ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ತನಿಖೆಯಿಂದ ಮೋದಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ: ರಾಹುಲ್

|
Google Oneindia Kannada News

ನವದೆಹಲಿ, ನವೆಂಬರ್ 2: "ರಫೇಲ್ ತನಿಖೆಯಿಂದ ಪ್ರಧಾನಿ ಮೋದಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಬಗ್ಗೆ ನಾನು ಖಾತ್ರಿ ಕೊಡ್ತೀನಿ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

'ದ ವೈರ್' ವೆಬ್ ಸೈಟ್ ಮಾಡಿದ ವರದಿಯನ್ನು ಆಧಾರವಾಗಿ ಇರಿಸಿಕೊಂಡು ಅವರು ಮಾತನಾಡಿದರು. ರಫೇಲ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ನಿಂದ ಅನಿಲ್ ಅಂಬಾನಿ ನೇತೃತ್ವದ ಡಿಫೆನ್ಸ್ ಕಂಪನಿಯಲ್ಲದೆ, ಸದ್ಯಕ್ಕೆ ನಷ್ಟದಲ್ಲಿರುವ, ಶೂನ್ಯ ಆದಾಯದ ಅಂಬಾನಿ ಒಡೆತನದ ಕಂಪನಿಯಲ್ಲಿ ನಲವತ್ತು ಮಿಲಿಯನ್ ಯುರೋ ಹೂಡಿಕೆ ಮಾಡಲಾಗಿದೆ ಎಂದು ವರದಿಯಲ್ಲಿದೆ.

ದೇಶದ ಚೌಕೀದಾರ್ ಕಳ್ಳ ಕಳ್ಳ ಕಳ್ಳ ಎಂದು ಕೂಗಿದ ರಾಹುಲ್ ಗಾಂಧಿದೇಶದ ಚೌಕೀದಾರ್ ಕಳ್ಳ ಕಳ್ಳ ಕಳ್ಳ ಎಂದು ಕೂಗಿದ ರಾಹುಲ್ ಗಾಂಧಿ

ಫ್ರಾನ್ಸ್ ಹಾಗೂ ಭಾರತದಲ್ಲಿ ಸಲ್ಲಿಕೆ ಆಗಿರುವ ಮಾಹಿತಿಯನ್ನು ಆಧರಿಸಿಯೇ ಈ ವರದಿ ಮಾಡಲಾಗಿದೆ. ಡಸಾಲ್ಟ್ ಕಂಪನಿಯ ಹೂಡಿಕೆಯನ್ನು ಅನಿಲ್ ಅಂಬಾನಿ ಗುಂಪಿನ ಕಂಪನಿ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ನ ಲಾಭವನ್ನಾಗಿ ಪರಿವರ್ತಿಸಲಾಗಿದೆ. ಆ ಕಂಪನಿಯ ಷೇರುಗಳನ್ನು ಸಹವರ್ತಿ ಕಂಪನಿಯಾದ ರಿಲಯನ್ಸ್ ಏರ್ ಪೋರ್ಟ್ ಡೆವಲಪರ್ಸ್ ಲಿಮಿಟೆಡ್ ಗೆ ಪ್ರೀಮಿಯಂ ಬೆಲೆಯಲ್ಲಿ ಮಾರಲಾಗಿದೆ.

PM Narendra Modi will not survive an inquiry on Rafale, I guarantee, says Rahul Gandhi

ಪ್ರಧಾನಿ ಮೋದಿ ಜೈಲಿಗೆ ಹೋಗುತ್ತಾರೆ: ಭವಿಷ್ಯ ನುಡಿದ ಸಿದ್ದರಾಮಯ್ಯಪ್ರಧಾನಿ ಮೋದಿ ಜೈಲಿಗೆ ಹೋಗುತ್ತಾರೆ: ಭವಿಷ್ಯ ನುಡಿದ ಸಿದ್ದರಾಮಯ್ಯ

ಡಸಾಲ್ಟ್ ಕಂಪನಿಯ 2017ರ ವಾರ್ಷಿಕ ವರದಿ ಹಾಗೂ 2018ರ ಮಾರ್ಚ್ ನ ರಿಲಯನ್ಸ್ ಇನ್ ಫ್ರಾ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪ ಇದ್ದು, ಈ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿದೆ ಎಂದು ವರದಿ ಮಾಡಲಾಗಿದೆ. ಆದರೆ 'ದ ವೈರ್'ನ ಯಾವುದೇ ಲೇಖನಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಈಗಾಗಲೇ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಹೇಳಿದೆ.

English summary
Flagging a new investigative report on the Rafale jet deal by news portal The Wire, Congress president Rahul Gandhi today said "Prime Minister Narendra Modi won't survive an inquiry on Rafale, I guarantee."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X