ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಕುರಿತು ಎರಡನೇ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಮೇ 12: ಯುಎಸ್ ಅಧ್ಯಕ್ಷ ಜೋ ಬೈಡನ್ ಆಯೋಜಿಸಿರುವ ಕೋವಿಡ್-19 ಕುರಿತು ಎರಡನೇ ಜಾಗತಿಕ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.

ಸಾಂಕ್ರಾಮಿಕ ರೋಗದಿಂದ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಮತ್ತು ಜಾಗತಿಕ ಮಟ್ಟದಲ್ಲಿ ಆರೋಗ್ಯ ಭದ್ರತೆಯನ್ನು ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಹೊಸ ಕ್ರಮಗಳ ಕುರಿತು ಈ ಶೃಂಗಸಭೆಯಲ್ಲಿ ಚರ್ಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದೆ.

Modi, Biden virtual meet; ಉಕ್ರೇನ್ ಬಿಕ್ಕಟ್ಟು ಶೀಘ್ರವೇ ಅಂತ್ಯModi, Biden virtual meet; ಉಕ್ರೇನ್ ಬಿಕ್ಕಟ್ಟು ಶೀಘ್ರವೇ ಅಂತ್ಯ

ಕಳೆದ 2021ರ ಸೆಪ್ಟೆಂಬರ್ 22 ರಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಕೋವಿಡ್-19 ಕುರಿತ ಮೊದಲ ಜಾಗತಿಕ ವರ್ಚುವಲ್ ಶೃಂಗಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.

ಭಾರತದ ಪ್ರಧಾನಿಗೆ ಯುಎಸ್ ಅಧ್ಯಕ್ಷರ ಆಹ್ವಾನ

ಭಾರತದ ಪ್ರಧಾನಿಗೆ ಯುಎಸ್ ಅಧ್ಯಕ್ಷರ ಆಹ್ವಾನ

"ಯುಎಸ್ಎ ಅಧ್ಯಕ್ಷರ ಜೂನಿಯರ್ ಜೋಸೆಫ್ ಆರ್ ಬೈಡೆನ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಮೇ 12ರಂದು ಎರಡನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎರಡನೇ ವರ್ಚುವಲ್ ಸಭೆಯಲ್ಲೂ ಮೋದಿ ಮಾತು

ಎರಡನೇ ವರ್ಚುವಲ್ ಸಭೆಯಲ್ಲೂ ಮೋದಿ ಮಾತು

ಕೋವಿಡ್ ಸಾಂಕ್ರಾಮಿಕದ ನಿರಂತರ ಸವಾಲುಗಳನ್ನು ಎದುರಿಸಲು ಜಾಗತಿಕ ಆರೋಗ್ಯ ಭದ್ರತಾ ವ್ಯವಸ್ಥೆಯನ್ನು ಪ್ರಬಲವಾಗಿ ನಿರ್ಮಿಸಲು ಹೊಸ ಕ್ರಮಗಳನ್ನು ಹೆಚ್ಚಿಸುವ ಸಂಬಂಧ ಶೃಂಗಸಭೆಯಲ್ಲಿ ಚರ್ಚಿಸುವುದಕ್ಕೆ ಉದ್ದೇಶಿಸಿಸಲಾಗಿದೆ. ಶೃಂಗಸಭೆಯ ಆರಂಭಿಕ ಅಧಿವೇಶನದಲ್ಲಿ 'ಸಾಂಕ್ರಾಮಿಕ ಆಯಾಸವನ್ನು ತಡೆಗಟ್ಟುವುದು ಮತ್ತು ಸನ್ನದ್ಧತೆಗೆ ಆದ್ಯತೆ ನೀಡುವುದು' ಎಂಬ ವಿಷಯದ ಕುರಿತು ಪ್ರಧಾನ ಮಂತ್ರಿಗಳು ತಮ್ಮ ಹೇಳಿಕೆಗಳನ್ನು ನೀಡಲಿದ್ದಾರೆ ಎಂದು MEA ಹೇಳಿದೆ.

ಕೊರೊನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತ

ಕೊರೊನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತ

"ಸುರಕ್ಷಿತ ಮತ್ತು ಕೈಗೆಟುಕುವ ಲಸಿಕೆಗಳು, ಔಷಧಿಗಳು, ಪರೀಕ್ಷಿಸಲು ಮತ್ತು ಚಿಕಿತ್ಸೆಗಾಗಿ ಕಡಿಮೆ-ವೆಚ್ಚದ ಸ್ಥಳೀಯ ತಂತ್ರಜ್ಞಾನಗಳ ಅಭಿವೃದ್ಧಿ, ಜಿನೋಮಿಕ್ ಕಣ್ಗಾವಲು ಮತ್ತು ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ನಡೆಯುತ್ತಿರುವ ಜಾಗತಿಕ ಪ್ರಯತ್ನಗಳಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ" ಎಂದು ಸಚಿವಾಲಯ ತಿಳಿಸಿದೆ.

"ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಕೇಂದ್ರದಲ್ಲಿ ಜಾಗತಿಕ ಆರೋಗ್ಯ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಸುಧಾರಿಸುವ ಉದ್ದೇಶದಿಂದ ಭಾರತವು ಬಹುಪಕ್ಷೀಯ ವೇದಿಕೆಗಳಲ್ಲಿ ಪೂರ್ವಭಾವಿಯಾಗಿ ತೊಡಗಿಸಿಕೊಂಡಿದೆ," ಎಂದು ಸಚಿವಾಲಯ ಹೇಳಿದೆ.

ಇತರೆ ರಾಷ್ಟ್ರಗಳಿಂದಲೂ ಶೃಂಗಸಭೆಗೆ ಪ್ರತಿನಿಧಿಗಳು ಹಾಜರು

ಇತರೆ ರಾಷ್ಟ್ರಗಳಿಂದಲೂ ಶೃಂಗಸಭೆಗೆ ಪ್ರತಿನಿಧಿಗಳು ಹಾಜರು

ಕೋವಿಡ್-19 ಕುರಿತಾದ ಜಾಗತಿಕ ಮಟ್ಟದ ಎರಡನೇ ವರ್ಚುವಲ್ ಶೃಂಗಸಭೆಯಲ್ಲಿ CARICOM ನ ಅಧ್ಯಕ್ಷ ಬೆಲೀಜ್‌ನ ಸರ್ಕಾರದ ಮುಖ್ಯಸ್ಥರು, ಆಫ್ರಿಕನ್ ಯೂನಿಯನ್‌ನ ಅಧ್ಯಕ್ಷ ಸೆನೆಗಲ್, G20 ಅಧ್ಯಕ್ಷರಾಗಿ ಇಂಡೋನೇಷ್ಯಾ ಮತ್ತು G7 ನ ಅಧ್ಯಕ್ಷರಾಗಿ ಜರ್ಮನಿ ಭಾಗವಹಿಸುತ್ತಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.

Recommended Video

Delhi Captain ಬಲಿಷ್ಠ ರಾಜಸ್ಥಾನ ತಂಡವನ್ನು ಸೋಲಿಸಿದ್ದು ಹೇಗೆ | Oneindia Kannada

English summary
Prime Minister Narendra Modi will participate in the second global virtual summit on COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X