ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ಮಕ್ಕಳಿಗಾಗಿ 'ಚಾಚಾ' ನರೇಂದ್ರ ಮೋದಿಯಿಂದ ಪುಸ್ತಕ

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 5: 'ಚಾಚಾ' ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವ ಹೆಸರು ಪಂಡಿತ್ ಜವಾಹರ್ ಲಾಲ್ ನೆಹರೂ. ಮಕ್ಕಳ ಮೇಲಿನ ನೆಹರೂ ಪ್ರೀತಿ ಮತ್ತು ಮಕ್ಕಳ ದಿಣಾಚರಣೆಯ ಕಾರಣಕ್ಕೆ ಚಾಚಾ ನೆಹರೂ ಹೆಸರು ಅಚ್ಚಳಿಯದೇ ಉಳಿದಿದೆ. ಇದೀಗ ಅದೇ ಹಾದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ.

ಮಕ್ಕಳಿಗಾಗಿ 'ಎಗ್ಸಾಮ್ ವಾರಿಯರ್ಸ್' ಎಂಬ ಪುಸ್ತಕ ಬರೆದಿರುವ ಪ್ರಧಾನಿ ಮೋದಿ, ಪುಸ್ತಕದಲ್ಲಿ ಮಕ್ಕಳಿಗೆ ಸಹಾಯಕವಾಗುವ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. 'ಪರೀಕ್ಷೆಗಳನ್ನು ಉತ್ಸವಗಳಂತೆ ಸಂಭ್ರಮಿಸಿ' ಎಂದು ಅವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕರೆ ನೀಡಿದ್ದಾರೆ. ಈ ಪುಸ್ತಕ 'ನರೇಂದ್ರ ಮೋದಿ ಆ್ಯಪ್‌'ನಲ್ಲೂ ಲಭ್ಯವಿದೆ.

ಪ್ರಧಾನಿ ಮೋದಿಯವರ ಎಕ್ಸಾಂ ವಾರಿಯರ್ಸ್ ಪುಸ್ತಕ ಇಂದು ಲೋಕಾರ್ಪಣೆಪ್ರಧಾನಿ ಮೋದಿಯವರ ಎಕ್ಸಾಂ ವಾರಿಯರ್ಸ್ ಪುಸ್ತಕ ಇಂದು ಲೋಕಾರ್ಪಣೆ

ಒತ್ತಡಗಳನ್ನು ಹೋಗಲಾಡಿಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದು ಹೇಗೆ ಎಂಬ ಬಗ್ಗೆ ಉಪಾಯಗಳು ಹಾಗೂ ಪೋಷಕರಿಗೆ ಸಲಹೆ ಮತ್ತು ಸೂಚನೆಗಳನ್ನು ಪುಸ್ತಕದಲ್ಲಿ ಮೋದಿ ನೀಡಿದ್ದಾರೆ. ಯೋಗಕ್ಕೆ ಪುಸ್ತಕದಲ್ಲಿಯೂ ಮಹತ್ವ ನೀಡಿರುವ ಪ್ರಧಾನಿ, ಯೋಗಾಸನಗಳು ಹಾಗೂ ಯೋಗದ ಫಲಗಳ ಕುರಿತು ವಿವರಿಸಿದ್ದಾರೆ.

PM Narendra Modi’s book for children

193 ಪುಟುಗಳ, 25 ಮಂತ್ರಗಳಿರುವ ಈ ಪುಸ್ತಕವನ್ನು ಶನಿವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಬಿಡುಗಡೆ ಮಾಡಿದ್ದಾರೆ.

ತಮ್ಮ ಪ್ರತಿ ತಿಂಗಳ ರೇಡಿಯೋ ಕಾರ್ಯಕ್ರಮ 'ಮನ್‌‌ ಕೀ ಬಾತ್‌'ಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳಿಂದ ಉತ್ತೇಜಿತರಾಗಿ ಪ್ರಧಾನಿ ವಿದ್ಯಾರ್ಥಿಗಳಿಗಾಗಿ ಈ ಪುಸ್ತಕ ಬರೆದಿದ್ದಾರಂತೆ.

English summary
'Exam Warriors', a book authored by the prime minister Narendra Modi released on Saturday. The 193-page book offers 25 'mantras', including yoga asanas, to help students face examinations without stress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X