ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಹೋದರಿ ಪೂರ್ವಿಗೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟೀಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಣ ವಂಚನೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿರುವ ಆಭರಣ ವ್ಯಾಪಾರಿ ನೀರವ್ ಮೋದಿ ಸಹೋದರಿ ಪೂರ್ವಿ ಮೋದಿಗೆ ಇಂಟರ್‌ಪೋಲ್ ರೆಡ್‌ ಕಾರ್ನರ್ ನೋಟೀಸ್ ಜಾರಿ ಮಾಡಿದೆ.

ಹಣ ವಂಚನೆ ಪ್ರಕರಣದಲ್ಲಿ ಪೂರ್ವಿ ದೀಪಕ್ ಮೋದಿ (44) ಬೇಕಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಅರೆಸ್ಟ್ ವಾರೆಂಟ್‌ನಲ್ಲಿ ಹೇಳಲಾಗಿದೆ.

4,299 ಕೋಟಿ ಹಣ ಹಂಚಿಕೊಂಡಿರುವ ನೀರವ್ ಮೋದಿ: ಇ.ಡಿ. ವರದಿ4,299 ಕೋಟಿ ಹಣ ಹಂಚಿಕೊಂಡಿರುವ ನೀರವ್ ಮೋದಿ: ಇ.ಡಿ. ವರದಿ

ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಜತೆಗೂಡಿ ಈ ಪ್ರಕರಣದ ತನಿಖೆ ನಡೆಸುತ್ತಿವೆ. ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ ಹಗರಣದ ಹಣ ವರ್ಗಾವಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೂರ್ವಿ ಮೋದಿ, ಕನಿಷ್ಠ 950 ಕೋಟಿ ರೂಪಾಯಿ ಹಗರಣದ ಪಾಲುದಾರರಾಗಿದ್ದಾರೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.

PNB scam: Interpole issues arrest warrant against Nirav Modis sister Purvi Modi

ಪೂರ್ವಿ ಮೋದಿ ಯುಎಇ, ಬ್ರಿಟಿಷ್ ವರ್ಜಿನ್ ಲ್ಯಾಂಡ್ಸ್ ಮತ್ತು ಸಿಂಗಪುರಗಳಲ್ಲಿ ಹಣ ವರ್ಗಾವಣೆಯ ಉದ್ದೇಶದಿಂದಲೇ ಸ್ಥಾಪನೆಯಾದ ಮತ್ತು ಹೂಡಿಕೆ ಮಾಡಲಾದ ಕಂಪೆನಿಗಳ ಮಾಲೀಕ ಅಥವಾ ನಿರ್ದೇಶಕಿಯಾಗಿದ್ದರು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.

ಯುಕೆಯಿಂದ ನೀರವ್ ಮೋದಿ ಹಸ್ತಾಂತರಕ್ಕೆ ಮನವಿ ಸಲ್ಲಿಸಿದ ಭಾರತಯುಕೆಯಿಂದ ನೀರವ್ ಮೋದಿ ಹಸ್ತಾಂತರಕ್ಕೆ ಮನವಿ ಸಲ್ಲಿಸಿದ ಭಾರತ

ಪೂರ್ವಿ ಅವರನ್ನು ತನಿಖೆಗೆ ಒಳಪಡಿಸುವ ಸಂಬಂಧ ಹೊರಡಿಸಿದ್ದ ಸಮನ್ಸ್‌ಗಳಿಗೆ ಅವರು ಪ್ರತಿಕ್ರಿಯೆ ನೀಡದ ಕಾರಣ ಜಾಗತಿಕ ವಾರಂಟ್ ಹೊರಡಿಸಲಾಗಿದೆ.

ಚೋಕ್ಸಿ ಬಂಧಿಸಲು ಆಂಟಿಗುವಾ ಸರ್ಕಾರಕ್ಕೆ ಭಾರತದ ಕೋರಿಕೆಚೋಕ್ಸಿ ಬಂಧಿಸಲು ಆಂಟಿಗುವಾ ಸರ್ಕಾರಕ್ಕೆ ಭಾರತದ ಕೋರಿಕೆ

ಮುಂಬೈ ಕೋರ್ಟ್‌ ಎದುರು ಮೇ ತಿಂಗಳಿನಲ್ಲಿ ಸಲ್ಲಿಸಿದ್ದ ಮೊದಲ ಆರೋಪಪಟ್ಟಿಯಲ್ಲಿ ಪೂರ್ವಿ ಅವರ ಹೆಸರನ್ನು ಸೇರಿಸಲಾಗಿತ್ತು.

English summary
Interpole has issued a red corner notice to against Nirav Modi's sister Purvi Modi in connection with PNB money laundering case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X