ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 5ಜಿ ಸೇವೆಗಳ ಬಗ್ಗೆ ಪ್ರಧಾನಿ ಮೋದಿ ಮಾಡಿದ ಉಲ್ಲೇಖಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 1: ಭಾರತದಲ್ಲಿ ಬಹುದಿನಗಳ ಕನಸು ಆಗಿದ್ದ 5G ಸೇವೆಗಳಿಗೆ ಚಾಲನೆ ಸಿಕ್ಕಿದೆ. ನವದೆಹಲಿಯಲ್ಲಿ ನಡೆದ ಟೆಲಿಕಾಂ ಸಮಾರಂಭದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ "ಹೊಸ ಯುಗದ ಉದಯ," ಎಂದು ಬಣ್ಣಿಸಿದ್ದಾರೆ.

ಮೊದಲ ಹಂತದಲ್ಲಿ ಅಹ್ಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.

ಭಾರತೀಯರು ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ಆನಂದಿಸಲು ಇದರಿಂದ ಸಾಧ್ಯವಾಗುತ್ತದೆ. ಆದರೆ, ಸಾಮಾನ್ಯ ಜನರಿಗೆ ಸೇವೆ ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. 2023ರ ವೇಳೆಗೆ 5G ಸೇವೆಗಳು ದೇಶದ ಪ್ರತಿ ಪ್ರದೇಶಕ್ಕೂ ತಲುಪಲಿದೆ ಎಂದು ಹೇಳಲಾಗುತ್ತಿದೆ. 5ಜಿ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಅದರ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಪ್ರಧಾನಿ ಉಲ್ಲೇಖಿಸಿರುವ ಪ್ರಮುಖ ಅಂಶಗಳನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಭಾರತದಲ್ಲಿ 5ಜಿ ಸೇವೆ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖಗಳು:

* 5G ವ್ಯವಸ್ಥೆಯು 130 ಕೋಟಿ ಭಾರತೀಯರಿಗೆ ಟೆಲಿಕಾಂ ಉದ್ಯಮದ ಉಡುಗೊರೆಯಾಗಿದೆ. ಈ ಶೃಂಗಸಭೆಯು ಜಾಗತಿಕವಾಗಿದ್ದರೂ, ಅದರ ಧ್ವನಿಯು ಸ್ಥಳೀಯವಾಗಿದೆ. ನವ ಭಾರತದ ಸಾಮರ್ಥ್ಯಗಳನ್ನು ವೀಕ್ಷಿಸಲು ಇದು ವಿಶೇಷ ದಿನವಾಗಿದೆ.

* ವಿಶ್ವದ ತಾಂತ್ರಿಕ ಕ್ರಾಂತಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ. 5G ಯೊಂದಿಗೆ ಭಾರತವು ಟೆಲಿಕಾಂ ತಂತ್ರಜ್ಞಾನದಲ್ಲಿ ಜಾಗತಿಕ ಗುಣಮಟ್ಟವನ್ನು ಮುನ್ನಡೆಸುತ್ತಿದೆ. 5ಜಿ ಯುವಕರಿಗೆ ಹಲವು ಅವಕಾಶಗಳನ್ನು ತೆರೆಯಲಿದೆ. ಇದು ನಮ್ಮ ವೀಕ್ಷಿತ್ ಭಾರತ್ ದೃಷ್ಟಿಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ.

* ನವ ಭಾರತವು ತಂತ್ರಜ್ಞಾನದ ಗ್ರಾಹಕನಾಗಿ ಉಳಿಯುವುದಲ್ಲದೆ, ದೇಶದ ಬೆಳವಣಿಗೆಗೆ ತಂತ್ರಜ್ಞಾನದ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

* ಡಿಜಿಟಲ್ ಇಂಡಿಯಾ ಕೇವಲ ಒಂದು ಉಪಕ್ರಮವಲ್ಲ, ಹೊಸ ಭಾರತದ ದೃಷ್ಟಿಕೋನವನ್ನು ಸಾಧಿಸಲು ನಮ್ಮನ್ನು ಪ್ರೇರೇಪಿಸುವ ದೃಷ್ಟಿಯಾಗಿದೆ. ಡಿಜಿಟಲ್ ಇಂಡಿಯಾ ಮೂಲಕ ನಾವು ಸಮಗ್ರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಬಹುದು.

PM Narendra Modi Top 10 Quotes about 5G system in india; highlights

* ಡಿಜಿಟಲ್ ಇಂಡಿಯಾದ ಯಶಸ್ಸು ನಾಲ್ಕು ಸ್ತಂಭಗಳನ್ನು ಆಧರಿಸಿದೆ: ಸಾಧನದ ವೆಚ್ಚ, ಡಿಜಿಟಲ್ ಸಂಪರ್ಕ, ಡೇಟಾ ವೆಚ್ಚಗಳು ಮತ್ತು ಡಿಜಿಟಲ್ ಮೊದಲ ವಿಧಾನ.

