ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ರೊಚ್ಚಿಗೆದ್ದ ಪೊಲೀಸರಿಂದಲೇ ಗಲಭೆ, ಶೂಟೌಟ್, ವಾಹನಗಳು ಜಖಂ

|
Google Oneindia Kannada News

ಪಾಟ್ನಾ, ನವೆಂಬರ್ 02: ತರಬೇತಿ ನಿರತ ಮಹಿಳಾ ಪೊಲೀಸ್ ಪೇದೆ ಒಬ್ಬರು ಡೆಂಗ್ಯುನಿಂದ ಸಾವನ್ನಪ್ಪಿದ್ದಕ್ಕೆ ಸಿಟ್ಟಿಗೆದ್ದ ನೂರಾರು ಟ್ರೈನಿ ಪೊಲೀಸ್ ಕಾನ್‌ಸ್ಟೇಬಲ್‌ಗಳು ಗಲಭೆ ಎಬ್ಬಿಸಿ ಹಿರಿಯ ಅಧಿಕಾರಿಗಳನ್ನೇ ಹೊಡೆದಿದ್ದಾರೆ.

ಸೈಬರ್ ಕ್ರೈಂ ತಡೆಗೆ ಬೆಂಗಳೂರಲ್ಲಿ 8 ಸೈಬರ್ ವಿಶೇಷ ಠಾಣೆ ಸೈಬರ್ ಕ್ರೈಂ ತಡೆಗೆ ಬೆಂಗಳೂರಲ್ಲಿ 8 ಸೈಬರ್ ವಿಶೇಷ ಠಾಣೆ

ಬಿಹಾರದ ಪಾಟ್ನಾದಲ್ಲಿ ಘಟನೆ ನಡೆದಿದ್ದು, ತರಬೇತಿ ಶಿಬಿರದಲ್ಲಿದ್ದ ಮಹಿಳಾ ಪೊಲೀಸ್ ಪೇದೆಗೆ ರಜೆ ನೀಡದ ಕಾರಣದಿಂದಲೇ ಆಕೆ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ತರಬೇತಿ ಪಡೆಯುತ್ತಿದ್ದ 300 ಕ್ಕೂ ಹೆಚ್ಚು ಮಂದಿ ಪೊಲೀಸ್ ಕಾನ್‌ಸ್ಟೇಬಲ್‌ಗಳು ತರಬೇತಿ ಕೇಂದ್ರ ಹಾಗೂ ಪೊಲೀಸ್‌ ಲೈನ್‌ನಲ್ಲಿ ಗಲಭೆ ಆರಂಭಿಸಿದ್ದಾರೆ.

ಕಮಾಂಡರ್, ಎಸ್‌ಪಿ, ಡಿಎಸ್‌ಪಿಗಳನ್ನು ಹಿಡಿದು ಹೊಡೆದಿದ್ದಾರೆ, ವಿಶಾಲ ಪೊಲೀಸ್ ತರಬೇತಿ ಕೇಂದ್ರದ ಕೊಠಡಿಗಳ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದಾರೆ.

Police personnel protest and create ruckus in Bihar

ಕೆಲವು ಟ್ರೇನಿ ಪೊಲೀಸ್ ಪೇದೆಗಳು ತರಬೇತಿ ಬಂದೂಕಿನಿಂದ ಕೆಲವು ರೌಂಡ್‌ ಶೂಟಿಂಗ್ ಸಹ ಮಾಡಿದ್ದಾರೆ. ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತಿರುವುದು ಕಂಡು ಕೆಲವಾರ ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಗಲಭೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹಾನಿ ಆಗಿದೆ. ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.

ಡಿಸಿಪಿ ಅಣ್ಣಾಮಲೈಗೆ ಮನಸಾರೆ ಅಭಿನಂದಿಸಿದ ಪೊಲೀಸ್ ಸಿಬ್ಬಂದಿಗಳು ಡಿಸಿಪಿ ಅಣ್ಣಾಮಲೈಗೆ ಮನಸಾರೆ ಅಭಿನಂದಿಸಿದ ಪೊಲೀಸ್ ಸಿಬ್ಬಂದಿಗಳು

ಆ ನಂತರ ಬಿಹಾರ ಮಿಲಿಟರಿ ಪೊಲೀಸ್, ಎಟಿಎಸ್‌, ಎಸ್ಟಿಎಫ್‌ ಅನ್ನು ಕರೆಸಿಕೊಂಡು ರೊಚ್ಚಿಗೆದ್ದಿದ್ದ ಟ್ರೈನಿ ಪೊಲೀಸರನ್ನು ತಹಬದಿಗೆ ತರಲಾಗಿದೆ. ಘಟನೆ ಬಗ್ಗೆ ಪೂರ್ಣ ವರದಿ ನೀಡುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರು ಪೊಲೀಸ್ ಡಿಐಜಿ ಅವರನ್ನು ಕೇಳಿದ್ದಾರೆ.

ಎಲ್ಲ ಪೊಲೀಸ್‌ ಟ್ರೈನಿಗಳನ್ನು ವಿಚಾರಣೆ ನಡೆಸಲಾಗುತ್ತದೆ. ದಾಂಧಲೆ ನಡೆಸಿದ ಪೊಲೀಸ್ ಟ್ರೈನಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಆ ಟ್ರೇನಿಗಳು ಕೆಲವು ದಿನಗಳಿಂದಷ್ಟೆ ತರಬೇತಿ ಪ್ರಾರಂಭಿಸಿದ್ದಾರೆ ಅವರಿಗೆ ಪೊಲೀಸ್ ಶಿಸ್ತಿನ ಬಗ್ಗೆ ಅರಿವಿಲ್ಲ ಎಂದೂ ಸಹ ಹೇಳಲಾಗಿದೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು, ಕಾನೂನು ಮತ್ತು ಸುವ್ಯವ್ಥೆ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

English summary
Police personnel protest and create ruckus allegedly after an ailing woman constable passed away due to lack of treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X