ ಅಭ್ಯಾಸ ನಡೆಸಿದ್ದರು.

English summary
This was one hurdle Hanuman found insurmountable, though only for 15 hours. An extra-long vehicle carrying the 62-foot, 750-tonne half-done statue of Hanuman from Kolar to Kacharakanahalli in East Bengaluru, was stranded when police allegedly stopped it on NH-48 on Monday night, citing it as a potential violation of the model election code of conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X