ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಬ್ರಿಟಿಶ್ ಶೋ 'Man vs Wild' ನಲ್ಲಿ ಪ್ರಧಾನಿ ಮೋದಿ

|
Google Oneindia Kannada News

Recommended Video

Man vs Wild : ಡಿಸ್ಕವರಿ ಚಾನೆಲ್‌ನ Man Vs Wild ಸರಣಿಯಲ್ಲಿ ಪ್ರಧಾನಿ ಮೋದಿ

ನವದೆಹಲಿ, ಜುಲೈ 29: ಖ್ಯಾತ ಬ್ರಿಟಿಶ್ ಟಿವಿ ಶೋ 'ಮ್ಯಾನ್ ಅಂಡ್ ವೈಲ್ಡ್' ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನುಡಿಚಿತ್ರ ಅನಾವರಣಗೊಳ್ಳಲಿದೆ.

ರಾಜಕಾರಣವನ್ನು ಹೊರತುಪಡಿಸಿ, ನರೇಂದ್ರ ಮೋದಿ ಅವರಿಗಿರುವ ವನ್ಯ ಜಗತ್ತಿನ ಮೇಲಿನ ಪ್ರೀತಿ, ಕಾಳಜಿ, ಜ್ಞಾನ ಮತ್ತು ಸಂರಕ್ಷಣೆಯ ಕಳಕಳಿಯ ಕುರಿತು ಈ ಕಾರ್ಯಕ್ರಮದಲ್ಲಿ ಪರಿಚಯಿಸಲಾಗುತ್ತದೆ.

ಭಾರತದಲ್ಲಿರುವ ಹುಲಿಗಳ ಗಣತಿ ಲೆಕ್ಕ ಪ್ರಕಟಿಸಿದ ಪ್ರಧಾನಿ ಮೋದಿಭಾರತದಲ್ಲಿರುವ ಹುಲಿಗಳ ಗಣತಿ ಲೆಕ್ಕ ಪ್ರಕಟಿಸಿದ ಪ್ರಧಾನಿ ಮೋದಿ

ಬೇರ್ ಗ್ರಿಲ್ಸ್ ಎಂಬ ಖ್ಯಾತ ಬರಹಗಾರ, ಸಾಹಸಿ, ವನ್ಯಪ್ರೇಮಿ ನಡೆಸುತ್ತಿರುವ 'ಮ್ಯಾನ್ ಅಂಡ್ ವೈಲ್ಡ್' ಕಾರ್ಯಕ್ರಮದಲ್ಲಿ ಆಗಸ್ಟ್ 12 ರಂದು ಸಂಜೆ 9 ಗಂಟೆಗೆ ನರೇಂದ್ರ ಮೋದಿ ಅವರ ಎಪಿಸೋಡ್ ಪ್ರಸಾರವಾಗಲಿದೆ.

PM Narendra Modi to feature in Man and Wild show by Bear Grylls

"180 ರಾಷ್ಟ್ರದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಅಪರಿಚಿತ ಆಯಾಮವನ್ನು ನೋಡಲಿದ್ದಾರೆ. ಭಾರತೀಯ ವನ್ಯಜಗತ್ತು ಮತ್ತು ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಬಗ್ಗೆ ಅವರಿಗಿರುವ ಕಳಕಳಿಯನ್ನು ನಾವು ತೋರಿಸಲಿದ್ದೇವೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇದು ಚಿತ್ರೀಕರಣಗೊಳ್ಳಲಿದೆ" ಎಂದು ಬೇರ್ ಗ್ರಿಲ್ಸ್ ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.

ಈ ಶೋ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ನಾನು ಎಷ್ಟೋ ವರ್ಷಗಳ ಕಾಲ ನಿಸರ್ಗದ ಮಡಿಲಲ್ಲೇ ಬದುಕಿದ್ದೆ. ಬೆಟ್ಟ, ಕಾಡುಗಳಲ್ಲಿ ವಾಸವಿದ್ದೆ. ಈ ಅವಧಿಯೇ ನನ್ನ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಆದ್ದರಿಂದ ರಾಜಕಾರಣದ ಆಚೆಯ ಬದುಕಿನ ಬಗ್ಗೆ ಕಾರ್ಯಕ್ರಮವೊಂದನ್ನು ನೀಡಬೇಕು ಎಂದಾಗ, ಅದರಲ್ಲೂ ಪ್ರಕೃತಿಯ ನಡುವಲ್ಲಿ ಎಂದಾಗ ಮರುಮಾತನಾಡದೆ ನಾನು ಸಂತಸದಿಂದ ಒಪ್ಪಿಕೊಂಡೆ" ಎಂದರು.

ನರೇಂದ್ರ ಮೋದಿ ಸನ್ಯಾಸಿಯಾಗದೆ, ಪ್ರಧಾನಿಯಾಗಿದ್ದು ಹೇಗೆ?ನರೇಂದ್ರ ಮೋದಿ ಸನ್ಯಾಸಿಯಾಗದೆ, ಪ್ರಧಾನಿಯಾಗಿದ್ದು ಹೇಗೆ?

