ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ತಡೆಯಲು ಹೋದ ಪೇದೆ ಮೇಲೆ ಲಾರಿ ಹಾಯಿಸಿದರು

|
Google Oneindia Kannada News

ಭೋಪಾಲ್‌, ಏ. 5: ಭ್ರಷ್ಟರ ವಿರುದ್ಧ ಸಮರ ಸಾರಿ ಅಕ್ರಮ ತಡೆಯಲು ಹೋದ ಪೊಲೀಸ್ ಪೇದೆಯೊಬ್ಬರು ಜೀವ ಕಳೆದಿಕೊಂಡಿದ್ದಾರೆ. ಮಧ್ಯಪ್ರದೇಶದ ಮೊರೆನಾದ ಮರಳು ಮಾಫಿಯಾಗೆ ತಡೆ ಒಡ್ಡಲು ಯತ್ನಿಸಿದ ಮುಖ್ಯಪೇದೆ ಮೇಲೆ ಧರ್ಮೇಂದ್ರ ಸಿಂಗ್‌ ಚೌಹಾಣ್‌ ಅವರನ್ನು ಲಾರಿ ಹಾಯಿಸಿ ಹತ್ಯೆ ಮಾಡಲಾಗಿದೆ.

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಭಾನುವಾರ ಬೆಳಗ್ಗೆ ತಡೆಯಲು ಯತ್ನಿಸಿದ ನೂರಬಾದ್‌ ಪೊಲೀಸ್‌ ಠಾಣೆಯ ಧರ್ಮೇಂದ್ರ ಸಿಂಗ್‌ ಚೌಹಾಣ್‌ ಮೇಲೆ ಲಾರಿ ಹಾಯಿಸಲಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಂತರ ಲಾರಿಯನ್ನು ಅಲ್ಲೇ ಬಿಟ್ಟ ಚಾಲಕ ಪರಾರಿಯಾಗಿದ್ದಾನೆ.[ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

police-constable-mowed-down-by-sand-mafia

ಮೂರು ವರ್ಷದ ಹಿಂದೆ ಇದೇ ರೀತಿ ಅಕ್ರಮ ಗಣಿಗಾರಿಕೆಯ ಕಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ತಡೆದ ಮೊರೆನಾ ಜಿಲ್ಲೆಯ ಬಾರ್ಮೋರ್‌ ಉಪ ವಿಭಾಗೀಯ ಪೊಲೀಸ್‌ ಠಾಣೆಯ ಐಪಿಎಸ್‌ ಅಧಿಕಾರಿ ನರೇಂದ್ರ ಕುಮಾರ್‌ ಅವರ ಮೇಲೂ ಇದೇ ರೀತಿ ಟ್ರಾಕ್ಟರ್‌ ಹರಿಸಿ ಹತ್ಯೆ ಮಾಡಲಾಗಿತ್ತು.[ಪ್ರತಿಕ್ರಿಯೆ: ಮಾಫಿಯಾಗಳ ದಾಹಕ್ಕೆ ದಕ್ಷ ಅಧಿಕಾರಿ ಬಲಿ]

Police constable mowed down by 'sand mafia' in Madhya Pradesh

ದಹನೆಲ್ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪತ್ತೆ ಮಾಡಿದ ಚೌಹಾಣ್‌, ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು. ಹೆದರಿದ ಚಾಲಕ ಅಲ್ಲಿಂದ ಪರಾರಿಯಾಗಲು ಯತ್ನಿಸಿ ಹಿಮ್ಮುಖವಾಗಿ ಲಾರಿ ಓಡಿಸಿದಾಗ , ಹಿಂದೆ ಬರುತ್ತಿದ್ದ ಚೌಹಾಣ್‌ ಚಕ್ರದ ಅಡಿಗೆ ಸಿಕ್ಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ಹಾವೇರಿಯಲ್ಲೂ ಇತ್ತೀಚೆಗೆ ಇದೇ ರೀರಿ ತಹಸೀಲ್ದಾರ್ ಹತ್ಯೆ ಮಾಡಲು ದುಷ್ಕರ್ಮಿಗಳು ಮುಂದಾಗಿದ್ದರು.
English summary
A police constable was mowed down allegedly by sand mafia when he tried to stop a dumper carrying illegally mined sand from Chambal River near a village here in the wee hours on Sunday. Constable Dharmendra Chouhan went to Louhgarh village under Noorabad police station limits along with a team late last night
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X