ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್, ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

By ದೀಪಿಕಾ
|
Google Oneindia Kannada News

ಮುಂಬೈ, ಏಪ್ರಿಲ್ 8: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿಗಳಾದ ಆಭರಣ ವಿನ್ಯಾಸಗಾರ ನೀರವ್ ಮೋದಿ ಮತ್ತು ಅವರ ಸಂಬಂಧಿ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಸಿಬಿಐ ಮನವಿ ಮೇರೆಗೆ ಭಾನುವಾರ ನ್ಯಾಯಾಲಯ ಈ ವಾರಂಟ್ ಹೊರಡಿಸಿದೆ. ಈ ಹಿಂದೆ ಜಾರಿ ನಿರ್ದೇಶನಾಲಯ ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಈ ಇಬ್ಬರಿಗೂ ಸಮನ್ಸ್ ನೀಡಿತ್ತು. ಆದರೆ ಬೇರೆ ಬೇರೆ ಕಾರಣ ನೀಡಿ ವಿಚಾರಣೆಗ ಹಾಜರಾಗಲು ಸಾಧ್ಯವಿಲ್ಲ ಎಂದು ಇಬ್ಬರೂ ಹೇಳಿದ್ದರು.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 13,000 ಕೋಟಿ ರೂಪಾಯಿಯ ಬೃಹತ್ ಹಗರಣ ನಡೆದ ನಂತರ ಹಲವು ತನಿಖಾ ಸಂಸ್ಥೆಗಳು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ತನಿಖೆ ನಡೆಸುತ್ತಿವೆ. 'ನೀರವ್ ಮೋದಿ' ಬ್ರ್ಯಾಂಡ್ ನಲ್ಲಿ ಕಂಪನಿಗಳನ್ನು ಹೊಂದಿದ್ದ ಮೋದಿ ಮತ್ತು ಗೀತಾಂಜಲಿ ಜೆಮ್ಸ್ ನ ಮೆಹುಲ್ ಚೋಕ್ಸಿ ಅಕ್ರಮವಾಗಿ ಸಾಲ ಪಡೆದು ಅವುಗಳನ್ನು ಮರುಪಾವತಿ ಮಾಡದೆ ಪರಾರಿಯಾಗಿದ್ದರು.

PNB fraud: Court issues non-bailable warrants against Nirav Modi, Mehul Choksi

ಈ ಸಂಬಂಧ ಪತ್ರ ಬರೆದಿದ್ದ ಚೋಕ್ಸಿ ತನ್ನ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿರುವುದರಿಂದ ಮತ್ತು ಅನಾರೋಗ್ಯದಿಂದ ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.

ನೀರವ್ ಮೋದಿ ಆಸ್ತಿಯನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯನೀರವ್ ಮೋದಿ ಆಸ್ತಿಯನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

English summary
A special CBI court on Sunday issued non bailable warrant against billionaire jewellers Nirav Modi and Mehul Choksi in the cases related to Punjab National Bank scam. The warrants were issued after request by the Central Bureau of Investigation (CBI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X