"ಭಾರತದ ಶ್ರೀಮಂತ ಪರಿಸರ ಪರಂಪರೆಯನ್ನು, ಪರಿಸರ ರಕ್ಷಣೆಯ ಬಗೆಗಿನ ಕಾಳಜಿ ಹೆಚ್ಚಬೇಕಾದ ಅಗತ್ಯವನ್ನೂ, ಮನುಷ್ಯ ಪ್ರಕೃತಿಯ ಜೊತೆಗೇ ಸಮನ್ವಯದಿಂದ ಸಾಗುವುದು ಹೇಗೆ ಎಂಬುದನ್ನೂ ಈ ಶೋ ಜಗತ್ತಿಗೆ ತೋರಿಸುಸವ ಪ್ರಯತ್ನ ಮಾಡಿದೆ. ಮತ್ತೊಮ್ಮೆ ಕಾಡಿನಲ್ಲಿ ಕಾಲ ಕಳೆದಿದ್ದು ಮಹತ್ವದ ಅನುಭವ, ಅದು ಅಲ್ಲದೆ ನಿಸರ್ಗವನ್ನು ಅತ್ಯುತ್ಸಾಹ ಮತ್ತು ಕುತೂಹಲದಿಂದ ಸುತ್ತುವ ಬೇರ್ ಅವರದೊಂದಿಗೆ ಎಂಬುದು ಮತ್ತಷ್ಟು ಖುಷಿ ಕೊಡುವ ವಿಚಾರ" ಎಂದು ಮೋದಿ ಹೇಳಿದರು.

ಮೋದಿಗೆ ಪ್ರಿಯವಾದ ಹಣ್ಣು ಯಾವುದು ಗೊತ್ತಾ?ಮೋದಿಗೆ ಪ್ರಿಯವಾದ ಹಣ್ಣು ಯಾವುದು ಗೊತ್ತಾ?

ಪುಲ್ವಾಮಾ ಘಟನೆ ಸಮಯದಲ್ಲಿ ಶೂಟಿಂಗ್

ಈ ಕಾರ್ಯಕ್ರಮದ ಶೂಟಿಂಗ್ ನಡೆದಿದ್ದು ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದ ಸಂದರ್ಭದಲ್ಲಿ. ಅಂದರೆ 2019 ರ ಫೆಬ್ರವರಿಯಲ್ಲಿ. ಆ ಸಮಯದಲ್ಲಿ ಮೋದಿ ಉತ್ತರಾಖಂಡ್ ನ ಪ್ರವಾಸದಲ್ಲಿದ್ದರು. ಈ ಬಗ್ಗೆ ಟೀಕಿಸಿದ್ದ ವಿಪಕ್ಷಗಳು, 'ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದು ನಲವತ್ತಕ್ಕೂ ಹೆಚ್ಚು ಉಗ್ರರು ಹುತಾತ್ಮರಾಗಿರುವಾಗ ಪ್ರಧಾನಿ ಮೋದಿ ತಮಗೆ ಪ್ರಚಾರ ನೀಡುವಂಥ ಕಾರ್ಯಕ್ರಮವೊಂದರ ಶೂಟಿಂಗಿಗೆ ತೆರಳಿದ್ದಾರೆ' ಎಂದು ಲೇವಡಿ ಮಾಡಿದ್ದವು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್, ಅವರು ಆಫಿಶಿಯಲ್ ಟೂರ್ ನಲ್ಲಿದ್ದಾರೆ. ಹುಲಿ ಸಂರಕ್ಷಣೆ ಕುರಿತ ಕಾರ್ಯಕ್ರಮವೊಂದರ ಶೂಟಿಂಗ್ ನಲ್ಲಿ ಅವರಿದ್ದಾರೆ" ಎಂದು ಸಮಜಾಯಿಷಿ ನೀಡಿದ್ದರು.

ಅಮ್ಮನಿಂದ ಅಕ್ಷಯ್ ಕುಮಾರ್ ಸಂಸಾರದ ತನಕ ಮೋದಿ ಸೊಗಸಾದ ಮಾತುಅಮ್ಮನಿಂದ ಅಕ್ಷಯ್ ಕುಮಾರ್ ಸಂಸಾರದ ತನಕ ಮೋದಿ ಸೊಗಸಾದ ಮಾತು

ಬೇರ್ ಗ್ರಿಲ್ಸ್ ಅವರ 'ಮ್ಯಾನ್ ಅಂಡ್ ವೈಲ್ಡ್' ಕಾರ್ಯಕ್ರಮ ಸಾಕಷ್ಟು ಪ್ರಖ್ಯಾತಿ ಹೊಂದಿದ್ದು, ಹಿಂದೊಮ್ಮೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನೂ ಅವರ ವನ್ಯ ಜೀವಿ ಕಾಳಜಿಯನ್ನೂ ಅವರು ತಮ್ಮ ಕಾರ್ಯಕ್ರಮದ ಮೂಲಕ ಪರಿಚಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
PM Narendra Modi will feature with Bear Grylls in his popular British show, 'Man vs Wild'. The show will be telecasted on August 12 at 9 pm, on the Discovery channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X