ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕರಣ ದಾಖಲಾದ ಬಳಿಕವೂ ಹಣ ವರ್ಗಾವಣೆ ಮಾಡಿದ್ದ ನೀರವ್ ಮೋದಿ

|
Google Oneindia Kannada News

ನವದೆಹಲಿ, ಏಪ್ರಿಲ್ 5: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾದ ಕೆಲವು ತಿಂಗಳ ಬಳಿಕವೂ ದೇಶಭ್ರಷ್ಟ ವಜ್ರ ಉದ್ಯಮಿ ನೀರವ್ ಮೋದಿ ಸಿಂಗಪುರದಿಂದ ಸ್ವಿಟ್ಜರ್ಲೆಂಡ್‌ಗೆ 89 ಕೋಟಿ ರೂಪಾಯಿ ವರ್ಗಾಯಿಸಿಕೊಂಡಿದ್ದ ಎಂಬುದು ಬೆಳಕಿಗೆ ಬಂದಿದೆ.

ಇದಲ್ಲದೆ, ಆತ ಭಾರತೀಯ ಸಂಸ್ಥೆಗಳಿಂದ ತನಿಖೆಗೆ ಒಳಪಡುವ ಸಂದರ್ಭದಲ್ಲಿಯೇ ಸಹಾಯಕರ ಮೂಲಕ ದುಬೈ ಮತ್ತು ಹಾಂಕಾಂಗ್‌ಗಳಲ್ಲಿರುವ ತನ್ನ ಸಂಸ್ಥೆಗಳಿಂದ 66 ಕೋಟಿ ಮೌಲ್ಯದ ವಜ್ರ, 6 ಕೋಟಿ ನಗದು, 150 ಬಾಕ್ಸ್‌ಗಳಷ್ಟು ಮುತ್ತು ಮತ್ತು 50 ಕೆಜಿ ಚಿನ್ನವನ್ನು ಬೇರೆಡೆಗೆ ಸಾಗಿಸಿದ್ದ ಎಂದೂ ಮೂಲಗಳು ತಿಳಿಸಿವೆ.

ನೀರವ್ ಮೋದಿಯ ಐಶಾರಾಮಿ ಕಾರುಗಳ ಹರಾಜು, ಟೆಸ್ಟ್ ಡ್ರೈವ್ ಮಾಡುವಂತಿಲ್ಲ ನೀರವ್ ಮೋದಿಯ ಐಶಾರಾಮಿ ಕಾರುಗಳ ಹರಾಜು, ಟೆಸ್ಟ್ ಡ್ರೈವ್ ಮಾಡುವಂತಿಲ್ಲ

ನೀರವ್ ಮೋದಿಯು ತನ್ನ ಸಹೋದರಿ ಪೂರ್ವಿ ಮೋದಿ ಮೂಲಕ ನಡೆಸುತ್ತಿರುವ ಬೆಲ್ವೆಡೆರೆ ಹೋಲ್ಡಿಂಗ್ ಸಮೂಹ ಸಂಸ್ಥೆಯ ಸಿಂಗಪುರ ಬ್ಯಾಂಕ್ ಖಾತೆಯಿಂದ ಎರಡು ಹಂತಗಳಲ್ಲಿ ಜೂರಿಕ್‌ನಲ್ಲಿರುವ ಇಎಫ್‌ಜಿ ಬ್ಯಾಂಕ್ ಖಾತೆಗೆ 89 ಕೋಟಿ ರೂ. ವರ್ಗಾಯಿಸಿಕೊಂಡಿದ್ದ. ತನಿಖಾ ಸಂಸ್ಥೆಗಳು ತನ್ನ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ತಪ್ಪಿಸಲು ಆತ ಈ ಕ್ರಮ ಅನುಸರಿಸಿದ್ದ ಎನ್ನಲಾಗಿದೆ.

PNB case Nirav Modi moved Rs 89 crore from Singapore to Switzerland

ನೀರವ್ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್ ಕೋರ್ಟ್‌ ನೀರವ್ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್ ಕೋರ್ಟ್‌

ಮೋದಿಯ ಫೈರ್‌ಸ್ಟಾರ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿ ಸುಭಾಷ್ ಪರಬ್ ಈಗ ಈಜಿಪ್ಟ್‌ನಲ್ಲಿದ್ದಾನೆ ಎನ್ನುವುದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಿವೆ. ನೀರವ್ ಜತೆಗೆ ಪರಬ್ ವಿರುದ್ಧವೂ ಜುಲೈ 2018ರಂದು ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು.

English summary
Punjab National Bank (PNB) fraud case: Fugitive diamond jewller Nirav Modi allegedly moved Rs 89 crore from Singapore bank account from to EFG Bank AG, Zurich in Switzerland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X