ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್‌ಬಿ ವಂಚನೆ ಆರೋಪಿ ಚೋಕ್ಸಿ ಆಂಟಿಗುವಾದಲ್ಲಿ ಸೆಟ್ಲ್!

|
Google Oneindia Kannada News

ನವದೆಹಲಿ, ಜುಲೈ 27: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದೇಶಭ್ರಷ್ಟನಾಗಿ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ, ಪ್ರಕರಣ ಬಹಿರಂಗವಾಗಿ ಸಿಬಿಐ ತನಿಖೆ ಆರಂಭಿಸುವ ಕೆಲವು ತಿಂಗಳ ಮುಂಚೆಯಷ್ಟೇ ಆಂಟಿಗುವಾದ ಪೌರತ್ವ ಪಡೆದುಕೊಂಡಿದ್ದರು.

ಚೋಕ್ಸಿ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ವಿರುದ್ಧ ಯಾವುದಾದರೂ ಪ್ರಕರಣಗಳಿದ್ದರೆ ಮಾಹಿತಿ ನೀಡುವಂತೆ ಆಂಟಿಗುವಾ ಅಧಿಕಾರಿಗಳು ಭಾರತಕ್ಕೆ ತಿಳಿಸಿದ್ದರು. ಆದರೆ, ಆಗ ಚೋಕ್ಸಿ ವಿರುದ್ಧ ಯಾವ ಪ್ರಕರಣವೂ ಇರಲಿಲ್ಲ.

'ಮೋಸ್ಟ್ ವಾಂಟೆಡ್' ಮೆಹುಲ್ ಚೋಕ್ಸಿ ಬಳಿಯೀಗ ಆಂಟಿಗುವಾ ಪಾಸ್ ಪೋರ್ಟ್!'ಮೋಸ್ಟ್ ವಾಂಟೆಡ್' ಮೆಹುಲ್ ಚೋಕ್ಸಿ ಬಳಿಯೀಗ ಆಂಟಿಗುವಾ ಪಾಸ್ ಪೋರ್ಟ್!

ಜನವರಿ ಮೊದಲ ವಾರ ಭಾರತದಿಂದ ತೆರಳಿದ್ದ ಚೋಕ್ಸಿ, ಜನವರಿ 15ರಂದು ಅಲ್ಲಿನ ಪೌರತ್ವದ ದಾಖಲೆಗಳನ್ನು ಪಡೆದುಕೊಂಡಿದ್ದರು.

pnb scam accused mehul choksi citizenship of antigua

ಸಂಬಂಧಿ ನೀರವ್ ಮೋದಿ ಜತೆಗೂಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ವಿವಿಧ ಶಾಖೆಗಳಿಗೆ 13,000 ಕೋಟಿ ರೂ ವಂಚಿಸಿದ ಪ್ರಕರಣದಲ್ಲಿ ಚೋಕ್ಸಿ ಭಾರತಕ್ಕೆ ಬೇಕಾಗಿದ್ದಾರೆ.

ದೇಶಭ್ರಷ್ಟ ಆರೋಪ ಹೊತ್ತಿರುವ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಿದರೆ ಅದನ್ನು ಪರಿಗಣಿಸಬಹುದು ಎಂದು ಆಂಟಿಗುವಾ ಹೇಳಿದೆ.

ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್

ಉದ್ಯಮ ವಿಸ್ತರಣೆಯ ಉದ್ದೇಶ
ಕೆರೆಬಿಯನ್‌ನಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸುವ ಹಾಗೂ 130 ದೇಶಗಳಿಗೆ ವೀಸಾ ರಹಿತವಾಗಿ ಪ್ರಯಾಣಿಸಬಹುದಾದ ಸೌಲಭ್ಯಕ್ಕಾಗಿ ಆಂಟಿಗುವಾದ ಪೌರತ್ವವನ್ನು ಬಯಸಿ ಅರ್ಜಿ ಸಲ್ಲಿಸಿದ್ದಾಗಿ ಚೋಕ್ಸಿ ಹೇಳಿದ್ದಾರೆ.

ಹೂಡಿಕೆ ಯೋಜನೆಯ ಪೌರತ್ವದ ಸೌಲಭ್ಯದ ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಚೋಕ್ಸಿ ಆಂಟಿಗುವಾದ ಪೌರತ್ವ ಪಡೆದ ಬಳಿಕ ಜನವರಿ 29ರಂದು ಸಿಬಿಐ ಚೋಕ್ಸಿ ಹಾಗೂ ನೀರವ್ ಮೋದಿ ವಿರುದ್ಧ ತನಿಖೆ ಆರಂಭಿಸಿತ್ತು.

English summary
Punjab National Bank scam accused, Nirav Modi's uncle Mehul Choksi was granted citizenship of Antigua.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X