ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೋಕ್ಸಿ ವಿರುದ್ಧ ಯಾವ ಆರೋಪವೂ ಇಲ್ಲ ಎಂದಿದ್ದ ಭಾರತ

|
Google Oneindia Kannada News

ನವದೆಹಲಿ, ಆಗಸ್ಟ್ 3: ಪಂಜಾಬ್ ನ್ಯಾಷನಲ್ ಬ್ಯಾಂಕುಗಳಿ ಸಾವಿರಾರು ಕೋಟಿ ರೂ ವಂಚಿಸಿ ಪರಾರಿಯಾದ ಆರೋಪ ಎದುರಿಸುತ್ತಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಪೌರತ್ವ ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ಭಾರತ ಸರ್ಕಾರವೇ ಕಳೆದ ವರ್ಷ ಹೇಳಿತ್ತು ಎಂದು ಆಂಟಿಗುವಾ ತಿಳಿಸಿದೆ.

ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಗುರುತಿಸಲಾಗಿರುವ ಚೋಕ್ಸಿ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ ಎಂದು ಭಾರತ ಸರ್ಕಾರದ ಸಂಸ್ಥೆಗಳು ಮಾಹಿತಿ ನೀಡಿದ್ದರಿಂದ ಆತನನ್ನು ಆಂಟಿಗುವಾ ಪೌರತ್ವ ಪಡೆಯಲು ಯೋಗ್ಯ ಮತ್ತು ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿದ್ದಾಗಿ ಅಲ್ಲಿನ ಸರ್ಕಾರ ತಿಳಿಸಿದೆ.

ಚೋಕ್ಸಿ ಬಂಧಿಸಲು ಆಂಟಿಗುವಾ ಸರ್ಕಾರಕ್ಕೆ ಭಾರತದ ಕೋರಿಕೆಚೋಕ್ಸಿ ಬಂಧಿಸಲು ಆಂಟಿಗುವಾ ಸರ್ಕಾರಕ್ಕೆ ಭಾರತದ ಕೋರಿಕೆ

ಭಾರತ ಸರ್ಕಾರದಿಂದ ಪೊಲೀಸ್ ಪ್ರಮಾಣಪತ್ರ, ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಬಂದ ಪ್ರಮಾಣಪತ್ರಗಳು ಮೆಹುಲ್ ಚೋಕ್ಸಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಅವರಿಗೆ ಪೌರತ್ವ ನೀಡಲು ಅಡ್ಡಿಯಿಲ್ಲ ಎಂದು ತಿಳಿಸಿದ್ದವು.

pnb fraud india gave all clearance to mehul choksi antigua

ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ವಶಕ್ಕೆ ಪಡೆದುಕೊಳ್ಳುವಂತೆ ಮತ್ತು ಆತನ ಚಲನವಲನಗಳ ಮೇಲೆ ನಿಯಂತ್ರಣ ಇರಿಸುವಂತೆ ಭಾರತವು ಆಂಟಿಗುವಾ ಮತ್ತು ಬರ್ಬುಡಾ ಸರ್ಕಾರವನ್ನು ಕೋರಿತ್ತು.

ಪಿಎನ್‌ಬಿ ವಂಚನೆ ಆರೋಪಿ ಚೋಕ್ಸಿ ಆಂಟಿಗುವಾದಲ್ಲಿ ಸೆಟ್ಲ್!ಪಿಎನ್‌ಬಿ ವಂಚನೆ ಆರೋಪಿ ಚೋಕ್ಸಿ ಆಂಟಿಗುವಾದಲ್ಲಿ ಸೆಟ್ಲ್!

ದೇಶದೊಳಗೆ ಚೋಕ್ಸಿ ಇರುವುದನ್ನು ಖಚಿತಪಡಿಸುವಂತೆ, ಆತನನ್ನು ವಶಕ್ಕೆ ಪಡೆದುಕೊಂಡು ಭೂ, ವೈಮಾನಿಕ ಅಥವಾ ಸಾಗರ ಮಾರ್ಗಗಳಲ್ಲಿ ಆತ ಪ್ರಯಾಣಿಸದಂತೆ ತಡೆಯೊಡ್ಡಲು ಸಹಕರಿಸುವಂತೆ ಕೋರಿತ್ತು.

English summary
Antigua government on Friday said Indian government agencies gave clearance certificates on Mehul Choksi as there was no adverse information against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X