ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ವಿರೋಧಿಗಳು ದೇಶದ್ರೋಹಿಗಳಲ್ಲ: ಮೌನ ಮುರಿದ ಅಡ್ವಾಣಿ

|
Google Oneindia Kannada News

Recommended Video

Lok Sabha Election 2019: ಬಿಜೆಪಿಗೆ ಕಿವಿಮಾತು ಹೇಳಿದ ಹಿರಿಯ ರಾಜಕಾರಣಿ ಎಲ್.ಕೆ.ಅಡ್ವಾಣಿ | Oneindia Kannada

ನವದೆಹಲಿ, ಏಪ್ರಿಲ್ 04: ರಾಜಕೀಯ ಮುಸ್ಸಂಜೆಯಲ್ಲಿರುವ ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರು ಕೊನೆಗೂ ಮೌನ ಮುರಿದಿದ್ದಾರೆ. ತಾವೇ ಕಟ್ಟಿ ಬೆಳೆಸಿದ ಬಿಜೆಪಿಗೆ ಕೆಲವು ಕಿವಿಮಾತುಗಳನ್ನು ಅವರು ಹೇಳಿದ್ದಾರೆ.

ರಾಜಕೀಯ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಕರೆಯುತ್ತಿರುವ ಬಿಜೆಪಿ ವಾಕ್‌ ಸಂಸ್ಕೃತಿಯನ್ನು ಅವರು ಟೀಕಿಸಿದ್ದು, ರಾಜಕೀಯ ವಿರೋಧಿಗಳನ್ನಷ್ಟೆ ಅಲ್ಲ ಯಾರನ್ನೂ ದೇಶದ್ರೋಹಿಗಳು ಎನ್ನಬೇಡಿ ಎಂದು ಅಡ್ವಾಣಿ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಸೋಲಿಸುವುದು ಸುಲಭದ ಮಾತಲ್ಲ: ದೇವೇಗೌಡಪ್ರಧಾನಿ ಮೋದಿ ಸೋಲಿಸುವುದು ಸುಲಭದ ಮಾತಲ್ಲ: ದೇವೇಗೌಡ

ಲಾಲ್ ಕೃಷ್ಣ ಅಡ್ವಾಣಿ ಅವರು ದೀರ್ಘವಾಗಿ ಬ್ಲಾಗ್ ಅನ್ನು ಬರೆದಿದ್ದು, ದೇಶ ಮೊದಲು, ನಂತರ ಪಕ್ಷ ವ್ಯಕ್ತಿ ಕೊನೆಗೆ ಎಂಬ ಬಿಜೆಪಿಯ ಧ್ಯೇಯವಾಕ್ಯವನ್ನು ಪುನರ್‌ ಉಚ್ಛರಿಸಿದ್ದಾರೆ.

political opponents not anti-national: Advani

ವೈವಿದ್ಯೆತೆಗೆ, ವಾಕ್ ಸ್ವಾತಂತ್ರ ಭಾರತೀಯ ಪ್ರಜಾಪ್ರಭುತ್ವದ ಪ್ರಮುಖ ಅಂಗಗಳು, ಬಿಜೆಪಿಯು ತನ್ನ ರಾಜಕೀಯ ವಿರೋಧಿಗಳನ್ನು ವೈರಿಗಳನ್ನಾಗಿ ಎಂದೂ ಕಂಡಿಲ್ಲ, ಬದಲಿಗೆ ಅವರನ್ನು ನಮ್ಮ ಎದುರಾಳಿಗಳನ್ನಾಗಿ ಮಾತ್ರವೇ ಕಂಡಿದೆ. ರಾಷ್ಟ್ರೀಯತೆಯ ದೃಷ್ಟಿಕೋನದಲ್ಲೂ ಸಹ ನಮ್ಮ ರಾಜಕೀಯ ಸಿದ್ಧಾಂತಗಳನ್ನು ಒಪ್ಪದವರನ್ನು 'ದೇಶದ್ರೋಹಿಗಳು' ಎಂದು ಕರೆಯುವುದಿಲ್ಲ ಎಂದು ಅಡ್ವಾಣಿ ಬರೆದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಡ್ವಾಣಿ ಅವರು ಬಹು ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದ ಗುಜರಾತ್‌ನ ಗಾಂಧಿ ನಗರದ ಮತದಾರರಿಗೂ ಧನ್ಯವಾದಗಳನ್ನು ಅಡ್ವಾಣಿ ಅವರು ಅರ್ಪಿಸಿದ್ದಾರೆ. ಈ ಬಾರಿ ಅವರು ಗಾಂಧಿ ನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ, ಬದಲಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸುತ್ತಿದ್ದಾರೆ.

ಅಡ್ವಾಣಿ ಜಾಗದಲ್ಲಿ ಅಮಿತ್ ಶಾ, ನಿರ್ಧಾರದಲ್ಲಿ ತಪ್ಪಿಲ್ಲ ಎಂದ ಬಿಜೆಪಿಅಡ್ವಾಣಿ ಜಾಗದಲ್ಲಿ ಅಮಿತ್ ಶಾ, ನಿರ್ಧಾರದಲ್ಲಿ ತಪ್ಪಿಲ್ಲ ಎಂದ ಬಿಜೆಪಿ

ಮೋದಿ ಅವರ ಆಗಮನದ ನಂತರ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಬಿಜೆಪಿ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಅಡ್ವಾಣಿ ಅವರು ಕಣ್ಣಿಟ್ಟಿದ್ದ ಪ್ರಧಾನಿ ಪಟ್ಟ ಮೋದಿ ಅವರ ಪಾಲಾಯಿತು, ರಾಷ್ಟ್ರಪತಿ ಸ್ಥಾನದಲ್ಲಾದರೂ ಅಡ್ವಾಣಿ ಅವರನ್ನು ಪ್ರತಿಷ್ಟಾಪಿಸಲಾಗುತ್ತದೆ ಎನ್ನಲಾಗಿತ್ತು, ಆದರೆ ರಮಾನಾಥ ಕೋವಿಂದ್ ಅವರನ್ನು ರಾಷ್ಟ್ರಪತಿಗಳನ್ನಾಗಿಸಲಾಯಿತು.

English summary
BJP senior leader Lal Krishna Advani writes a lengthy blog and said, political opponents, and who dis agree with our thoughts were not anti-nationals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X