ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್.20: ಭಾರತದಲ್ಲಿ ಎದುರಾಗಿರುವ ಸಾಲು ಸಾಲು ಹಬ್ಬಗಳ ನಡುವೆ ಕೊರೊನಾವೈರಸ್ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ದೇಶದ ಪ್ರಜೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನನ್ನ ನೆಚ್ಚಿನ ದೇಶವಾಸಿಗಳೇ ನಮಸ್ಕಾರ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಜನತಾ ಕರ್ಫ್ಯೂ ಇಂದ ಹಿಡಿದು ಇಲ್ಲಿಯ ತನಕ ಬಂದು ನಿಂತಿದ್ದೇವೆ ಎಂದರು.

ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಾವಿನ ಪ್ರಮಾಣವೂ ಕಡಿಮೆಯಾಗಿದ್ದು, ಇಂಥ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಬೇಕಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

PM Narendra Modi Speech Today Highlights in Kannada

ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶ:

- ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಸಹ ಹದಗೆಟ್ಟಿದೆ. ಲಾಕ್ ಡೌನ್ ಮುಗಿದಿದೆ ಎಂದರೆ ವೈರಸ್ ಹೋಗಿದೆ ಎಂದು ಅರ್ಥವಲ್ಲ. ವೈರಸ್ ಹೋಗಿದೆ ಎಂದು ಅರ್ಥವಲ್ಲ.

ಹಬ್ಬದ ಸಂದರ್ಭದ ವಿಡಿಯೋಗಳನ್ನು ನಾವು ನೋಡುತ್ತಿದ್ದೇವೆ. ಜನರು ಕೊರೊನಾವೈರಸ್ ಬಗ್ಗೆ ಮರೆತಿದ್ದಾರೆ. ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಇದರಿಂದ ನಿಮ್ಮ ಕುಟುಂಬವನ್ನು ನೀವು ಅಪಾಯಕ್ಕೆ ದೂಡುತ್ತಿದ್ದೀರಿ.

- ವ್ಯಾಕ್ಸಿನ್ ಬರುವ ತನಕ ಕೋವಿಡ್ ಹೋಗಿದೆ ಎಂದು ಅಂದುಕೊಳ್ಳಬೇಡಿ. ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅಪಾಯ ಉಂಟು ಮಾಡು ಮಾಡುತ್ತದೆ.

ಹಲವು ದೇಶಗಳು ವ್ಯಾಕ್ಸಿನ್ ಕಂಡುಹಿಡಿಯಲು ಪ್ರಯತ್ನ ನಡೆಸಿವೆ. ಭಾರತದಲ್ಲಿ ಸಹ ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕೆಲವು ಸಂಶೋಧನೆ ಉತ್ತಮ ಹಂತದಲ್ಲಿದೆ. ಕೆಲವು ಮೂಲ ಹಂತದಲ್ಲಿದೆ.

- ಲಸಿಕೆ ಬಂದಾಗ ಅದನ್ನು ಪ್ರತಿ ಭಾರತೀಯನ ಬಳಿ ತಲುಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಔಷಧ ಸಿಗುವ ತನಕ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಪದೇ-ಕೈ ತೊಳೆಯುವುದನ್ನು ಮರೆಯಬೇಡಿ

- ಹಬ್ಬದ ಸಂದರ್ಭದಲ್ಲಿ ಕೋವಿಡ್ ಬಗ್ಗೆ ಜಾಗೃತವಾಗಿರಿ ಎಂದು ಹೇಳಿದ ಮೋದಿ ದೇಶದ ಎಲ್ಲಾ ಜನರಿಗೆ ನವರಾತ್ರಿ, ಈದ್ ಮಿಲಾದ್, ದೀಪಾವಳಿ ಶುಭಾಶಯ ಕೋರಿದರು.

- ಅಮೆರಿಕ, ಬ್ರೆಜಿಲ್‌ಗೆ ಹೋಲಿಕೆ ಮಾಡಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಆದರೆ, ನಾವು ಮೈಮರೆತರೆ ಅಪಾಯವನ್ನು ಎದುರಿಸಬೇಕಾಗುತ್ತದೆ. ದೇಶದಲ್ಲಿ ಮರಣ ಪ್ರಮಾಣ 10 ಲಕ್ಷಕ್ಕೆ 83ರಷ್ಟಿದೆ.

- ಕೋವಿಡ್ ಸೋಂಕಿತರಿಗೆ ಸಿಕಿತ್ಸೆ ನೀಡಲು ದೇಶದಲ್ಲಿ 90 ಸಾವಿರ ಹಾಸಿಗೆಗಳು ಲಭ್ಯವಿದೆ. 12 ಸಾವಿರ ಕ್ವಾರಂಟೈನ್ ಕೇಂದ್ರಗಳಿವೆ ಎಂದು ತಿಳಿಸಿದರು.

English summary
PM Modi Speech Today. Check Out The PM Narendra Modi Address To Nation Today Highlights In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X