ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ ಮುಗಿಯುವವರೆಗೂ ಶಸ್ತ್ರಾಸ್ತ್ರ ಕೆಳಗಿಳಿಸಬೇಡಿ: ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 22: ಯುದ್ಧ ಮುಗಿಯುವವರೆಗೂ ಶಸ್ತ್ರಾಸ್ತ್ರವನ್ನು ಕೆಳಗಿಳಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ ಇದುವರೆಗೆ 100 ಕೋಟಿ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.

ದೇಶದ ಜನತೆ ಎಚ್ಚರಿಕೆಯಿಂದಿರಬೇಕು, ನಾವು ಧರಿಸಿರುವ ಕವಚ ಎಷ್ಟೇ ಉತ್ತಮವಾಗಿದ್ದರೂ, ಆಧುನಿಕವಾಗಿದ್ದರೂ, ಯುದ್ಧ ಮುಗಿಯುವವರೆಗೆ ಶಸ್ತ್ರಾಸ್ತ್ರ ಕೆಳಗಿಳಿಸಬಾರದು. ಹೇಗೆ ಪ್ರತಿನಿತ್ಯ ಚಪ್ಪಲಿಯನ್ನು ಧರಿಸಿಯೇ ಮನೆಯಿಂದ ಹೊರಡುತ್ತೇವೋ ಹಾಗೆಯೇ ಮಾಸ್ಕ್ ಧರಿಸಿದರೆ ಮನೆಯಿಂದ ಕಾಲಿಡಬೇಡಿ, ಲಸಿಕೆ ಸಿಗದವರು ಲಸಿಕೆ ಪಡೆಯಲು ಪ್ರಯತ್ನಿಸಿ, ಲಸಿಕೆ ಸಿಕ್ಕವರು ಬೇರೆಯವರಿಗೆ ಪ್ರೇರಣೆಯನ್ನು ನೀಡಿ ಎಂದು ಹೇಳಿದರು.

ನಮ್ಮ ದೇಶವು ಒಂದು ಕಡೆ ಕರ್ತವ್ಯದ ಪಾಲನೆ ಮಾಡುತ್ತಿದೆ, ಮತ್ತೊಂದು ಕಡೆ ಸಫಲತೆ ಸಿಕ್ಕಿದೆ, 21 ಅಕ್ಟೋಬರ್ ಅಂದು ಭಾರತವು 100 ಕೋಟಿ ಲಸಿಕೆಯನ್ನು ನೀಡಿ ಅಸಧಾರಣವಾದುದ್ದನ್ನು ಸಾಧಿಸಿ ತೋರಿಸಿದೆ. 130 ಕೋಟಿ ಜನರ ಕರ್ತವ್ಯ ಶಕ್ತಿ ಇದರಲ್ಲಿ ಅಡಕವಾಗಿದೆ ಎಂದು ಹೇಳಿದರು.

PM Says 100 Crore Vaccination Reflect Image Of Our Nation: Highlights In Kannada

100 ಕೊರೊನಾ ಲಸಿಕೆ ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ, ಇತಿಹಾಸದ ಹೊಸ ಅಧ್ಯಾಯದ ರಚನೆಯಾಗಿದೆ, ಕಷ್ಟವಾದುದನ್ನು ಸಾಧಿಸಿ ತೋರಿಸಲಾಗಿದೆ ಇದರಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ನುಡಿದರು.

ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು:

- ಹಲವು ಮಂದಿ ಬೇರೆ ರಾಷ್ಟ್ರಗಳೊಂದಿಗೆ ನಮ್ಮ ರಾಷ್ಟ್ರವನ್ನು ಹೋಲಿಕೆ ಮಾಡುವಂತಾಗಿದೆ.
-100 ಕೋಟಿ ಲಸಿಕೆ ನೀಡಿದ್ದೇವೆ ಎನ್ನುವುದಕ್ಕೂ ಮುನ್ನ, ಲಸಿಕೆಯ ಹುಡುಕಾಟ, ಲಸಿಕೆ ರಿಸರ್ಚ್ ಕಡೆಗೂ ಕಣ್ಣು ಹಾಯಿಸಬೇಕಿದೆ
-ಕೊರೊನಾವನ್ನು ಭಾರತ ಹಿಮ್ಮೆಟ್ಟಿಸಲು ಸಾಧ್ಯವೇ, ಲಸಿಕೆಯನ್ನು ಎಲ್ಲಿಂದ ತರುತ್ತದೆ, ಲಸಿಕೆಯನ್ನು ಆಮದು ಮಾಡಿಕೊಳ್ಳಲು ಎಷ್ಟು ಹಣ ಬೇಕು, ಯಾವಾಗ ಸಿಗುತ್ತೆ, ಲಸಿಕೆ ಸಿಕ್ಕರೂ ಎಲ್ಲರಿಗೂ ಸಿಗುವುದು ಯಾವಾಗ ಹೀಗೆ ಹತ್ತು ಹಲವು ಸವಾಲುಗಳಿದ್ದವು. ಇದೀಗ 100 ಕೋಟಿ ಲಸಿಕೆ ನೀಡಿರುವುದು ಈ ಸವಾಲುಗಳಿಗೆ ನೀಡಿರುವ ಉತ್ತರವಾಗಿದೆ ಎಂದರು.
-100 ಕೋಟಿ ಮಂದಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ. ಭಾರತ ಕೊರೊನಾದಿಂದ ಸುರಕ್ಷಿತವಾಗಿದೆ. ಸಂಪೂರ್ಣ ವಿಶ್ವವೇ ಭಾರತೀಯರ ತಾಕತ್ತನ್ನು ನೋಡುತ್ತಿದೆ.
-ಮತ್ತೊಮ್ಮೆ ಸಬ್‌ಕಾ ಸಾಥ್, ಸಬ್‌ಕಾ ಪ್ರಯಾಸ್, ಸಬಕಾ ವಿಕಾಸ್ ಸಾಬೀತಾಗಿದೆ.

-ಕೊರೊನಾವು ಹೇಗೆ ಬಡವ, ಬಲ್ಲಿದನೆಂಬ ಬೇಧಭಾವವಿಲ್ಲದೆ ಎಲ್ಲರನ್ನೂ ಆಕ್ರಮಿಸಿತ್ತೋ ಹಾಗೆಯೇ ಲಸಿಕೆಯನ್ನು ನೀಡುವಲ್ಲಿ ಕೂಡ ದೇಶ ಬೇಧಭಾವ ಮಾಡಿಲ್ಲ. ವಿಐಪಿ ಕಲ್ಚರ್‌ಗೆ ಆಸ್ಪದ ಕೊಡದೆ ಎಲ್ಲರಿಗೂ ಒಂದೇ ರೀತಿಯ ಲಲಸಿಕೆಯನ್ನು ನೀಡಲಾಗಿದೆ.

- ಬೇರೆ ದೇಶಗಳನ್ನು ಗಮನಿಸುವುದಾದರೆ ಲಸಿಕೆಯನ್ನು ಪಡೆಯಲು ಈಗಲೂ ಜನರು ಮುಂದೆ ಬರುತ್ತಿಲ್ಲ, ಅಂತಹ ಸಂದರ್ಭದಲ್ಲಿ ಭಾರತದಲ್ಲಿ 100 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ ಎನ್ನುವುದು ಹೆಮ್ಮೆಯ ವಿಷಯ ಎಂದರು.

-ಯಾವುದೇ ಅಭಿಯಾನವು ಸಫಲವಾಗಬೇಕೆಂದರೆ, ಎಲ್ಲರ ಪ್ರಯತ್ನ ಸೇರಿಕೊಳ್ಳುತ್ತದೆ, ಪರಿಣಾಮ ಅದ್ಭುತವಾಗಿರುತ್ತದೆ, ನಾವು ಮಹಾಮಾರಿ ಜತೆಗೆ ಹೋರಾಡಲು ದೇಶದ ಜನರ ಒಗ್ಗಟ್ಟು ದೊಡ್ಡ ಶಕ್ತಿ.

