ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ ಸೋಲಾರ್ ಉಪಕರಣಗಳ ಆಮದಿನ ಮೇಲೆ ಮೋದಿ ಕೆಂಗಣ್ಣು

|
Google Oneindia Kannada News

ನವದೆಹಲಿ, ಜುಲೈ 10: ಸೌರ ವಿದ್ಯುತ್ ಶಕ್ತಿ ಉಪಕರಣಗಳನ್ನು ಭಾರತದಲ್ಲೇ ಉತ್ಪಾದಿಸುವಂತೆ ಕೈಗಾರಿಕೋದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Recommended Video

Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

ಭಾರತ ಹಾಗೂ ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಚೀನಾದ ಮೇಲಿನ ಎಲ್ಲಾ ರೀತಿಯ ಅವಲಂಬನೆಯಿಂದ ದೂರವಾಗಲು ಭಾರತ ಸರ್ಕಾರ ಒಂದಾದ ಮೇಲೊಂದು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ!ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ!

ಸೋಲಾರ್ ವಿದ್ಯುತ್ ಉಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಹೇರುವ ಬಗ್ಗೆ ಕೇಂದ್ರ ಇಂಧನ ಸಚಿವ ಆರ್‌ಕೆ ಸಿಂಗ್ ಹೇಳಿಕೆ ನೀಡಿರುವ ಬೆನ್ನಲ್ಲೇ ಪ್ರಧಾನಿ ಈ ರೀತಿ ಕರೆ ನೀಡಿದ್ದಾರೆ.

PM Push For Solar Power Days After Centre’s Move On Imports From China

ಇದಲ್ಲದೆ ಚೀನಾವು ಅತಿ ಕಡಿಮೆ ಬೆಲೆಯಲ್ಲಿ ಸೋಲಾರ್ ಉಪಕರಣಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದೆ. ಹೀಗಾಗಿ ಆ ಉಪಕರಣಗಳ ಮೇಲೆ ಅಧಿಕ ಸುಂಕವನ್ನು ವಿಧಿಸುವ ಕುರಿತು ಆರ್‌ಕೆ ಸಿಂಗ್ ಸುಳಿವು ನೀಡಿದ್ದರು. ಇದಕ್ಕೆ ಪೂರಕವಾಗಿ ಮಾತನಾಡಿರುವ ನರೇಂದ್ರ ಮೋದಿ ಸೋಲಾರ್ ಪ್ಯಾನಲ್ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕಿದೆ.

PM Push For Solar Power Days After Centre’s Move On Imports From China

ಸೋಲಾರ್ ಬ್ಯಾಟರಿ , ಪ್ಯಾನೆಲ್ ಹಾಗೂ ಇತರೆ ಉಪಕರಣಗಳನ್ನು ಭಾರತದಲ್ಲೇ ತಯಾರಿಸುವ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ರೇವಾದಲ್ಲಿ 750 ಮೆ.ವ್ಯಾ ಸೌರ ವಿದ್ಯುತ್ ಶಕ್ತಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದದ ಮೂಲಕ ಉದ್ಘಾಟಿಸಿ ಈ ಮಾತನಾಡಿದರು.

English summary
Prime Minister Narendra Modi today highlighted the importance of self-reliance on solar power amid trade tensions with China - a major exporting nation - as he launched a massive 750 megawatt (MW) solar power plant in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X