ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋ ಬೈಡನ್, ಕಮಲಾ ಹ್ಯಾರಿಸ್‌ಗೆ ಪ್ರಧಾನಿ ಮೋದಿ ಅಭಿನಂದನೆ

|
Google Oneindia Kannada News

ನವದೆಹಲಿ, ಜನವರಿ 20: ಅಮೆರಿಕದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಶುಭ ಹಾರೈಸಿರುವ ಮೋದಿ, ಜಾಗತಿಕ ಶಾಂತಿ ಮತ್ತು ಭದ್ರತೆಗಾಗಿ ಅಮೆರಿಕದೊಂದಿಗೆ ಭಾರತ ಕೆಲಸ ಮಾಡಲಿದ್ದು, ಉಭಯ ದೇಶಗಳ ಸಹಭಾಗಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಯಸಿರುವುದಾಗಿ ತಿಳಿಸಿದ್ದಾರೆ.

'ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೋ ಬೈಡನ್ ಅವರಿಗೆ ನನ್ನ ಅಭಿನಂದನೆಗಳು. ಭಾರತ-ಅಮೆರಿಕ ಕಾರ್ಯತಂತ್ರ ಸಹಭಾಗಿತ್ವವನ್ನು ಬಲಪಡಿಸಲು ಅವರೊಂದಿಗೆ ಕೆಲಸ ಮಾಡಲು ಕಾಯುತ್ತಿದ್ದೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅಧ್ಯಕ್ಷರಾಗಿ ಜೋ ಬೈಡನ್ ಮೊದಲ ಭಾಷಣದ ಮುಖ್ಯಾಂಶಗಳುಅಧ್ಯಕ್ಷರಾಗಿ ಜೋ ಬೈಡನ್ ಮೊದಲ ಭಾಷಣದ ಮುಖ್ಯಾಂಶಗಳು

'ಜಾಗತಿಕ ಶಾಂತಿ ಮತ್ತು ಭದ್ರತೆಯ ಸುಧಾರಣೆ ಹಾಗೂ ಸಾಮಾನ್ಯ ಸವಾಲುಗಳನ್ನು ಎದುರಿಸುವ ವಿಚಾರದಲ್ಲಿ ನಾವು ಒಗ್ಗಟ್ಟಿನಿಂದ ಇದ್ದು, ಅಮೆರಿಕವನ್ನು ಮುನ್ನಡೆಸುವಲ್ಲಿ ಯಶಸ್ವಿ ಅವಧಿ ನಡೆಸುವಂತೆ ಅವರಿಗೆ ಶುಭ ಹಾರೈಸುತ್ತೇನೆ' ಎಂದು ತಿಳಿಸಿದ್ದಾರೆ.

 PM Narendra Modi Wishes US New President Joe Biden And Vice President Kamala Harris

ಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರ

'ಭಾರತ ಅಮೆರಿಕ ಪಾಲುದಾರಿಕೆಯು ಹಂಚಿಕೆಯಾದ ಮೌಲ್ಯಗಳ ಆಧಾರದಲ್ಲಿದೆ. ನಾವು ಸಮೃದ್ಧ ಮತ್ತು ಬಹುಮುಖಿ ದ್ವಿಪಕ್ಷೀಯ ಕಾರ್ಯಸೂಚಿ, ಬೆಳೆಯುತ್ತಿರುವ ಆರ್ಥಿಕತೆ ಸಂಬಂಧ ಮತ್ತು ಜನರಿಂದ ಜನರ ನಂಟನ್ನು ಹೊಂದಿದ್ದೇವೆ. ಭಾರತ-ಅಮೆರಿಕ ಸಹಭಾಗಿತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಅಧ್ಯಕ್ಷ ಜೋ ಬೈಡನ್ ಅವರ ಜತೆ ಕೆಲಸ ಮಾಡಲು ಬದ್ಧನಾಗಿದ್ದೇನೆ' ಎಂದಿದ್ದಾರೆ.

English summary
PM Narendra Modi wishes US new president Joe Biden and Vice President Kamala Harris after they sworn in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X