ವಾಜಪೇಯಿಗೆ ಜನ್ಮದಿನದ ಶುಭಾಶಯ ಕೋರಿದ ಮೋದಿ

Subscribe to Oneindia Kannada

ನವದೆಹಲಿ, ಡಿಸೆಂಬರ್, 25: ಅಜಾತಶತ್ರು, ಮುತ್ಸದ್ಧಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹುಟ್ಟುಹಬ್ಬದ ಶುಭಾಶಯ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಾಜಪೇಯಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದು, ಅಟಲ್ ಅಚವರ ಕವನವೊಂದನ್ನು ಅಪ್ ಲೋಡ್ ಮಾಡಿದ್ದಾರೆ.

ವಾಜಪೇಯಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಆರೋಗ್ಯ ವಲಯಕ್ಕೆ ಸಂಬಂಧಿಸಿದ 3 ಯೋಜನೆಗಳಿಗೆ ಚಾಲನೆ ಸಹ ನೀಡಲಿದೆ. ಗರ್ಭಿಣಿಯರು, ಕ್ಷಯರೋಗಿಗಳು ಮತ್ತು ತಂಬಾಕು ಚಟ ಹೊಂದಿದವರಿಗೆಂದು ರೂಪಿಸಲಾಗಿರುವ ಈ ಮೂರೂ ಯೋಜನೆಗಳನ್ನು ಮಾಹಿತಿ ತಂತ್ರಜ್ಞಾನದ ಮೂಲಕ ನಿರ್ವಹಣೆ ಮಾಡಲಾಗುತ್ತದೆ.[ರಕ್ಷಣಾ ಕ್ಷೇತ್ರದಲ್ಲಿ ರಷ್ಯಾ ಭಾರತದ ಪಾಲುದಾರ : ಮೋದಿ]

bjp

ಗರ್ಭಿಣಿಯರಿಗೆ ನೆರವು ನೀಡಲು ಕಿಲ್ಕಾರಿ' ಹೆಸರಿನ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಗರ್ಭಿಣಿಯರಿಗೆ ಅವರು ಕಾಲಕಾಲಕ್ಕೆ ಪಡೆಯಬೇಕಾದ ಚಿಕಿತ್ಸೆ, ತಪಾಸಣೆ, ಪೌಷ್ಟಿಕಾಂಶಗಳ ಸೇವನೆ ಕುರಿತು ಫೋನ್‌ ಮೂಲಕವೇ ಮಾಹಿತಿ ನೀಡಲಾಗುವುದು. ಈ ನಿಟ್ಟಿನಲ್ಲಿ ಒಟ್ಟು 72 ಸಂದೇಶಗಳನ್ನು ಸರಕಾರ ಗರ್ಭಿಣಿಯರಿಗೆ ರವಾನಿಸಲಿದೆ.[ಭಾರತದಲ್ಲೇ ಎಕೆ 47 ತಯಾರಿಸಲಾಗುತ್ತದೆ, ಏಕೆ?]

ತಂಬಾಕು ಸೇವನೆಯ ಚಟಕ್ಕೆ ಬಲಿಯಾದವರನ್ನು ಹೊರಕ್ಕೆ ತರಲು ಮಿಸ್ಡ್ ಕಾಳ್ ಯೋಜನೆಯನ್ನು ಜಾರಿ ಮಾಡಲಿದೆ. ವ್ಯಕ್ತಿ ಮಿಸ್ ಕಾಲ್ ನೀಡಿ ಪರಿಹಾರ ಪಡೆದುಕೊಳ್ಳಬಹುದು.

ಕ್ಷಯರೋಗ ತಪಾಸಣಾ ಆಂದೋಲನ ನಡೆಸಲಾಗುವುದು. ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ರೋಗದ ಲಕ್ಷಣ ಕಂಡುಬಂದರೆ ಅವರಿಗೆ ಎಲ್ಲಿ ಚಿಕಿತ್ಸೆ ಪಡೆಯಬೇಕು, ಹೇಗೆ ಪಡೆಯಬೇಕು ಎಂಬುದರ ಕುರಿತು ದೂರವಾಣಿಯಲ್ಲಿ ಮಾಹಿತಿ ನೀಡಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi on Friday extended his warm wishes to Bharatiya Janata Party (BJP) Leader, former prime minister of india Atal Bihari Vajpayee on his 91st birthday. Prime Minister Modi, who is currently in Kabul as part of his official tour, took to Twitter and said that the Atal Bihari Vajpayee always distinguished himself in every role, be it as a party leader, parliamentarian, minister or prime minister.
Please Wait while comments are loading...