ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ಇಂಡಿಯಾ ವರದಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ

By ಡಾ. ಅನಂತ ಕೃಷ್ಣನ್
|
Google Oneindia Kannada News

ಬೆಂಗಳೂರು, ಜೂ. 29: ಪ್ರಧಾನಿ ನರೇಂದ್ರ ಮೋದಿ ಒನ್ ಇಂಡಿಯಾದಲ್ಲಿ ಪ್ರಕಟವಾದ ಬೆಂಗಳೂರು ಬಾಲಕಿಯರ ಸಾಧನೆಯನ್ನು ಟ್ವಿಟ್ ಮಾಡುವ ಮೂಲಕ ಸಾಧಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಹೊರೈಜಾನ್ ಪಬ್ಲಿಕ್ ಶಾಲೆಯ (ಎನ್ ಎಚ್ ಪಿಎಸ್) 5 ಜನ ವಿದ್ಯಾರ್ಥಿನಿಯರು ಅಭಿವೃದ್ಧಿ ಪಡಿಸಿದ ಮೊಬೈಲ್ ಅಪ್ಲಿಕೇಶನ್ ಸಾನ್ ಫ್ರಾನ್ಸಿಸ್ಕೋ ದಲ್ಲಿ ನಡೆದ ಸ್ಪರ್ಧೆಯಲ್ಲಿ 10 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಬಹುಮಾನವನ್ನು ಗೆದ್ದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.[ಬೆಂಗಳೂರು ವಿದ್ಯಾರ್ಥಿನಿಯರ ಜಗಮೆಚ್ಚಿದ ಸಾಧನೆ]

modi

ಸೆಲೆಕ್ಸೋ (Sellixo ) ಹೆಸರಿನ ಅಪ್ಲಿಕೇಶನ್ ಮೂಲಕ ಒಣ ಕಸ ಮಾರಾಟ ಮತ್ತು ಖರೀದಿ ಮಾಡಬಹುದು. ವಿದ್ಯಾರ್ಥಿಗಳು ಮೋದಿ ಅವರ ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ ಮತ್ತು ಸೇವ್ ಗರ್ಲ್ ಚೈಲ್ಡ್ ಅಭಿಯಾನದಿಂದ ಪ್ರೇರೇಪಿತರಾಗಿ ಇಂಥ ಸಂಶೋಧನೆ ಮಾಡಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಿತ್ತು.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಎನ್ ಎಚ್ ಪಿಎಸ್ ಸಂಸ್ಥೆ ಅಧ್ಯಕ್ಷ ಮೋಹನ್ ಮಂಘ್‌ ನಾನಿ, ಮೋದಿ ಟ್ವೀಟ್ ಮಾಡಿದ ನಂತರ ನಮಗೆ ನಿರಂತರ ಕರೆಗಳು ಬರತೊಡಗಿದವು. ವಿದ್ಯಾರ್ಥಿಗಳು ಪ್ರಧಾನಿ ಮೋದಿ ಮತ್ತು ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡುವ ಬಯಕೆಯನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

students

ಸಂಜನಾ ವಸಂತ, ಅನುಪಮ ಎನ್, ಮಹಿಮಾ ಮಹಂದಾಲೆ, ಸ್ವಾತಿ ಪಿ ರಾವ್ ಮತ್ತು ನವ್ಯಶ್ರೀ ಬಿ 64 ದೇಶಗಳ ಸುಮಾರು 400 ತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ ಪಡೆದು ಹಿಂದಿರುಗಿದ್ದರು.

English summary
Barely four days after OneIndia's indepth report on five girl students from Bengaluru turning world-beaters at the Technovation Challenge 2015 held at San Francisco went viral, India's Prime Minister Narendra Modi too have now acknowledged their fete. The mobile app aimed at selling and buying dry waste, was chosen as the best from 400 teams spread across 64 nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X