- ದೀಪ ಬೆಳಗುವುದರಿಂದ ಕೊರೊನಾ ಹೋಗುತ್ತದೆಯೇ ಎಂದು ಹಲವರು ವ್ಯಂಗ್ಯವಾಡಿದರು, ಆದರೆ ಎಲ್ಲರೂ ಒಗ್ಗಟ್ಟಾಗಿರುವುದರಿಂದ ಕೊರೊನಾ ಸೋಂಕನ್ನು ಕಡಿಮೆ ಂಆಡಲು ಸಾಧ್ಯವಾಗಿದೆ.

-ಭಾರತದಲ್ಲಿರುವ ತಂತ್ರಜ್ಞಾನ ಬೇರೆ ದೇಶಗಳ ಬಳಿಯೂ ಇಲ್ಲ, ಭಾರತ ವಿಜ್ಞಾನದ ಆಧಾರದ ಮೇಲೆ ಕೆಲಸ ಮಾಡುತ್ತಿದೆ. ಹೀಗಾಗಿ ನಾಲ್ಕೂ ದಿಕ್ಕುಗಳು, ನಗರ, ಹಳ್ಳಿಗಳಿಗೆ ಕೊರೊನಾ ಲಸಿಕೆಯನ್ನು ತಲುಪಿಸಲು ನೆರವಾಗಿದೆ.

-ಕೊರೊನಾ ಸೋಂಕಿನ ಸಂದರ್ಭದಲ್ಲಿ ಎಲ್ಲಾ ಉದ್ಯಮಗಳು ಮುಳುಗಿ ಹೋದಾಗ ಕೃಷಿ ಕ್ಷೇತ್ರ ಮಾತ್ರ ದೇಶದವನ್ನು ಗಟ್ಟಿಗೊಳಿಸಿದೆ.

-ಯಾವುದೇ ಸಣ್ಣ ಸಣ್ಣ ವಸ್ತುಗಳೇ ಆಗಿರಲಿ, ನಮ್ಮ ದೇಶದ್ದು ಎನ್ನುವ ಹೆಮ್ಮೆಯಿರಲಿ, ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಹೆಚ್ಚೆಚ್ಚು ಬಳಕೆ ಮಾಡಿ.

-ಹೇಗೆ ಸ್ವಚ್ಛ ಭಾರತ ಅಭಿಯಾನಕ್ಕೆ ನೀವೆಲ್ಲರೂ ಜತೆಯಾಗಿದ್ದೀರೋ ಹಾಗೆಯೇ ಮೇಡ್ ಇನ್ ಇಂಡಿಯಾ ಅಭಿಯಾನವನ್ನು ಕೂಡ ಸಫಲವನ್ನಾಗಿಸಿ.

-ಕಳೆದ ದೀಪಾವಳಿಯಲ್ಲಿ ಭಯ ಇತ್ತು, ಈ ದೀಪಾವಳಿಯಲ್ಲಿ 100 ಕೋಟಿ ಲಸಿಕೆ ಕಾರಣದಿಂದ ವಿಶ್ವಾಸವಿದೆ. ನಮ್ಮ ದೇಶದ ಲಸಿಕೆ ಸುರಕ್ಷೆ ನೀಡಬಹುದು, ದೇಶದ ಉತ್ಪಾದನೆ, ದೇಶದಲ್ಲಿ ನಿರ್ಮಾಣವಾದ ವಸ್ತುಗಳು ಇನ್ನಷ್ಟು ಭವ್ಯವನ್ನಾಗಿಸುತ್ತದೆ.

English summary
PM Modi described India’s vaccination drive as a journey from anxiety to assurance that has made the country emerge stronger, and credited its success to people’s trust in the vaccines despite various efforts to create mistrust and panic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X