• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹವಾಮಾನ ಬದಲಾವಣೆಗೆ ವೇದದಲ್ಲಿ ಪರಿಹಾರ : ಮೋದಿ

By Prasad
|

ನವದೆಹಲಿ, ಮಾರ್ಚ್ 11 : ಇಡೀ ಜಗತ್ತಿಗೆ ಪ್ರಾಣ ನೀಡುವ ಸೂರ್ಯ ಇಡೀ ವಿಶ್ವದ ಆತ್ಮವಿದ್ದಂತೆ ಎಂದು ನಮ್ಮ ವೇದಗಳಲ್ಲಿ ಹೇಳಲಾಗಿದೆ. ಈಗ, ಹವಾಮಾನ ಬದಲಾವಣೆಯ ಸಮಸ್ಯೆಯ ಪರಿಹಾರಕ್ಕೆ ವೇದಗಳ ಸಹಾಯ ಪಡೆಯಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ವೇದಗಳಲ್ಲಿರುವ ಶಕ್ತಿಯನ್ನು ಪ್ರಚುರಪಡಿಸಿದ್ದಾರೆ.

ಸೌರಶಕ್ತಿಯ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ನವದೆಹಲಿಯಲ್ಲಿ ಭಾನುವಾರ ಆಯೋಜಿಸಿರುವ ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ ನ ಮೊದಲ ಅಂತಾರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿವರು, ಹವಾಮಾನ ಬದಲಾವಣೆ ಸಮಸ್ಯೆಗೆ ನಾವು ವೇದಗಳತ್ತ ನೋಡಬೇಕು ಎಂದರು.

ನವದೆಹಲಿಯಲ್ಲಿ ಫ್ರೆಂಚ್ ಅಧ್ಯಕ್ಷ ಮತ್ತು ಪ್ರಧಾನಿ ಮೋದಿ ಭೇಟಿ

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದಿರುವ ಈ ಸಮಾವೇಶದಲ್ಲಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಎಮಾನ್ಯುಯೆಲ್ ಮಾರ್ಕೋನ್, ಮತ್ತಿತರ 23 ರಾಷ್ಟ್ರಗಳ ನಾಯಕರು ಭಾಗವಹಿಸಿದ್ದಾರೆ. ಮೋದಿಯವರು ಮಾಡಿದ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

* 2022ರೊಳಗೆ ನವೀಕರಿಸಬಹುದಾದ ಮೂಲಗಳಿಂದ 175 ಗೀಗಾವ್ಯಾಟ್ಸ್ ನಷ್ಟು ವಿದ್ಯುತ್ ಅನ್ನು ಭಾರತ ಉತ್ಪಾದಿಸಲಿದೆ. ಇದರಲ್ಲಿ 100 ಗಿಗಾವ್ಯಾಟ್ಸ್ ನಷ್ಟು ವಿದ್ಯುತ್ ಸೌರಶಕ್ತಿಯಿಂದ ಉತ್ಪಾದನೆಯಾಗಲಿದೆ.

* ಇಡೀ ದೇಶದಾದ್ಯಂತ ವಿತರಿಸಲಾಗಿರುವ 28 ಕೋಟಿ ಎಲ್ಇಡಿ ಬಲ್ಬ್ ಗಳಿಂದಾಗಿ ನಾವು 2 ಬಿಲಿಯನ್ ಹಣವನ್ನು, 4 ಗಿಗಾವ್ಯಾಟ್ಸ್ ನಷ್ಟು ವಿದ್ಯುತ್ ಅನ್ನು ಉಳಿಸಿದ್ದೇವೆ.

* ಸೌರಶಕ್ತಿಯ ಬಳಕೆಯಿಂದ ದೇಶದ ಅಭಿವೃದ್ಧಿ ಮಾತ್ರ ಆಗುವುದಿಲ್ಲ, ಜೊತೆಗೆ ಧರೆಯ ಮೇಲೆ ಕಾರ್ಬನ್ ಕಾರ್ಬನ್ ಫುಟ್ ಪ್ರಿಂಟ್ ಗಳನ್ನು ಕೂಡ ಕಡಿಮೆ ಮಾಡಬಹುದಾಗಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

* ಇದಕ್ಕಾಗಿ ಅತ್ಯುತ್ತಮ ಮತ್ತು ಭರಿಸಬಹುದಾದ ಸೌರ ತಂತ್ರಜ್ಞಾನ ನಮಗೆ ಸಿಗಬೇಕು. ಇತರ ಶಕ್ತಿಗಳೊಂದಿಗೆ ಸೌರಶಕ್ತಿಯನ್ನೂ ಬೆರೆಸಿದರೆ, ಪರಿಣಾಮ ಇನ್ನೂ ಉತ್ತಮವಾಗಿರುತ್ತದೆ.

* ಕೃಷಿ, ಸೋಲಾರ್ ವಾಟರ್ ಪಂಪ್ಸ್ ಮುಂತಾದ ಕ್ಷೇತ್ರಗಳಲ್ಲಿ ಸೌರಶಕ್ತಿಯನ್ನ ಅತ್ಯಂತ ಸಮರ್ಥವಾಗಿ ಬಳಸಬಹುದು. ಸೌರಶಕ್ತಿಯ ಬಳಕೆ ಇನ್ನೂ ಹೆಚ್ಚಬೇಕಿದ್ದರೆ, ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಲು ಉತ್ತೇಜನ ನೀಡಬೇಕು.

* ನಾವು ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬಗಿದಿಟ್ಟು, ಮಾನವರ ಒಳಿತಿಗಾಗಿ ಒಂದೇ ಕುಟುಂಬದಂತೆ ಸೌರಶಕ್ತಿಯ ಬಳಕೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ನಮ್ಮ ಗುರಿಯನ್ನು ಮುಟ್ಟಲು ವೃತ್ತಿಪರತೆ ಮೆರೆಯಬೇಕು.

English summary
Prime Minister Narendra Modi suggested looking back to the Vedas in a bid to combat climate change. He was speaking at the Founding Conference of the International Solar Alliance at Rashtrapati Bhawan in New Delhi. He said, Veda considers Sun as soul of the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more