* ನಾವು ಆತ್ಮನಿರ್ಭರ್ ಆದಾಗ ಮಾತ್ರ ಎಲೆಕ್ಟ್ರಾನಿಕ್ಸ್ ಬೆಲೆಗಳು ಕಡಿಮೆಯಾಗುತ್ತವೆ. 2014ರಲ್ಲಿ, ಕೇವಲ ಎರಡು ಮೊಬೈಲ್ ಉತ್ಪಾದನಾ ಸೌಲಭ್ಯಗಳು ಇದ್ದವು, ಇಂದು ಆ ಸಂಖ್ಯೆಯು 200 ಉತ್ಪಾದನಾ ಸೌಲಭ್ಯಗಳಿಗೆ ಏರಿದೆ. ಇಂದು ನ್ಯೂ ಇಂಡಿಯಾವು ವಿಶ್ವದಲ್ಲಿ ಮೊಬೈಲ್ ಫೋನ್‌ಗಳ ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ.

* ಸಂಪರ್ಕವು ಸಂವಹನ ಕ್ಷೇತ್ರದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದೆ. 2014ರಲ್ಲಿ ಬ್ರಾಡ್‌ಬ್ಯಾಂಡ್ ಬಳಕೆದಾರರು ಆರು ಕೋಟಿಯಷ್ಟಿದ್ದರೆ, ಇಂದು ಅದು 80 ಕೋಟಿಗೂ ಹೆಚ್ಚಾಗಿದೆ.

* ಭಾರತದ ಡಿಜಿಟಲ್ ದೃಷ್ಟಿಯು ಗ್ರಾಮೀಣ ಸಂಪರ್ಕದ ಮೇಲೆ ಹೆಚ್ಚಿನ ಲಕ್ಷ್ಯವನ್ನು ವಹಿಸುತ್ತದೆ. ಆಪ್ಟಿಕಲ್ ಫೈಬರ್ ಸಂಪರ್ಕವನ್ನು ಹೊಂದಿರುವ 100 ಗ್ರಾಮ ಪಂಚಾಯತ್‌ಗಳ ಸಂಖ್ಯೆಯನ್ನು ನಾವು ಈಗ 170,000ಕ್ಕೆ ಹೆಚ್ಚಿಸಿದ್ದೇವೆ. ನಾವು ಭಾರತದಲ್ಲಿ ಕೇವಲ ಗಣ್ಯರಿಂದ ತಳಮಟ್ಟದವರೆಗೆ ಡಿಜಿಟಲ್ ಸಂಪರ್ಕವನ್ನು ತೆಗೆದುಕೊಂಡಿದ್ದೇವೆ ಮತ್ತು ಇದು ದೇಶದಲ್ಲಿ ನಾವೀನ್ಯತೆಗೆ ಉತ್ತೇಜನ ನೀಡಿದೆ.

* ಡಿಜಿಟಲ್-ಮೊದಲ ವಿಧಾನದೊಂದಿಗೆ ನಾವು ಆನ್‌ಲೈನ್ ಪಾವತಿಗಳಂತಹ ನಾಗರಿಕ-ಕೇಂದ್ರಿತ ಸೇವೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದೇವೆ. ಡಿಜಿಟಲ್ ಇಂಡಿಯಾ ಪ್ರತಿಯೊಬ್ಬ ನಾಗರಿಕರಿಗೂ ಮಾರುಕಟ್ಟೆಯನ್ನು ನೀಡಿದೆ. ಚಿಕ್ಕ ಬೀದಿ ವ್ಯಾಪಾರಿ ಕೂಡ UPI ಸೌಲಭ್ಯವನ್ನು ಬಳಸುತ್ತಿದ್ದಾರೆ.

* ಭಾರತದಲ್ಲಿ ಈ ಮೊದಲು 1GB ಡೇಟಾದ ಬೆಲೆ ಸುಮಾರು 300 ರೂಪಾಯಿ ಆಗಿತ್ತು, ಇಂದು ಅದು 10 ರೂಪಾಯಿ ಆಸುಪಾಸಿನಲ್ಲಿದೆ. ತಂತ್ರಜ್ಞಾನ ಮತ್ತು ಟೆಲಿಕಾಂನಲ್ಲಿನ ಬೆಳವಣಿಗೆಗಳೊಂದಿಗೆ ಭಾರತವು ಉದ್ಯಮ 4.0 ಕ್ರಾಂತಿಯನ್ನು ಮುನ್ನಡೆಸುತ್ತದೆ ಎಂಬ ಅಂಶಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ.

English summary
PM Narendra Modi Top 10 Quotes about 5G system in india; highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X